ಸಂಗಾತಿಗೆ ಮೋಸ, ಸಾರ್ವಜನಿಕವಾಗಿ ನಗ್ನ ಸೇರಿ ಈ 54 ಕನಸು ಎಲ್ಲರಿಗೂ ಬೀಳುತ್ತೆ;ಏನಿದರರ್ಥ?

By Chethan Kumar  |  First Published Oct 1, 2024, 5:39 PM IST

ನಿಮಗೆ ರಾತ್ರಿ ಬೀಳುವ ಕನಸು ಯಾವುದು? ಈ ಕುರಿತು ಸಂಸ್ಥೆಯೊಂದು ಅಧ್ಯಯನ ಮಾಡಿ ಪಟ್ಟಿ ಮಾಡಿದೆ. ಸಾರ್ವಜನಿಕವಾಗಿ ನಗ್ನ, ಮೇಲಿಂದ ಕೆಳಕ್ಕೆ ಬೀಳುತ್ತಿರುವ, ಸಂಗಾತಿಗೆ ಮೋಸ ಸೇರಿದಂತೆ 54 ಸಾಮಾನ್ಯ ಕನಸು ಬಹುತೇಕರಿಗೆ ಬೀಳುತ್ತೆ. ಈ ಕನಸುಗಳು ಬಿದ್ದರೆ ಏನಿದರ ಅರ್ಥ?


ನವದೆಹಲಿ(ಅ.01) ರಾತ್ರಿ ಮಲಗಿದೆ ಮೇಲೆ ಬೀಳುವ ಕನಸುಗಳಲ್ಲಿ ಕೆಲವು ಮುದ ನೀಡಿದರೆ, ಮತ್ತೆ ಕೆಲವು ಭಯ ಬೀಳಿಸುತ್ತದೆ. ಕೆಲ ಕನಸುಗಳು ಮರುದಿನ ಸ್ಪಷ್ಟತೆ ಇಲ್ಲದೆ ಗೊಂದಲಕ್ಕೀಡಾಗುತ್ತದೆ. ಇನ್ನು ಬೆಳಗ್ಗೆ ಬೀಳುವ ಕನಸು ನನಸಾಗುತ್ತೆ ಅನ್ನೋ ಮಾತಿದೆ. ಈ ಕನಸುಗಳ ಕುರಿತು ಸಾಕಷ್ಟ ಅಧ್ಯಯನ ನಡೆದಿದೆ. ಇದೀಗ ಕನಸುಗಳ ಕುರಿತು ಹೊಸ ಅಧ್ಯಯನವೊಂದು ಹಲವು ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸಿದೆ. ಮೇಲಿನಿಂದ ಕೆಳಕ್ಕೆ ಬೀಳುತ್ತಿರುವ ರೀತಿ ಅಥವಾ ಜಾರಿ ಬೀಳುವು ರೀತಿಯ ಕನಸು, ಸಂಗಾತಿಗೆ ಮೋಸ ಮಾಡು ಕನಸು, ಸಾರ್ವಜನಿಕವಾಗಿ ನಗ್ನವಾಗಿರುವ ಕನಸು ಸೇರಿದಂತೆ 54 ಕನಸುಗಳು ಬಹುತೇಕರಲ್ಲಿ ಸಾಮಾನ್ಯವಾಗಿರುತ್ತದೆ ಎಂದು ಈ ಅಧ್ಯಯನ ವರದಿ ಹೇಳುತ್ತಿದೆ. ಹೀಗ ಬೀಳುವ ಪ್ರತಿ ಕನಸಿನ ಅರ್ಥವೇನು ಅನ್ನೋದು ಈ ಅಧ್ಯಯನ ವರದಿ ವಿವರಿಸಿದೆ.

ಡಾ.ಫಾಕ್ಸ್ ಆನ್‌ಲೈನ್ ಫಾರ್ಮಸಿಯ ಡಾ. ದೆಬೋರಾ ಲೀ ರಾತ್ರಿ ಕನಸುಗಳ ಕುರಿತು ಅಧ್ಯಯನ ಮಾಡಿದ್ದಾರೆ. ಸ್ಲೀಪ್ ಎಕ್ಸ್‌ಪರ್ಟ್ ಎಂದೇ ಖ್ಯಾತಿಗೊಂಡಿರುವ ದೆಬೋರಾ ಲಿ, ಕನಸುಗಳ ಕುರಿತು ಸುದೀರ್ಘ ಅದ್ಯಯನ ಮಾಡಿ ವರದಿ ನೀಡಿದ್ದಾರೆ. ಕನಸು ಮನುಷ್ಯನ ಆಂತರಿಕ ಭಾವನೆಯ ಸಂಕೇತಗಳಾಗಿವೆ. ಇದು ಸಂಕುಚಿತವಾಗಿರುವ ಭಾವನೆಗಳಿಗೆ ವೇಗ ನೀಡುವ ಪ್ರಕ್ರಿಯೆಯಲ್ಲಿ ಕನಸು ನೆರವು ನೀಡುತ್ತದೆ ಎಂದು ಲೀ ಹೇಳಿದ್ದಾರೆ.

Tap to resize

Latest Videos

undefined

ಅಬ್ಬಬ್ಬಾ... ಇನ್ಮುಂದೆ ನಿಮ್ಮ ಕನಸನ್ನೂ ರೆಕಾರ್ಡ್​ ಮಾಡ್ಬೋದು, ಮತ್ತೊಮ್ಮೆ ವೀಕ್ಷಿಸಲೂಬಹುದು!

ಲೀ ಕೆಲ ಸಾಮಾನ್ಯ ಕನಸುಗಳನ್ನು ಪಟ್ಟಿ ಮಾಡಿದ್ದಾರೆ. ಇದು ಬಹುತೇಕರಲ್ಲಿ ಸಾಮಾನ್ಯವಾಗಿ ಕಾಣುವ ಕನಸುಗಳು. ಒಬ್ಬರಿಂದ ಒಬ್ಬರಿಗೆ ಇದರ ತೀವ್ರತೆಯಲ್ಲಿ ಬದಲಾವಣೆಗಳಿರುತ್ತದೆ ಎಂದಿದ್ದಾರೆ. 54 ಕನಸುಗಳ ಪೈಕಿ ಮೇಲಿನಿಂದ ಕೆಳಕ್ಕೆ ಬೀಳುವ ಅಥವಾ ಕಾಲು ಜಾರಿ ಅಥವಾ ಇನ್ಯಾವುದೋ ರೂಪದಲ್ಲಿ ಬೀಳುವ ಕನಸುಗಳು ಬಹುತೇಕರಲ್ಲಿ ಸಾಮಾನ್ಯವಾಗಿದೆ ಎನ್ನುತ್ತಿದೆ ಅಧ್ಯಯನ ವರದಿ. ಈ ಕನಸು ಬಿದ್ದವರು ಆತಂಕ, ದುಗುಡ, ಅಸಾಹಯಕತೆಯಿಂದ ಕೊನೆ ಕ್ಷಣದಲ್ಲಿ ನಿದ್ದೆಯಿಂದ ಎಚ್ಚರವಾಗುತ್ತಾರೆ. ಈ ಕನಸು ಬೀಳುತ್ತಿದ್ದರೆ, ನಿಮಗೆ ಆರ್ಥಿಕ ಸವಾಲು, ವೃತ್ತಿಯಲ್ಲಿನ ಸಮಸ್ಯೆ ಅಥವಾ ಸವಾಲು, ಅನಿಶ್ಚಿತ ಬದುಕುಗಳ ತೊಳಲಾಟದಲ್ಲಿದ್ದೀರಿ ಎಂದರ್ಥ ಎಂದು ಈ ಅಧ್ಯಯನ ವರದಿ ಹೇಳುತ್ತಿದೆ.

ಮೇಲಿಂದ ಬೀಳುತ್ತಿರುವ ಕನಸು ಬಿದ್ದರೆ ನೀವು ವೃತ್ತಿಯಲ್ಲಿ ಕುಸಿಯುವ ಭೀತಿ ಎದುರಿಸಿರುತ್ತೀರಿ, ಅಥವಾ ಹಣ ನಷ್ಟ, ಷೇರುಮಾರುಕಟ್ಟೆಯಲ್ಲಿನ ಹಣ ಕಳೆದುಕೊಂಡ, ಉದ್ಯಮದಲ್ಲಿ ಹಿನ್ನಡೆ ಹೀಗೆ ಸವಾಲುಗಳಿಂದ ನಿಮ್ಮ ಬದುಕಿದ್ದರೆ  ಕನಸು ಬೀಳಲಿದೆ ಎಂದು ವರದಿ ಹೇಳುತ್ತಿದೆ.

ನೀವು ಹಾರಾಡುತ್ತಿರುವ ಅಥವಾ ವಿಶೇಷ ಶಕ್ತಿಗಳಿಂದ ನೀವು ಆಗಸದಲ್ಲಿ ತೇಲಿ ಹೋಗುತ್ತಿರುವ ಕನಸುಗಳು ಹಲವರಿಗೆ ಬೀಳುತ್ತದೆ. ಇದು ಸಾಮಾನ್ಯ ಕನಸು ಎಂದು ವರದಿ ಹೇಳುತ್ತಿದೆ. ಹೀಗೆ ಕನಸು ಬಿದ್ದರೆ, ನೀವು ಸ್ವತಂತ್ರವಾಗಿದ್ದೀರಿ ಅಥವಾ ಮಾನಸಿಕವಾಗಿ ನೀವು ಮುಕ್ತವಾಗಿರುವ ಸಂಕೇತವಾಗಿದೆ ಎನ್ನುತ್ತಿದೆ. ಹೊಸ ಬದುಕಿಗೆ ಕಾಲಿಡುತ್ತಿದ್ದೀರಿ, ಹೊಸ ಆಲೋಚನೆಗಳು, ಹೊಸತನ, ಹಳೆ ಸಮಸ್ಯೆಗಳಿಂದ ಹೊರಬಂದಿದ್ದರೆ ಈ ರೀತಿಯ ಕನಸುಗಳು ಬೀಳುತ್ತದೆ. ನಿಮ್ಮ ಆತಂರಿಕ ಭಾವನೆಯಲ್ಲಾಗುವ ಬದಲಾವಣೆಗೆ ತಕ್ಕಂತ ಕನಸುಗಳು ಬೀಳಲಿದೆ ಎಂದು ವರದಿ ಹೇಳುತ್ತಿದೆ.

ಸಾರ್ವಜನಿಕವಾಗಿ ನಗ್ನವಾಗಿರುವ ಕನಸುಗಳು ಬಿದ್ದರೆ, ನೀವು ಅವಮಾನಗಳನ್ನು ಎದುರಿಸಿದ್ದೀರಿ, ಅಥವಾ ಅಂತಹ ಸಂದರ್ಭಗಳು ಸೃಷ್ಟಿಯಾಗುವ ಕುರಿತು ಆತಂಕ ಪಟ್ಟಿದ್ದೀರಿ ಎಂದರ್ಥ. ಒತ್ತಡದ ಬದುಕಿನ ಕುರಿತು ಆಲೋಚಿಸಿದ್ದೀರಿ, ಅಥವಾ ಪರಿಸ್ಥಿತಿಗಳು ಅನುಕೂಲಕರವಲ್ಲದ  ರೀತಿಯಲ್ಲಿ ಬದಲಾಗಿದೆ ಎಂದರ್ಥ ಎಂದು ಕನಸಿನ ಅಧ್ಯಯನ ಹೇಳುತ್ತಿದೆ.

 ಕೆಲ ಕನಸುಗಳು ಯಾಕೆ ನೆನಪಿನಲ್ಲಿ ಉಳಿಯಲ್ಲ? ಮರೆತು ಹೋಗುವದರ ಹಿಂದಿನ ರಹಸ್ಯವೇನು?

ಸಂಗಾತಿಗೆ ಮೋಸ ಮಾಡುತ್ತಿರುವ ಅಥವಾ ಕನಸಿನಲ್ಲಿ ಇನ್ಯಾರೋ ಜೊತೆಗೆ ಪ್ರೀತಿ, ದೈಹಿಕ ಸಂಪರ್ಕದ ಕನಸುಗಳು ಬಿದ್ದರೆ ನಿಮ್ಮೊಳಗೆ ಹಾಲಿ ಸಂಬಂಧಕ್ಕಿಂತ ಬೇರೊಂದು ಸಂಬಂಧಕ್ಕೆ ಹಾತೊರೆಯುತ್ತಿದೆ ಎಂದರ್ಥ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಹಾಲಿ ಸಂಬಂಧ ಇಲ್ಲದಿದ್ದಾಗ, ಹಾಲಿ ಸಂಬಂಧದಲ್ಲಿ ಖುಷಿ ಇಲ್ಲದಾಗ, ಅಥವಾ ಇದಕ್ಕಿಂತ ಇನ್ನೇನೋ ಇದೆ ಅನ್ನೋ ಭಾವನೆ ನಿಮ್ಮಲ್ಲಿದ್ದಾಗ, ಸಂಗಾತಿಗೆ ಮೋಸ ಮಾಡುವ ಕನಸುಗಳು ಬೀಳುತ್ತದೆ ಎಂದಿದೆ.ಇವೆಲ್ಲಾ ಸಾಮಾನ್ಯವಾಗಿ ಬೀಳುವ ಕನಸುಗಳು ಎಂದು ಅಧ್ಯಯನ ವರದಿ ಹೇಳುತ್ತಿದೆ. 
 

click me!