Muscle Building: ಸುಪುಷ್ಟ ದೇಹ ಸಸ್ಯಾಹಾರಿಗಳಿಗೂ ಸಾಧ್ಯ

By Suvarna News  |  First Published May 4, 2022, 4:45 PM IST

Muscle Building Tips in Kannada: ಸಿಕ್ಸ್‌ ಪ್ಯಾಕ್‌ ಬಾಡಿ ಹೊಂದಬೇಕೆನ್ನುವುದು ಎಲ್ಲ ಯುವಜನರ ಕನಸು. ಆದರೆ, ಅದಕ್ಕಾಗಿ ಪ್ರೊಟೀನ್‌ ಪೌಡರ್‌, ಎನರ್ಜಿ ಡ್ರಿಂಕ್‌ ಮುಂತಾದವುಗಳ ಮೊರೆ ಹೋಗಬೇಕೆಂದಿಲ್ಲ. ಅಲ್ಲದೆ, ಹಲವು ಸಸ್ಯಾಹಾರದಿಂದಲೂ ಉತ್ತಮ ದೇಹ ಸದೃಢತೆ ಹೊಂದಲು ಸಾಧ್ಯ. 


ಮಾಂಸಖಂಡಗಳನ್ನು (Muscle) ಬೆಳೆಸಿಕೊಳ್ಳಬೇಕು, ಸುಪುಷ್ಟ ದೇಹ ಹೊಂದಬೇಕು, ಸಿಕ್ಸ್‌ ಪ್ಯಾಕ್‌, ಏಯ್ಟ್‌ ಪ್ಯಾಕ್‌ ಸದೃಢತೆ (Strenth) ತಮ್ಮದಾಗಬೇಕು ಎಂದು ಕನಸು ಕಾಣುವ ಯುವಕರು ಹೆಚ್ಚು. ಇದಕ್ಕಾಗಿ ಅವರು ಜಿಮ್‌ (Gym) ಗಳ ಮೊರೆ ಹೋಗುತ್ತಾರೆ. ಎಲ್ಲಕ್ಕಿಂತ ಅಪಾಯಕಾರಿಯಾಗಿ ಎನರ್ಜಿ ಡ್ರಿಂಕ್‌ (Energy Drink) ಸೇವನೆ ಮಾಡುತ್ತಾರೆ. ಪ್ರೊಟೀನ್‌ ಪೌಡರ್‌, ಅದೂ ಇದೂ ಎಂದು ದೇಹ ಬೆಳೆಸಿಕೊಳ್ಳುತ್ತಾರೆ. ಆದರೆ, ಅಷ್ಟೇ ಅಪಾಯವನ್ನೂ ಎದುರಿಸುತ್ತಾರೆ. ಯಾವುದೇ ಅಪಾಯವಿಲ್ಲದೆ ದೇಹವನ್ನೂ ಬೆಳೆಸಿಕೊಳ್ಳಬೇಕು, ಮಾಂಸಖಂಡಗಳೂ ಸದೃಢವಾಗಬೇಕು, ದಷ್ಟಪುಷ್ಟ ದೇಹ ನಿಮ್ಮದಾಗಬೇಕು ಎಂದರೆ ಕೆಲವು ಮಾರ್ಗೋಪಾಯಗಳನ್ನು ಅನುಸರಿಸಬೇಕು. 

ನಿಮಗೆ ಗೊತ್ತಿರಲಿ, ಅಂತರ್ಜಾಲದಲ್ಲಿ ಅತಿ ಹೆಚ್ಚು ಸರ್ಚ್‌ ಮಾಡುವ ವಿಷಯಗಳಲ್ಲಿ ಮಾಂಸಖಂಡಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಎನ್ನುವುದೂ ಸೇರಿದೆ! ಅಂದರೆ ನಮ್ಮ ಯುವಜನರಲ್ಲಿ ಈ ಕುರಿತಾಗಿರುವ ಕ್ರೇಜ್‌ ಅನ್ನು ಊಹಿಸಬಹುದು. ಕ್ರೀಡಾಪಟುಗಳಿಗೆ (Athletes) ಮಾಂಸಖಂಡಗಳಿಗೆ ಹಾನಿಯಾಗದಂತೆ, ಮೂಳೆಗಳಿಗೆ ಧಕ್ಕೆಯಾಗದಂತೆ ವಿಶೇಷ ತರಬೇತಿ ನೀಡಲಾಗುತ್ತದೆ. ಆದರೆ, ಅಂತಹ ತರಬೇತಿ (Training) ಎಲ್ಲರಿಗೂ ಲಭ್ಯವಾಗಲು ಸಾಧ್ಯವಿಲ್ಲ. ಹೀಗಾಗಿ, ಬೇರೆ ಸುಲಭದ ಮಾರ್ಗ ಕಂಡುಕೊಳ್ಳುವುದು ಉತ್ತಮ. ಜಿಮ್‌ ತರಬೇತಿ, ನಿಯಮಿತ ವರ್ಕೌಟ್‌ ಜತೆಗೆ ಆಹಾರವೂ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಇದಕ್ಕಾಗಿ ಯಾವ್ಯಾವುದೋ ಪೌಡರ್‌ ಮೊರೆ ಹೋಗುವುದು ಸಲ್ಲದು. ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಮಾಂಸಖಂಡಗಳನ್ನು ಚೆನ್ನಾಗಿ ಬೆಳೆಸಿಕೊಳ್ಳಲು ಸಾಧ್ಯ.

Tap to resize

Latest Videos

ಮಾಂಸಖಂಡಗಳ ಬೆಳವಣಿಗೆ ಹಾಗೂ ಸದೃಢತೆಗೆ ಸಾಕಷ್ಟು ಪ್ರಮಾಣದಲ್ಲಿ ದೇಹಕ್ಕೆ ಪ್ರೋಟೀನ್‌ (Protein) ಬೇಕಾಗುತ್ತದೆ. ಇದಕ್ಕಾಗಿ ಜಿಮ್‌ ಗಳಲ್ಲಿ ಪ್ರೊಟೀನ್‌ ಪೌಡರ್‌ ಕೂಡ ನೀಡಲಾಗುತ್ತದೆ. ಆದರೆ, ಆಹಾರದಲ್ಲೇ ಪ್ರೊಟೀನ್‌ ಹೆಚ್ಚು ಪ್ರಮಾಣದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುವುದು ಉತ್ತಮ. ಅಂತಹ ಕೆಲವು ಆಹಾರಗಳ ಬಗ್ಗೆ ತಿಳಿದುಕೊಳ್ಳಿ.

•    ಬೀಟ್‌ ರೂಟ್‌ (Beetroot)
ಕೆಲವು ಅಧ್ಯಯನದ ಪ್ರಕಾರ, ಬೀಟ್‌ ರೂಟ್‌ ಸೇವನೆಯಿಂದ ನಿಮ್ಮ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಬೀಟ್‌ ರೂಟ್‌ ಜ್ಯೂಸ್‌ ಸೇವನೆ ಮಾಡಿದರೆ ಮಾಂಸಖಂಡಗಳ ಕಡೆಗೆ ರಕ್ತದ ಹರಿವು ಉತ್ತಮವಾಗುತ್ತದೆ. ಬೇಯಿಸಿದ ಬೀಟ್‌ ಕೂಡ ಇದೇ ರೀತಿಯ ಪರಿಣಾಮ ಬೀರುತ್ತದೆ. ಕ್ರೀಡಾಪಟುಗಳು ಹಾಗೂ ಓಟಗಾರರಿಗೆ ಬೀಟ್‌ ರೂಟ್‌ ಅತ್ಯುತ್ತಮ. ಉತ್ತಮ ಪ್ರಮಾಣದಲ್ಲಿ ನೈಟ್ರೇಟ್‌ ಹೊಂದಿರುವ ಬೀಟ್‌ ರೂಟ್‌ ರಕ್ತದ ಒತ್ತಡವನ್ನು ಕಡಿಮೆ ಮಾಡುವಲ್ಲಿಯೂ ಗಮನಾರ್ಹ ಕೊಡುಗೆ ನೀಡುತ್ತದೆ. 

•    ಬಸಳೆ (Spinach)
ಈ ಹಸಿರು ಸೊಪ್ಪಿನಲ್ಲಿ ಎಲ್ಲವೂ ಇದೆ. ಮ್ಯಾಗ್ನೆಸಿಯಂ ಅನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಬಸಳೆ ಸೊಪ್ಪು ಮಾಂಸಖಂಡಗಳ ಬೆಳವಣಿಗೆ ಹಾಗೂ ಶಕ್ತಿ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕಬ್ಬಿಣಾಂಶವೂ ಇದರಲ್ಲಿ ಉತ್ತಮ ಮಟ್ಟದಲ್ಲಿರುತ್ತದೆ. ಹೀಗಾಗಿ, ಸದೃಢ ದೇಹ ಹೊಂದಬೇಕು ಎನ್ನುವ ಆಸೆಯುಳ್ಳವರು ಇದನ್ನು ಸೇವಿಸಲೇಬೇಕು.

ಇದನ್ನೂ ಓದಿ: Summer Tips : ರೋಗದಿಂದ ದೂರವಿರ್ಬೇಕೆಂದ್ರೆ ಪ್ರತಿ ದಿನ ಮಾವು ತಿನ್ನಿ

•    ಅಣಬೆ (Mashroom)
ಅಣಬೆಯಲ್ಲಿ ಹಲವು ವಿಧಗಳಿವೆ. ಇವುಗಳಲ್ಲಿ ಒಂದು ವಿಧದ ಅಣಬೆಯಲ್ಲಿ ವಿಟಮಿನ್‌ ಡಿ (Vitamin D) ಅಂಶ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ತಜ್ಞರ ಪ್ರಕಾರ, ವಿಟಮಿನ್‌ ಡಿ ಮಾಂಸಖಂಡಗಳ ಸಂವರ್ಧನೆಗೆ ಅತ್ಯಗತ್ಯ. ಮಾಂಸಖಂಡಗಳನ್ನು ಬಲಪಡಿಸಲು ವಿಟಮಿನ್‌ ಡಿ ಅಂಶ ಬಹುಮುಖ್ಯ ಕೊಡುಗೆ ನೀಡುತ್ತದೆ. ಒಂದು ಕಪ್‌ ಅಣಬೆ ಸೇವಿಸಲು ಸಾಮಾನ್ಯವಾಗಿ ಸಲಹೆ ನೀಡಲಾಗುತ್ತದೆ. 

ಇದನ್ನೂ ಓದಿ: ಮೂತ್ರದ ಸೋಂಕು ಕಾಡುತ್ತಿದೆಯೇ? ಮಾನಸಿಕ ಸಮಸ್ಯೆಯೇ ಇದಕ್ಕೆ ಕಾರಣ

•    ಸೋಯಾ, ಆಲೂ, ಮೆಣಸು (Soya, Potato, Pepper)
ಮಾಂಸಖಂಡಗಳ ಬೆಳವಣಿಗೆ ಹಾಗೂ ಸದೃಢತೆಗೆ ಸೇವಿಸಬೇಕಾದ ಆಹಾರದ ಪೈಕಿ ಮುಖ್ಯವಾಗಿ ಮೂರು ಆಹಾರ ಪದಾರ್ಥಗಳನ್ನು  ಹೆಸರಿಸಬಹುದು. ಅವು, ಸೋಯಾಬೀನ್‌, ಮೆಣಸು ಕಾಳು ಹಾಗೂ ಸಿಹಿ ಆಲೂಗಡ್ಡೆ. ಮೆಣಸು ಕೂಡ ಈ ಲಿಸ್ಟಿನಲ್ಲಿರುವುದು ಅಚ್ಚರಿ ಎನಿಸಬಹುದು. ಇದರಲ್ಲಿ ವಿಟಮಿನ್‌ ಸಿ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಅಲ್ಲದೆ, ಇದರಲ್ಲಿರುವ ಕೆಲವು ಅಂಶ ಕೊಬ್ಬನ್ನು ಕರಗಿಸಲು ಉಪಯುಕ್ತ. ಆಲೂಗಡ್ಡೆಯಲ್ಲಿರುವ ನಾರು (Fibre) ಹಾಗೂ ಇತರೆ ಅಂಶಗಳು ಮಾಂಸಖಂಡಗಳಿಗೆ ಸಹಕಾರಿ.

click me!