
ಕೊರೋನಾ ಸೋಂಕು (Corona Virus) ಜಗತ್ತನ್ನೇ ತಲ್ಲಣಗೊಳಿಸಿದ ಮಹಾಮಾರಿ. ಕಣ್ಣಿಗೆ ಕಾಣದ ವೈರಸ್‌ವೊಂದು ಅಸಂಖ್ಯಾತ ಜೀವಗಳನ್ನು ಬಲಿ ಪಡೆದಿದೆ. ಇವತ್ತಿಗೂ ಅದೆಷ್ಟೋ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಜನರಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಕೊರೋನಾ ಸೋಂಕು ತಗುಲಿದ ಜನರಲ್ಲಿ ಜ್ವರ, ಕೆಮ್ಮು, ವಾಂತಿ, ತಲೆನೋವು, ಸುಸ್ತು ಸಾಮಾನ್ಯವಾಗಿ ಕಂಡು ಬರುತ್ತದೆ. ಇದಲ್ಲದೆ ವಿಶೇಷವಾಗಿ ಉಳಿದ ಎಲ್ಲಾ ಜ್ವರಗಳಿಗಿಂತ ವಿಭಿನ್ನವಾಗಿ ಕೊರೋನಾ ಸೋಂಕು ತಗುಲಿದವರಲ್ಲಿ ನಾಲಗೆಗೆ ರುಚಿ (Taste) ನಷ್ಟ ಉಂಟಾಗುತ್ತದೆ. ವಾಸನೆಯನ್ನು ಗ್ರಹಿಸುವ ಸಂವೇದನೆಯನ್ನು ಕಳೆದುಕೊಳ್ಳುತ್ತಾರೆ. ಯಾವ ಆಹಾರ (Food)ವನ್ನು ತಿಂದರೂ ನಾಲಗೆಗೆ ರುಚಿ ಸಿಗುವುವಿಲ್ಲ. ಮೂಗಿನ ಬಳಿ ಹಿಡಿದರೂ ಯಾವ ವಾಸನೆಯನ್ನೂ ಗ್ರಹಿಸಲು ಸಾಧ್ಯವಾಗುವುದಿಲ್ಲ.
ಕೊರೋನಾ ವೈರಸ್ ತಗುಲಿದಾಗ ಸ್ಮೆಲ್ (Smell) ಲಾಸ್ ಆಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸೋಂಕು ತಗುಲಿದಾಗ ವಾಸನೆ ನಷ್ಟವಾಗಿ ಚಿಕಿತ್ಸೆ ಪಡೆದುಕೊಂಡ ಹಲವು ವಾರಗಳ ಬಳಿಕ ಮತ್ತೆ ಮೊದಲಿನಂತೆ ವಾಸನೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಆದರೆ ಅಚ್ಚರಿಪಡುವ ವಿಷಯ ಅದಲ್ಲ. ಹೊಸತೊಂದು ಅಧ್ಯಯನದ ಪ್ರಕಾರ, ಕೊರೋನಾ ಸೋಂಕು ತಗುಲಿದ ಕೆಲವೊಬ್ಬರಲ್ಲಿ ವಾಸನೆಯನ್ನು ಗ್ರಹಿಸುವ ಶಕ್ತಿ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆಯಂತೆ. ಅಷ್ಟೇ ಅಲ್ಲ ಶಾಶ್ವತವಾಗಿ ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.
Omicron Effect: ಒಮಿಕ್ರಾನ್ ನಿಂದ ಅವಧಿಗೂ ಮುನ್ನವೇ ಮಗು ಜನನ?
ಕೊರೋನಾ ವೈರಸ್ ಕುರಿತಾಗಿ ನಡೆಸಿದ ಹೊಸ ಅಧ್ಯಯನವೊಂದರ ಪ್ರಕಾರ, ಕೋವಿಡ್-19 ಸೋಂಕಿತದಲ್ಲಿ ಶೇಕಡಾ 50ರಷ್ಟು ಮಂದಿ ಶಾಶ್ವತವಾಗಿ ವಾಸನೆ ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗಿದೆ. ಸ್ವೀಡನ್‌ನ ಪ್ರಾಥಮಿಕ ಸಂಶೋಧನೆಯ ಪ್ರಕಾರ, 2020ರಲ್ಲಿ ಸೋಂಕಿನ ಮೊದಲ ಅಲೆಯಲ್ಲಿ ಕೋವಿಡ್19 ಸೋಂಕಿಗೆ ಒಳಗಾದ ಶೇಕಡಾ 50ರಷ್ಟು ಜನರು ತಮ್ಮ ವಾಸನೆಯ ಪ್ರಜ್ಞೆಯಲ್ಲಿ ಬದಲಾವಣೆಗಳನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಕೆಲವೊಬ್ಬರಲ್ಲಿ ವಾಸನೆಯನ್ನು ಗ್ರಹಿಸುವ ಪ್ರಜ್ಞೆಯೇ ಇಲ್ಲ. ಇನ್ನು ಕೆಲವೊಬ್ಬರಲ್ಲಿ ವಾಸನೆಯನ್ನು ಗ್ರಹಿಸುವ ಸಂವೇದನೆ ಕಡಿಮೆಯಾಗಿದೆ. ಎಂದು ಹೇಳಲಾಗಿದೆ. ಸೋಂಕು ಕಡಿಮೆಯಾದ ನಂತರ ಕೆಲವರು ಚೇತರಿಸಿಕೊಂಡರೆ, ಕೆಲವರಿಗೆ ವಾಸನೆಯ ಪ್ರಜ್ಞೆಯು ಸಹಜ ಸ್ಥಿತಿಗೆ ಮರಳಲೇ ಇಲ್ಲ ಎಂದು ತಿಳಿಸಲಾಗಿದೆ.
ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ಸ್ಟಾಕ್‌ಹೋಮ್‌ನ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು 2020ರಲ್ಲಿ ಸೋಂಕಿನ ಮೊದಲ ಅಲೆಯನ್ನು ಆಧರಿಸಿ, ಕೋವಿಡ್ ಸೋಂಕು ತಗುಲಿದ 100 ವ್ಯಕ್ತಿಗಳ ಮೇಲೆ ಸಮಗ್ರ ಪರೀಕ್ಷೆಗಳನ್ನು ನಡೆಸಿದರು. ಈ ಸಂಶೋಧನೆಯಿಂದ ಕೋವಿಡ್‌ನಿಂದ ಚೇತರಿಸಿಕೊಂಡ 18 ತಿಂಗಳ ನಂತರ ಶೇಕಡಾ 4ರಷ್ಟು ಜನರು ತಮ್ಮ ವಾಸನೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದು ಸಾಬೀತಾಗಿದೆ.
Health Tips : ನಿರಂತರ ಮಾಸ್ಕ್ ಧರಿಸಿದ್ರೆ ದೇಹದಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೆಚ್ಚುತ್ತಾ?
ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯ ಪ್ರಕಾರ, ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ (Omicron) ಸೋಂಕಿನಿಂದ ವಾಸನೆ ಅಥವಾ ರುಚಿಯ ನಷ್ಟದ ಸಮಸ್ಯೆಯು ಕಡಿಮೆಯಾಗಿದೆ. ಆದರೆ ಓಮಿಕ್ರಾನ್ ಜೀವಕ್ಕೆ ಅಪಾಯಕಾರಿಯಲ್ಲ ಎಂಬುದು ಎಲ್ಲಿಯೂ ಸಾಬೀತಾಗಿಲ್ಲ ಎಂದು ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧನೆಯ ನೇತೃತ್ವ ವಹಿಸಿದ್ದ ಜೋಹಾನ್ ಲುಂಡ್‌ಸ್ಟ್ರಾಮ್ ಹೇಳಿದ್ದಾರೆ. ಸೋಂಕು ತಗುಲಿದ ಬಳಿಕ ವಾಸನೆಯ ತೀವ್ರ ನಷ್ಟವು, ಖಿನ್ನತೆಗೂ ಕಾರಣವಾಗಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.
ವಾಸನೆ ಗ್ರಹಿಸಲು ಸಾಧ್ಯವಾಗದ ಕಾರಣ ಜನರು ಹೆಚ್ಚು ಸಕ್ಕರೆ, ಉಪ್ಪು, ಕರಿದ ಆಹಾರ (Fried Food)ವನ್ನು ತಿನ್ನಲು ಬಯಸುತ್ತಾರೆ. ಈ ಮೂಲಕ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಾಗುತ್ತಾ ಹೋಗುತ್ತದೆ. ಹೆಚ್ಚಿನವರು ವಾಸನೆ ಗ್ರಹಿಸುವ ಶಕ್ತಿಯನ್ನು 100 ಪ್ರತಿಶತವದಷ್ಟು ಮರಳಿ ಪಡೆಯದಿರಬಹುದು, ಆದರೆ ಅವರಲ್ಲಿ ಹೆಚ್ಚಿನವರು ಕಡಿಮೆ ವಾಸನೆಯನ್ನು ಗ್ರಹಿಸಿ ಬದುಕುವುದನ್ನು ರೂಢಿ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.