ಕಿವಿಯಲ್ಲಿ ಕಚಗುಳಿ: ಹೆಡ್‌ಫೋನ್ ಒಳಗಿತ್ತು ಡೆಡ್ಲಿ ಸ್ಪೈಡರ್..!

By Suvarna News  |  First Published Oct 15, 2020, 2:10 PM IST

ಅಪಾಯ ಹೇಗೇಗೆ ಬರುತ್ತಲ್ವಾ..? ಆಸ್ಟ್ರೇಲಿಯಾ ಪ್ಲಂಬರ್ ಒಬ್ಬ ನಾಯ್ಸ್ ಕ್ಯಾನ್ಸಲಿಂಗ್ ಹೆಡ್‌ಫೋಣ್ ಹಾಕಿ ಕೆಲಸ ಮಾಡ್ತಿದ್ದ. ಆಗಲೇ ಕಿವಿಯಲ್ಲಿ ಕಚಗುಳಿ ಶುರು ಆಯ್ತು.. ನಂತರ ಆಗಿದ್ದೇನು ನೋ


ಥಂಬ್ಲರ್ ಒಬ್ಬ ಎಂದಿನಂತೆ ಹೆಡ್‌ಫೋನ್ ಸಿಕ್ಕಿಸಿ ಕೆಲಸ ಆರಂಭಿಸಿದ್ದ. ಆದರೆ ಕೆಲವು ಕ್ಷಣದಲ್ಲೇ ಕಿವಿಯಲ್ಲಿ ತುಂಬಾ ಕಚಗುಳಿಯಾಯ್ತು. ಇರೀಟೇಷನ್ ಆದಾಗ ತಕ್ಷಣ ಹೆಡ್‌ಫೋನ್ ತೆಗೆದಾತ ನೋಡಿದ್ರೆ ಹೆಡ್‌ಫೋನ್‌ ಒಳಗೆ ಇದ್ದಿದ್ದೇನು..?

ಅಪಾಯ ಹೇಗೇಗೆ ಬರುತ್ತಲ್ವಾ..? ಆಸ್ಟ್ರೇಲಿಯಾ ಪ್ಲಂಬರ್ ಒಬ್ಬ ನಾಯ್ಸ್ ಕ್ಯಾನ್ಸಲಿಂಗ್ ಹೆಡ್‌ಫೋಣ್ ಹಾಕಿ ಕೆಲಸ ಮಾಡ್ತಿದ್ದ. ಆಗಲೇ ಕಿವಿಯಲ್ಲಿ ಕಚಗುಳಿ ಶುರು ಆಯ್ತು.. ನಂತರ ಆಗಿದ್ದೇನು ನೋಡಿ

Tap to resize

Latest Videos

undefined

ಕಿವಿಯೊಳಗೆ ಹೊಕ್ಕ ಜೇಡ, ಒಳಗೆ ಹೀಗೆ ಹೆಣೆದಿತ್ತು ಬಲೆ!, ವೈರಲ್ ಆಯ್ತು ವಿಡಿಯೋ

ಇದೀಗ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಾನು ಹಾಕಿದ್ದ ಹೆಡ್‌ಫೋನಲ್ಲಿ ಭಾರೀ ಕಿರಿಕಿರಿಯಾದಾಗ ಓಲಿ ಥ್ರಸ್ಟ್‌ಗೆ ಕೆಲಸ ಮಾಡೋವಾಗ ಕಾನ್ಸನ್‌ಟ್ರೇಷನ್ ಸಿಕ್ತಾ ಇರ್ಲಿಲ್ಲ. ಅದಕ್ಕಾಗಿ ತಕ್ಷಣ ಹೆಡ್‌ಫೋನ್ ತೆಗೆದಿದ್ದಾನೆ.

ಹೆಡ್‌ಫೋನ್ ನೋಡಿದಾಗ ಅದರ ಪ್ಯಾಡ್‌ನಲ್ಲಿ ದೊಡ್ಡದೊಂದು ಜೇಡ ಕುಳಿತಿತ್ತು. ಇದೇನಾದ್ರೂ ಕಿವಿಯೊಳಗೆ ಹೊಕ್ಕಿದ್ರೆ ಏನಾಗ್ತಿತ್ತೋ.. ನನಗೆ ಏನೋ ಒಳಗಿದೆ ಎಂಬುದು ಕಚಗುಳಿಯಿಂದಲೇ ಗೊತ್ತಾಯ್ತು. ಅದಂತೂ ಹೊರಗೆ ಬರುವುಕ್ಕೇ ರೆಡಿ ಇಲ್ಲ. ಅದರೊಳಗೆ ಜೇಡ ಹ್ಯಾಪಿ ಆಗಿತ್ತು ಎನ್ನುತ್ತಾರೆ ಓಲಿ.

ಪೋಲಿ ಏಡಿಯೊಂದು ಧಮ್ ಹೊಡಿಯೋದನ್ನು ನೋಡಿದ್ದೀರಾ?

ಪರ್ತ್ ಎಬಿಸಿ ವಿಡಿಯೋವನ್ನು ಶೇರ್ ಮಾಡಿದ್ದು, ಶೇರ್ ಮಾಡಿದ ತಕ್ಷಣ ವಿಡಿಯೋ ವೈರಲ್ ಆಗಿದೆ. ಸಾವಿರಾರು ಜನರು ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದಾರೆ. ಬಹಳಷ್ಟು ಜನ ಜೇಡದ ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಹಂಟ್ಸ್‌ಮನ್ ಜೇಡ ಜನರಿಗೆ ಮನುಷ್ಯರಿಗೆ ಅಪಾಯ ಮಾಡಲ್ಲ ಎಂದಿದ್ದಾರೆ.

click me!