ಹೊಸ ವರ್ಷಕ್ಕೆ ತಯಾರಾಗಲು ಇಲ್ಲಿದೆ ಸಿಂಪಲ್ 20 ಟಿಪ್ಸ್!

By Suvarna News  |  First Published Dec 22, 2019, 11:34 AM IST

ಹೊಸ ವರ್ಷ ರೆಸಲ್ಯೂಶನ್‌ಗಳಿಗೆ ನೀವು ತಯಾರಾಗ್ತಿರಬಹುದು. ಆದರೆ ಅದಕ್ಕೂ ಮುನ್ನ ಉಳಿದಿರುವ ಒಂದೆರಡು ವಾರದಲ್ಲಿ ನೀವು ಹೊಸ ಮನುಷ್ಯರಾಗೋದು, ಹೊಸ ವರ್ಷಕ್ಕೆ ತಯಾರಾಗೋದು ಹೇಗೆ? ಇಲ್ಲಿದೆ ಓದಿ.


ಹೊಸ ವರ್ಷವನ್ನು ಪಾರ್ಟಿಯ ಮೂಲಕ, ಗೆಳೆಯರ ಜೊತೆಗೆ, ಮನೆಯವರ ಜತೆಯಲ್ಲಿ ಆಚರಿಸಲು ನೀವು ಯೋಚಿಸಿರಬಹುದು. ಹೊಸ ವರ್ಷದ ಮೊದಲ ದಿನ ಹೊಸ ಮನುಷ್ಯನಾಗಿ ನಾನು ಬದುಕಿಗೆ ಸಿದ್ಧನಾಗಬೇಕು ಅಂತಲೂ ಯೋಚಿಸಿದ್ದೀರಾ? ಹಾಗಿದ್ದರೆ ಇನ್ನು ಉಳಿದಿರುವ ಕೆಲವೇ ದಿನಗಳಲ್ಲಿ ನೀವು ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ವರ್ಷದ ಎಲ್ಲ ಒತ್ತಡಗಳನ್ನು ಮರೆತು ಈ ಕೊನೆಯ ಎರಡು ವಾರಗಳನ್ನು ಖುಷಿಖುಷಿಯಿಂದ ಕಳೆದರೆ ನೀವು ಡಿ.31ರ ರಾತ್ರಿ ನಿಜಕ್ಕೂ ಹ್ಯಾಪ್ಪಿಯಾಗಿರಬಹುದು.

1. ಆರೋಗ್ಯಕರ ಅಭ್ಯಾಸ

Tap to resize

Latest Videos

undefined

ಮುಂಜಾನೆಯೆದ್ದು ವಾಕಿಂಗ್‌ ಹೋಗಿ, ಒಳ್ಳೆಯ ಆಹಾರ ಸೇವಿಸಿ, ಸಿಗರೇಟ್‌ ಕೈಬಿಡಿ. ಕರಿದ ಆಹಾರ ಸೇವಿಸುವುದು ಬಿಡಿ. ಡಿ.31ರಂದು ಕೊಂಚವೇ ಕೊಂಚ ಬಿಯರ್‌ ಸೇವಿಸಿದರೆ ತಪ್ಪೇನಲ್ಲ. ಇಂಥ ಹೆಲ್ದೀ ಅಭ್ಯಾಸಗಳನ್ನು ಮಾಡಿಕೊಂಡರೆ ನೀವು ಹೊಸ ಮನುಷ್ಯ ಆಗಿರ್ತೀರಿ.

ಹೊಸ ವರ್ಷದಲ್ಲಿ ಈ ಸಿಂಪಲ್ ರೂಲ್ ಫಾಲೋ ಮಾಡಿ, ಸೇವಿಂಗ್ಸ್ ಹೆಚ್ಚಿಸಿ!

2. ಪ್ರವಾಸ

ಬೇಸಿಗೆ ಮುಗಿದು ಚಳಿಗಾಲ ನಡೆಯುತ್ತಾ ಇದೆ. ಒಳ್ಳೆಯದೊಂದು ಪ್ರವಾಸ ಹೋಗೋಕೆ ಇದಕ್ಕಿಂತ ಪ್ರಶಸ್ತ ಟೈಮ್‌ ಇನ್ಯಾವುದಿದೆ? ಒಂದು ಬ್ಯಾಗ್‌ ಹೆಗಲಿಗೇರಿಸಿಕೊಂಡು ನಡೆದುಬಿಡಿ ಮತ್ತೆ.

3. ಸಮಾಜಸೇವೆ

ಯಾವ್ದೋ ಅನಾಥಾಶ್ರಮ ಇರಬಹುದು, ವೃದ್ಧಾಶ್ರಮ ಇರಬಹುದು, ಅಲ್ಲಿ ಹೋಗಿ ಅಲ್ಲಿನವರಿಗೆ ಹೆಲ್ಪ್‌ ಮಾಡೋದು, ಬೀದಿ ಬದಿಯಲ್ಲಿರುವವರಿಗೆ ಚಳಿಯಾಗದಂತೆ ರಗ್ಗು ಕೊಡಿಸೋದು, ಇಂಥ ಸಮಾಜ ಸೇವೆ ಪುಟ್ಟ ಕೆಲಸಗಳಿಂದ ಎಷ್ಟು ಧನ್ಯತಾ ಭಾವ ಸಿಗುತ್ತೆ ಅನುಭವಿಸಿದ್ದೀರಾ

4. ವೇಸ್ಟ್‌ ಬಟ್ಟೆ, ಚಪ್ಪಲಿ ಕ್ಲೀನಿಂಗು

ನಿಮ್ಮ ವಾರ್ಡ್‌ರೋಬಲ್ಲಿರುವ, ಜನವರಿಯಿಂದ ಈಚೆಗೆ ನೀವು ಧರಿಸಿಲ್ಲದ ಬಟ್ಟೆಗಳನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಿ. ಚಪ್ಪಲಿಗಳೂ ಬೇಡ. ಬಳಕೆಯ ವಸ್ತುಗಳನ್ನು ಕಡಿಮೆ ಮಾಡಿಕೊಂಡಷ್ಟೂ ಜೀವನ ಸರಳ, ಸುಂದರ.

5. ಪೆಟ್‌ ಅಥವಾ ಗಿಡ

ಒಂದು ಪುಟ್ಟ ನಾಯಿಮರೆ ಕೊಂಡುತಂದು ಸಾಕಿ. ಅಥವಾ ಒಂದು ಗಿಡ ಬೆಳೆಸಿ. ನಾಯಿಯನ್ನು ಮುದ್ದಾಡುವುದರಿಂದ ಅಥವಾ ಗಿಡಕ್ಕೆ ನೀರೆರೆಯುವದರಿಂದ ಮನಶ್ಶಾಂತಿ ಗಳಿಸುತ್ತೀರಿ.

6. ಹೊಸ ಹವ್ಯಾಸ

ಫೋನ್‌ನಲ್ಲಿ ತುಂಬಾ ಸಮಯ ವೇಸ್ಟ್‌ ಮಾಡ್ತೀವಿ. ಅದರ ಬದಲಾಗಿ ಹೊಲಿಗೆ, ಕಸೂತಿ, ಕುಕ್ಕಿಂಗ್‌, ಹೊಸ ಭಾಷೆ ಕಲಿಯೋದು- ಹೀಗೆ ಎಷ್ಟೊಂದು ಹೊಸ ಹವ್ಯಾಸಗಳಿವೆ ನೀವು ಕಲೀಬಹುದಾದದ್ದು ಗೊತ್ತಾ?

7. ಹೊಸ ಹಾಸಿಗೆ ಖರೀದಿಸಿ

ದಿನದ ಅರ್ಧಭಾಗವನ್ನು ನಮ್ಮ ಹಾಸಿಗೆಯಲ್ಲೇ ಕಳೀತೀವಲ್ಲ. ನಿದ್ರೆ ಮಾಡ್ತಾ, ಮೊಬೈಲ್‌ ನೋಡ್ತಾ, ಸಿನಿಮಾ ವೀಕ್ಷಿಸುತ್ತಾ. ಹಳೆ ಹಾಸಿಗೆಯಿಂದ ಬೆನ್ನು ನೋವೂ ಉಂಟಾಗಬಹುದು. ಅದನ್ನು ಬದಲಾಯಿಸಲು ಸಕಾಲ.

2020ಕ್ಕೂ ಮುನ್ನ ನೀವು ಈ 20 ಕೆಲಸಗಳನ್ನು ಮಾಡಲೇಬೇಕು!

8. ಡೆಂಟಿಸ್ಟ್‌ ಬಳಿಗೆ ಹೋಗಿ

ವರ್ಷಕ್ಕೊಮ್ಮೆ ಡೆಂಟಿಸ್ಟ್‌ ಬಳಿಗೆ ಹೋಗಿ ಹಲ್ಲು ಚೆಕಪ್‌ ಮಾಡಿಸಿಕೊಳ್ಳುವುದು ಆರೋಗ್ಯಕರ ಅಭ್ಯಾಸ. ಇದು ನಿಮ್ಮ ಹಲ್ಲಿಗೆ ಇನ್ನಷ್ಟು ಲೈಫ್‌ ತಂದುಕೊಡುತ್ತೆ.

9. ಹೆಲ್ತ್‌ ಚೆಕಪ್‌

ವರ್ಷಕ್ಕೊಮ್ಮೆಯಾದರೂ ದೇಹದ ಕಂಪ್ಲೀಟ್‌ ಹೆಲ್ತ್‌ ಚೆಕಪ್‌ ಮಾಡಿಸಬೇಕು. ಈಗಲೇ ಯಾಕಾಗಬಾರದು? ನಮ್ಮ ದೇಹವನ್ನು ನಾವು ಹೇಗೆ ನೋಡಿಕೊಳ್ತೀವೋ ನಮ್ಮ ದೇಹವೂ ನಮ್ಮನ್ನು ಅಷ್ಟೇ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತದೆ.

10. ಇನ್ನೊಂದು ಕೆರಿಯರ್‌ ಗಳಿಸಿ

ಪುಟ್ಟದೇ ಆದರೂ ಸರಿ, ಈಗಿರುವ ಕೆರಿಯರ್‌ ಬದಲಾಯಿಸಿ ಇನ್ನೊಂದಕ್ಕೆ ಜಿಗಿದು ಯಶಸ್ಸು ಗಳಿಸಬೇಕು ಎಂಬ ನಿಮ್ಮ ಹಪಹಪಿ, ಉತ್ಸಾಹ ಅರ್ಥವಾಗುವಂತದ್ದೇ. ಇದರ ಬಗ್ಗೆ ಸ್ವಲ್ಪ ಆನ್‌ಲೈನ್‌ ರಿಸರ್ಚ್‌ ಮಾಡಿ, ನೆಟ್‌ವರ್ಕಿಂಗ್‌ ಮಾಡಿ, ಕಲಿತುಕೊಳ್ಳಿ.

11. ಹೊಸ ಅಡುಗೆ ಕಲೀರಿ

ವಿದೇಶದ ಯಾವುದಾದರೂ ಒಂದು ಡಿಶ್‌ ಮಾಡಲು ಕಲಿತುಕೊಳ್ಳಿ. ನಿಮ್ಮ ಬಂಧುಗಳನ್ನು, ಮನೆಯವರನ್ನು ಚಕಿತಗೊಳಿಸಿ, ಖುಷಿಪಡಿಸಿ.ಉದಾ: ಮೋಮೋಸ್‌!

12. ರಿಲೇಶನ್‌ಶಿಪ್‌

ಹಳೆಯ ಸಂಬಂಧವೊಂದು ಬೋರ್‌ ಆಗಿರಬಹುದು. ಹೊಸ ಸಂಬಂಧವೊಂದು ಬೇಕು ಅನಿಸ್ತಿರಬಹುದು. ರಿಲೇಶನ್‌ಶಿಪ್‌ ಕಡಿದುಕೊಳ್ಳೋದು,  ಹೊಸದೊಂದು ಶುರು ಹಚ್ಕೊಳ್ಳೋದು ಅಪರಾಧವೇನೂ ಅಲ್ಲ.

13. ತಂದೆತಾಯಿ ಜೊತೆ ಮಾತಾಡಿ

ನಿಮಗೆ ಕೆಲಸದ ಒತ್ತಡ ಇರಬಹುದು. ತಂದೆ ತಾಯಿ ಜೊತೆ ಮಾತಾಡಲು ಮರೆತಿರಬಹುದು. ಆದರೆ ವಾರಕ್ಕೊಮ್ಮೆಯಾದರೂ ತಂದೆ ತಾಯಿಗೆ ಫೋನ್‌ ಮಾಡಿ ಮಾತಾಡುವುದನ್ನು ಈಗಿಂದಲೇ ಆರಂಭಿಸಿ.

14. ಬೆಸ್ಟ್‌ ಫ್ರೆಂಡ್‌ಗಳನ್ನು ಕಾಣಿ

ಕೆಲಸ, ಮನೆ, ಕುಟುಂಬ ಎಲ್ಲವೂ ಅದರ ಸ್ಥಾನದಲ್ಲಿರುತ್ತವೆ. ಆದರೆ ಬೆಸ್ಟ್‌ ಪ್ರೆಂಡ್‌ಗಳಿಂದ ನೀವು ಪಡೆಯುವ ಸುಖವೇ ಬೇರೆ. ಈ ವರ್ಷ ಕೊನೆಯಾಗುವ ಮುನ್ನ ಅವರನ್ನೊಮ್ಮೆ ಭೇಟಿಯಾದರೆ ಹೊಸ ವರ್ಷಕ್ಕೆ ಇನ್ನಷ್ಟು ಗುಡ್‌ ಐಡಿಯಾಗಳು ಸಿಗಬಹುದು.

15. ಸನ್‌ಸ್ಕ್ರೀನ್‌ ಬಳಸಿ

ನೀವು ಈಗಾಗಲೇ ಬಳಸಿಲ್ಲವಾದರೆ, ಸನ್‌ಸ್ಕ್ರೀನ್‌ ಬಳಸಲು ಸುಸಮಯ. ಯಾಕೆಂದರೆ ಈಗ ಚಳಿಯಿಂದ ಚರ್ಮ ಬಿರಿದು ಬಿಸಿಲಿಗೆ ಸುಟ್ಟಂತಾಗುತ್ತದೆ.

16. ಸ್ಮೋಕಿಂಗ್‌ ಬಿಟ್ಟುಬಿಡಿ

ಹೆಚ್ಚಿನವರ ಜನವರಿ ರೆಸಲ್ಯೂಶನ್‌ನಲ್ಲಿ ಕ್ವಿಟ್‌ ಸೋಕಿಂಗ್‌ ಇರುತ್ತದೆ. ಆದರೆ ಅದಕ್ಕೆ ಜನವರಿ 1ಕ್ಕಾಗಿಯೇ ಕಾಯಬೇಕು ಯಾಕೆ? ಈಗಲೇ ಬಿಟ್ಟುಬಿಟ್ಟರೆ ಜ.1ಕ್ಕೆ ಫ್ರೆಶ್‌ ಆಗಿರುತ್ತೀರಿ.

17. ಕಡಿಮೆ ಖರ್ಚು ಮಾಡಿ, ಹೆಚ್ಚು ಉಳಿಸಿ

ತುರ್ತು ಪರಿಸ್ಥಿತಿಗಳು ಹೇಗೆ ಸೃಷ್ಟಿಯಾಗುತ್ತವೆ ಅಂತ ಹೇಳೋಕೇ ಆಗಲ್ಲ. ಅಂಥ ಸನ್ನಿವೇಶ ಎದುರಿಸೋದಕ್ಕಾಗಿ ಒಂದಿಷ್ಟು ಹಣ ಬ್ಯಾಂಕ್‌ನಲ್ಲಿ ಉಳಿಸಿಡಿ. ಉಳಿಸೋದಕ್ಕಾಗಿ ಖರ್ಚು ಮಾಡೋದು ಕಡಿಮೆ ಮಾಡಿ. ಅನಗತ್ಯ ವಸ್ತು ಕೊಂಡುಕೋಬೇಡಿ.

18. ಆಲ್ಕೋಹಾಲ್‌ ಕಡಿಮೆ

ಒಮ್ಮೊಮ್ಮೆ ಕುಡಿಯೋದು, ಕಂಪನಿಗಾಗಿ ಕುಡಿಯೋದು ತಪ್ಪಲ್ಲ. ಆದರೆ ಪ್ರತಿದಿನ ಕುಡಿಯೋದು, ಮಿತಿಮೀರಿ ಕುಡಿದು ಗೆಳೆಯರ ದೃಷ್ಟಿಯಲ್ಲಿ ಅಸಹ್ಯ ಅನ್ನಿಸಿಕೊಳ್ಳೋದು ತಪ್ಪಲ್ವಾ? ಆಲ್ಕೋಹಾಲ್‌ ಆರೋಗ್ಯಕ್ಕೂ ಹಾಳು, ಸಂಬಂಧಗಳಿಗೂ ಹಾಳು.

19. ಚರ್ಮ ಕಾಪಾಡಿಕೊಳ್ಳಿ

ನಿಮ್ಮ ಚರ್ಮದ ಆರೈಕೆ ಮಾಡಿಕೊಳ್ಳಲು ಇದು ಸಕಾಲ. ನೀವು ಸ್ವಲ್ಪ ಕೇರ್‌ ತೆಗೆದುಕೊಳ್ಳುತ್ತೀರಿ ಎಂಬುದು ನಿಮ್ಮ ತ್ವಚೆಗೂ ಗೊತ್ತಾಗಲಿ,

20. ಸಣ್ಣ ಸಂಗತಿಗಳಿಗೆ ಖುಷಿಪಡಿ

ಲೈಫಿನಲ್ಲಿ ಇರೋದು ಪ್ರತಿದಿನದ ಸಣ್ಣ ಸಂಗತಿಗಳು ಅಷ್ಟೇ. ಅವುಗಳಿಗೇ ಖುಷಿಪಡೋದು ಕಲಿತಾಗ ಜೀವನವೇ ತುಂಬಿದ ಹಾಗೆ. ಹೂವು ಅರಳೋದು, ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯೋದು, ಮಗುವಿನ ನಗು- ಇವೆಲ್ಲ ಎಷ್ಟು ಚೆನ್ನ ಅಲ್ಲವೇ?

click me!