ಕೊರೋನಾ ಔಷಧ ಭಾರತದಲ್ಲಿ ಡಿಸೆಂಬರ್ ಆರಂಭದಲ್ಲಿಯೇ ಲಭ್ಯ | ತುರ್ತು ದೃಢೀಕರಣ ಸಿಕ್ಕಿದಲ್ಲಿ ಇದು ಸಾಧ್ಯ
ನವದೆಹಲಿ(ಅ.29): ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಅಸ್ಟ್ರಾ ಝೆನೇಕಾ ಅಭಿವೃದ್ಧಿಪಡಿಸಿದ ಕೊರೋನಾ ಔಷಧ ಭಾರತದಲ್ಲಿ ಡಿಸೆಂಬರ್ ಆರಂಭದಲ್ಲಿಯೇ ಲಭ್ಯವಾಗಲಿದೆ.
ತುರ್ತು ದೃಢೀಕರಣ ಸಿಕ್ಕಿದಲ್ಲಿ ಇದು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ತುರ್ತು ದೃಢೀಕರಣ ಸಿಗದಿದ್ದರೂ ಭಾರತದಲ್ಲಿ ಜನವರಿ ಕೊನೆಗೆ ಔಷಧಿ ಭಾರತದಲ್ಲಿ ಲಭ್ಯವಾಗಲಿದೆ.
ಕೊರೋನಾದಿಂದ ಚೇತರಿಸಿಕೊಳ್ಳುತ್ತಿದ್ದ ಮಾಜಿ ಸಿಎಂ ನಿಧನ
ಭಾರತದ ಸೆರಂ ಸಿಸ್ಟಂ ಕೂಡಾ ಔಷಧಿ ಅಭಿವೃದ್ಧಿಪಡಿಸುತ್ತಿದ್ದು, 100 ಮಿಲಿಯನ್ ಡೋಸ್‌ನಷ್ಟು ಔಷಧ 2021ರ ಎರಡು ಅಥವಾ ಮೂರನೇ ಹಂತದಲ್ಲಿ ಜನರಿಗೆ ಸಿಗಲಿದೆ ಎಂದು ಪುಣೆ ಮೂಲದ ಕಂಪನಿಯ ಮುಖ್ಯಸ್ಥ ಅಡರ್ ಪೂನವಲ್ಲ ತಿಳಿಸಿದ್ದಾರೆ. ನಮಗೆ ತುರ್ತು ಪರವಾನಗಿ ಕೇಳದಿದ್ದರೆ, ನಮ್ಮ ಪ್ರಯೋಗ ಡಿಸೆಂಬರ್‌ಗೆ ಮುಕ್ತಾಯವಾಗಬೇಕಿದೆ. ಹೀಗಾದರೆ ಜನವರಿಯಲ್ಲಿ ಲಾಂಚ್ ಮಾಡಬಹುದಾಗಿದೆ.
ನಿನ್ನೆಯಷ್ಟೇ ಗೃಹ ಸಚಿವೆ ಸ್ಮೃತಿ ಇರಾನಿ ಅವರಿಗೆ ಕೊರೋನಾ ದೃಢಪಟ್ಟಿತ್ತು. ಗೃಹ ಸಚಿವ ಅಮಿತ್ ಶಾ, ಸಾರಿಗೆ ಸಚಿವ ನಿತಿನಗ ಗಡ್ಕರಿ, ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೂ ಕೊರೋನಾ ಪಾಟಿಸಿವ್ ಕಂಡು ಬಂದಿತ್ತು. ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಬುಧವಾರ 80 ಲಕ್ಷ ತಲುಪಿದೆ. 43,893 ಹೊಸ ಪ್ರಕರಣಗಳು ದಾಖಲಾಗಿತ್ತು.