ಕರ್ನಾಟಕ ನೆರೆ ರಾಜ್ಯದ ಕೇರಳದಲ್ಲಿ ಕೋವಿಡ್ 19 ವೈರಸ್‌ನ ಓಮಿಕ್ರಾನ್ ಉಪತಳಿಯ ಆರ್ಭಟ ಹೆಚ್ಚಾಗಿದ್ದು, 356 ಮಂದಿಗೆ ಕರೊನಾ ಪಾಸಿಟಿವ್ ಕಂಡುಬಂದಿದೆ.
ಬೆಂಗಳೂರು (ಡಿ.16): ದೇಶದಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಆದರೆ, ಇದೇ ವೇಳೆ ನಮ್ಮ ದೇಶದಲ್ಲಿ ಮೂರು ವರ್ಷಗಳ ಬಳಿಕ ಕೋವಿಡ್-19 ವೈರಸ್‌ನ ಒಮಿಕ್ರಾನ್ ಉಪತಳಿ ಆರ್ಭಟ ಶುರು ಮಾಡಿದೆ. ಈಗ ಹೊಸದಾಗಿ 356 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದ್ದು ಅವರಿಗೆ ಈ ಹಿಂದಿನ ಮಾರ್ಗಸೂಚಿಯಂತೆ ಚಿಕಿತ್ಸೆ ನೀಡಲಾಗುತ್ತಿದೆ.
ದೇಶದಲ್ಲಿ ಕೋವಿಡ್ ಸೋಖಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿದೆ. ಅದರಲ್ಲಿಯೂ ನಮ್ಮ ನೆರೆ ರಾಜ್ಯವಾದ ಕೇರಳದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡುಬರುತ್ತಿದ್ದು, ಕರ್ನಾಟಕದಲ್ಲಿಯೂ ಆತಂಕ ಶುರುವಾಗಿದೆ. ಇನ್ನು ಕೇರಳದಲ್ಲಿ ಕೋವಿಡ್ ಹೆಚ್ಚಳ ಹಿನ್ನಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯಿಂದ ತುರ್ತು ಸಭೆಯನ್ನು ಮಾಡಲಾಗಿದೆ. ಇನ್ನು ಮಂಗಳವಾರ ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಿಂದ ಮಹತ್ವದ ಸಭೆಯನ್ನು ಮಾಡಲಾಗುತ್ತದೆ. ಈ ಸಚಿವರ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
undefined
ದಿಢೀರ್ ಕೋವಿಡ್ ಏರಿಕೆ; ಕೇರಳದಲ್ಲಿ ದೇಶದ ಶೇ.90 ರಷ್ಟು ಪ್ರಕರಣ ದಾಖಲು, 2 ಸಾವು!
ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣದ ಕುರಿತು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವುದಕ್ಕಾಗಿ ಶನಿವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತುರ್ತು ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯ ನಿರ್ದೇಶಕರು ಡಾ. ಪುಷ್ಪಲತಾ, ಹೆಚ್ಚುವರಿ ನಿರ್ದೇಶಕರು ಡಾ. ಶ್ರೀನಿವಾಸ್, ಜಂಟಿ ನಿರ್ದೇಶಕಿ ವೈದ್ಯಕೀಯ ಡಾ. ರಜನಿ, ಉಪ ನಿರ್ದೇಶಕರು ಆಹಾರ ಸುರಕ್ಷತೆಯ ಡಾ. ಚಂದ್ರಮೋಹನ್ ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ಮುಂಜಾಗೃತ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಯಿತು.
ಇನ್ನು ಮುಖ್ಯವಾಗಿ ಕೋವಿಡ್-19 ವೈರಸ್‌ನ ಒಮಿಕ್ರಾನ್ ಉಪತಳಿ ಹರಡದಂತೆ ಪಾಲಿಸಬೇಕಾದ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಆರೋಗ್ಯ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ, ಆರೋಗ್ಯ ಇಲಾಖೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಸಜ್ಜಾಗಬೇಕು. ಜನರಿಗೆ ಜಾಗೃತಿ ಹೇಗೆ ಮೂಡಿಸಬೇಕೆಂಬುದರ ಬಗ್ಗೆಯೂ ಕೂಡಲೇ ಯೋಜನೆ ರೂಪಿಸಬೇಕು. ಭಾರತದಲ್ಲಿ 356 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿರುವ ಬಗ್ಗೆ ತಿಳಿಸಿ, ಸೋಂಕು ಹರಡದಂತೆ ಕೊರೊನಾ ಪರೀಕ್ಷೆ ಪ್ರಮಾಣ ಹೆಚ್ಚಿಸಲು ಸೂಚನೆ ನೀಡಿದರು.
ಕೆಎಸ್‌ಆರ್‌ಟಿಸಿ ಮಹತ್ವದ ಹೆಜ್ಜೆ: ಪಾರ್ಸಲ್ ಅಂಡ್ ಕೊರಿಯರ್‌ಗಾಗಿ ನಮ್ಮ ಕಾರ್ಗೋ ಸೇವೆ ಆರಂಭ
ಕೋವಿಡ್ ಪರೀಕ್ಷೆ 3 ಲಕ್ಷಕ್ಕೆ ಹೆಚ್ಚಿಸಲು ನಿರ್ಧಾರ: ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, 3 ಲಕ್ಷ ಆರ್‌ಟಿ-ಪಿಸಿಆರ್ (RTPCR) ಟೆಸ್ಟಿಂಗ್ ಕಿಟ್ ಅವಶ್ಯಕತೆ ಇದೆ. ಒಂದು ತಿಂಗಳ ಕಾಲ ಟೆಸ್ಟ್ ಮಾಡಲು ಪ್ಲಾನ್ ಮಾಡಿದ್ದೇವೆ. ಟೆಸ್ಟಿಂಗ್ ಕಿಟ್ ಖರೀದಿಯ ಬಳಿಕ ಕೋವಿಡ್ ಟೆಸ್ಟಿಂಗ್ ಏರಿಕೆ ಮಾಡ್ತೀವಿ. ಇನ್ನು ರಾಜ್ಯದಲ್ಲಿ ಮಂಗಳವಾರ ಕೋವಿಡ್ ಸೋಂಕು ನಿಯಂತ್ರಣಾ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ರವಿ ನೇತೃತ್ವದಲ್ಲಿ ಸಭೆ ಮಾಡಲಾಗುತ್ತದೆ. ಇದಕ್ಕೂ ಮುಂಚಿತವಾಗಿ ಸೋಮವಾರ ತಾಂತ್ರಿಕ ಸಲಹ ಸಮಿತಿ ತಜ್ಞರು ಸಭೆ ನಡೆಸುತ್ತಿದ್ದಾರೆ. ತಜ್ಞರ ಸಭೆ ಬಳಿಕ ಆರೋಗ್ಯ ಸಚಿವರಿಂದ ಮಂಗಳವಾರ ಸಭೆ ಮಾಡಲಾಗುತ್ತದೆ ಎಂದು ತಿಳಿಸಿದರು.