Solar Eclipse: ಈ ವರ್ಷದ ಕೊನೇ ಸೂರ್ಯಗ್ರಹಣದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳಿವು

By Suvarna News  |  First Published Nov 30, 2021, 3:35 PM IST

ಅತಿ ದೀರ್ಘವಾದ ಹಾಗೂ ಈ ವರ್ಷ ಕೊನೆಯ ಸೂರ್ಯಗ್ರಹಣ

ಡಿ.4ರಂದು ಸಂಭವಿಸಲಿದೆ ಈ ಸೂರ್ಯಗ್ರಹಣ

ಕೆಲವು ವಿಚಾರಗಳನ್ನು ನೀವು ತಿಳಿದುಕೊಳ್ಳಲೇಬೇಕು


ಪ್ರಪಂಚವು 500 ವರ್ಷಗಳಲ್ಲೇ ದೀರ್ಘವಾದ ಭಾಗಶಃ ಚಂದ್ರಗ್ರಹಣಕ್ಕೆ (Lunar Eclipse) ಸಾಕ್ಷಿಯಾದ ಕೆಲವೇ ದಿನಗಳ ನಂತರ, ಖಗೋಳ ವೀಕ್ಷಕರು ಮತ್ತೊಂದು ಆಗಸದಲ್ಲಿ ಸಂಭವಿಸುವ ಮತ್ತೊಂದು ಕೌತುಕಭರಿತ ಘಟನೆಗೆ ಸಾಕ್ಷಿಯಾಗಲಿದ್ದಾರೆ. ವರ್ಷದ ಕೊನೆಯ ಸೂರ್ಯಗ್ರಹಣವು (Soalr Eclipse) ಡಿಸೆಂಬರ್ 4ರಂದು ನಡೆಯುತ್ತದೆ ಮತ್ತು ಪ್ರಪಂಚದ ಹಲವಾರು ಭಾಗಗಳಲ್ಲಿ ಗೋಚರಿಸುತ್ತದೆ.

ಡಿಸೆಂಬರ್ 4ರ ಘಟನೆ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಚಲಿಸುವಾಗ ಉಂಟಾಗುವ ಸಂಪೂರ್ಣ ಸೂರ್ಯಗ್ರಹಣ. ಭೂಮಿಯ (Earth) ಮೇಲೆ ನೆರಳು ಬೀಳುತ್ತದೆ. ಕೆಲವು ಪ್ರದೇಶಗಳಲ್ಲಿ ಸೂರ್ಯನ (Sun) ಬೆLku ಸಂಪೂರ್ಣವಾಗಿ ಅಥವಾ ಭಾಗಶಃ ನಿರ್ಬಂಧಿಸುತ್ತದೆ. ದಕ್ಷಿಣ ಗೋಳಾರ್ಧದಲ್ಲಿ ವಾಸಿಸುವ ಜನರು ಚಂದ್ರನ (Moon) ನೆರಳಿನ ಮಧ್ಯದಲ್ಲಿ ಇರುವವರ ಈ ಕೌತುಕವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಏತನ್ಮಧ್ಯೆ, ಅಂಟಾರ್ಕ್ಟಿಕಾದಲ್ಲಿ ಈ ಸೂರ್ಯಗ್ರಹಣ ಸಂಪೂರ್ಣವಾಗಿ ಗೋಚರಿಸಲಿದೆ. ಹೀಗಾಗುವ ಏಕೈಕ ದೇಶವಾಗಲಿದೆ.         

Tap to resize

Latest Videos

undefined

ಸಂಪೂರ್ಣ ಸೂರ್ಯಗ್ರಹಣ ಎಂದರೇನು?
ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಚಲಿಸುವಾಗ, ಭೂಮಿಯ ಮೇಲೆ ಚಂದ್ರನ ನೆರಳು ಬೀಸಿದಾಗ, ಕೆಲವು ಪ್ರದೇಶಗಳಲ್ಲಿ ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಿರ್ಬಂಧಿಸಿದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯ, ಚಂದ್ರ ಮತ್ತು ಭೂಮಿ ಏಕರೇಖೆಯಲ್ಲಿ ಜೋಡಿಸಿದಾಗ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಸಂಪೂರ್ಣ ಸೂರ್ಯಗ್ರಹಣದ ರೇಖೆಯಲ್ಲಿರುವ ಜನರು ಸೂರ್ಯನ ಹೊರಾವರಣವನ್ನು ನೋಡಬಹುದು. ಇದನ್ನು ಕರೋನಾ ಎನ್ನುತ್ತಾರೆ. ಇದು ಸೂರ್ಯನ ಹೊರಗಿನ ವಾತಾವರಣ. ಇದು ಸಾಮಾನ್ಯವಾಗಿ ಯಾವಾಗಲೂ ಸೂರ್ಯನ ಪ್ರಕಾಶಮಾನವಾದ ಮುಖದಿಂದಾಗಿ ಅಸ್ಪಷ್ಟವಾಗಿರುತ್ತದೆ.

ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಕರು ತಮ್ಮ ಗ್ರಹಣ ಕನ್ನಡಕವಿಲ್ಲದೆ ವೀಕ್ಷಿಸಬಹುದಾದ ಏಕೈಕ ರೀತಿಯ ಸೂರ್ಯಗ್ರಹಣವಾಗಿದೆ. ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಅಡ್ಡಗಟ್ಟಿದಾಗ ನೇರ ಕಣ್ಣಿನಿಂದಲೇ ಈ ವಿದ್ಯಮಾನವನ್ನು ವೀಕ್ಷಿಸಬಹುದು. ಸಂಪೂರ್ಣ ಗ್ರಹಣವು, ಸೂರ್ಯನನ್ನು ಸಂಪೂರ್ಣವಾಗಿ ಚಂದ್ರ ಅಡ್ಡಗಟ್ಟಿದಾಗ, ನಿಮ್ಮ ಸ್ಥಳವನ್ನು ಅವಲಂಬಿಸಿ ಕೆಲವು ನಿಮಿಷಗಳವರೆಗೆ ಇರುತ್ತದೆ.

ಸಂಪೂರ್ಣ ಸೂರ್ಯಗ್ರಹಣ ಎಲ್ಲಿ ನೋಡಲಾಗುತ್ತದೆ?

ಡಿಸೆಂಬರ್ 4ರ ಸಂಪೂರ್ಣ ಸೂರ್ಯಗ್ರಹಣವು ಬೆಳಗ್ಗೆ 10:59ಕ್ಕೆ ಪ್ರಾರಂಭವಾಗುತ್ತದೆ ಮತ್ತು ಪೂರ್ಣ ಗ್ರಹಣವು 12:30 ಗಂಟೆಗೆ ಗೋಚರಿಸುತ್ತದೆ. ಗರಿಷ್ಠ ಗ್ರಹಣವು ಮಧ್ಯಾಹ್ನ 01:03ಕ್ಕೆ ಗೋಚರಿಸುತ್ತದೆ ಮತ್ತು ಘಟನೆ 3:07ಕ್ಕೆ ಕೊನೆಗೊಳ್ಳುತ್ತದೆ. ದಕ್ಷಿಣ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದ ಭಾಗಗಳಲ್ಲಿ ಗ್ರಹಣವು ಗೋಚರಿಸುತ್ತದೆ.

ನಾಸಾ ಪ್ರಕಾರ, ಸೇಂಟ್ ಹೆಲೆನಾ, ನಮೀಬಿಯಾ, ಲೆಸೊಥೊ, ದಕ್ಷಿಣ ಆಫ್ರಿಕಾ, ದಕ್ಷಿಣ ಜಾರ್ಜಿಯಾ ಮತ್ತು ಸ್ಯಾಂಡ್‌ವಿಚ್ ದ್ವೀಪಗಳು, ಕ್ರೋಜೆಟ್ ದ್ವೀಪಗಳು, ಫಾಕ್‌ಲ್ಯಾಂಡ್ ದ್ವೀಪಗಳು, ಚಿಲಿ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಭಾಗಗಳಲ್ಲಿನ ವೀಕ್ಷಕರು ಡಿಸೆಂಬರ್ 4ರಂದು ಭಾಗಶಃ ಸೂರ್ಯಗ್ರಹಣವನ್ನು ನೋಡುತ್ತಾರೆ. ಈ ಸ್ಥಳಗಳಲ್ಲಿ, ಸೂರ್ಯೋದಯ ಅಥವಾ ಸೂರ್ಯಾಸ್ತದ ಮೊದಲು ಮತ್ತು ನಂತರ ಗ್ರಹಣ ಸಂಭವಿಸುತ್ತದೆ. ಅಂದರೆ ಗ್ರಹಣವನ್ನು ನೋಡಲು ವೀಕ್ಷಕರು ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ದಿಗಂತದ ಸ್ಪಷ್ಟ ನೋಟವನ್ನು ಪಡೆಯಬೇಕು.

Muscle Cramps : ಚಳಿಗಾಲದಲ್ಲಿ ಕಾಡೋ ಸಮಸ್ಯೆಗಿದೆ ಮನೆಯಲ್ಲೇ ಟ್ರೀಟ್ಮೆಂಟ್!

ಇದು ಭಾರತದಲ್ಲಿ ಗೋಚರಿಸುತ್ತದೆಯೇ?

ಇಲ್ಲ, 2021ರ ಕೊನೆಯ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಸೂರ್ಯಗ್ರಹಣವನ್ನು ವೀಕ್ಷಿಸಲು ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಕೆಲವು ಮುನ್ನೆಚ್ಚರಿಕೆ ತಿಳಿಸಿದೆ. ಜನರು ಜಾಗರೂಕರಾಗಿರಬೇಕು ಮತ್ತು ತಮ್ಮ ಕಣ್ಣುಗಳನ್ನು ರಕ್ಷಿಸಲು ‘ಗ್ರಹಣ ಕನ್ನಡಕ’ಗಳನ್ನು ಬಳಸಬೇಕು. ಸೂರ್ಯನನ್ನು ನೇರವಾಗಿ ನೋಡದಂತೆ ಜನರಿಗೆ ಸೂಚಿಸಿದೆ.

ಮನೆಯಲ್ಲಿ ತಯಾರಿಸಿದ ಫಿಲ್ಟರ್ ಅಥವಾ ಸಾಂಪ್ರದಾಯಿಕ ಸನ್ಗ್ಲಾಸ್ ಅನ್ನು ಬಳಸಬೇಡಿ. ಅದರಿಂದ ಕಣ್ಣುಗಳು ಹಾನಿಗೊಳಗಾಗಬಹುದು ಎಂದು NASA ಜನರಿಗೆ ಸಲಹೆ ನೀಡುತ್ತದೆ. ನಿಮ್ಮ ಕ್ಯಾಮರಾಗಳಲ್ಲಿ ‘ಸೂರ್ಯಗ್ರಹಣ’ವನ್ನು ಸೆರೆಹಿಡಿಯವಾಗ ಎಚ್ಚರಿಕೆ ವಹಿಸಿ, ಅದು ಕಣ್ಣುಗಳಿಗೆ ಹಾನಿ ಮಾಡಬಹುದು ಎಂದು NASA ಸಲಹೆ ನೀಡಿದೆ. ವಿದ್ಯಮಾನವನ್ನು ವೀಕ್ಷಿಸಲು ತಮ್ಮ ದಿನನಿತ್ಯದ ಕನ್ನಡಕಗಳ ಮೇಲೆ ತಮ್ಮ ಗ್ರಹಣ ಕನ್ನಡಕವನ್ನು ಧರಿಸಬಹುದು. ಗ್ರಹಣವನ್ನು ವೀಕ್ಷಿಸಲು ಬಯಸುವ ಮಕ್ಕಳು ಪೋಷಕರ ಮೇಲ್ವಿಚಾರಣೆಯಲ್ಲಿ ನೋಡಬಹುದು.

click me!