ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡ್ತಿದ್ದಾರೆ. ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡ್ತಿದ್ದಾರೆ. ಕ್ಯಾನ್ಸರ್ ನಿಂದ ಹಿಡಿದು ಹೃದಯ ರೋಗದವರೆಗೆ ಎಲ್ಲ ರೋಗದಿಂದ ದೂರವಿರಬೇಕೆಂದ್ರೆ ಈ ಆಹಾರ ಸೇವನೆ ಮಾಡಿ.
ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ಕಿಯನ್ನು ಬೆಳೆಯಲಾಗುತ್ತದೆ. ಅಕ್ಕಿ ಸೇವನೆ ಮಾಡುವವರ ಸಂಖೆಯೂ ಭಾರತದಲ್ಲಿ ಹೆಚ್ಚಿದೆ. ಅಕ್ಕಿ ಎಂಬ ವಿಷ್ಯ ಬಂದಾಗ ನಮ್ಮ ಕರ್ನಾಟಕದ ಜನರು ಬಿಳಿ ಅಕ್ಕಿ, ಕೆಂಪು ಅಕ್ಕಿ, ಕುಚಲಕ್ಕಿ ಬಗ್ಗೆ ಮಾತನಾಡ್ತಾರೆ. ಬಹುತೇಕ ಜನರಿಗೆ ಕಪ್ಪು ಅಕ್ಕಿ ಬಗ್ಗೆ ತಿಳಿದಿಲ್ಲ. ಭಾರತದಲ್ಲಿ ಕಪ್ಪು ಅಕ್ಕಿಯನ್ನೂ ಬೆಳೆಯಲಾಗುತ್ತದೆ. ಕಪ್ಪು ಅಕ್ಕಿಯನ್ನು ಮುಖ್ಯವಾಗಿ ಉತ್ತರ ಮತ್ತು ಪೂರ್ವ ಭಾರತದಲ್ಲಿ ಹೆಚ್ಚು ಬಳಸಲಾಗುತ್ತದೆ. ಅಲ್ಲಿನ ಜನರು ಹೆಚ್ಚು ಆರೋಗ್ಯವಾಗಿರಲು ಇದೂ ಒಂದು ಕಾರಣ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ. ಕಪ್ಪು ಅಕ್ಕಿಯನ್ನು ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಬೆಳೆಯಲಾಗುತ್ತದೆ. ಕಪ್ಪು ಅಕ್ಕಿ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆಯಿದೆ. ಕಪ್ಪು ಅಕ್ಕಿ ಆರೋಗ್ಯಕ್ಕೆ ಹಾನಿಕರ ಎಂದು ಕೆಲವರು ನಂಬಿದ್ದಾರೆ. ಆದ್ರೆ ಅದು ತಪ್ಪು. ಕಪ್ಪು ಅಕ್ಕಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ವರದಿಗಳ ಪ್ರಕಾರ, ಕಪ್ಪು ಅಕ್ಕಿಯು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಅನೇಕ ಕ್ಯಾನ್ಸರ್ ವಿರೋಧಿ ಗುಣಗಳನ್ನು ಸಹ ಹೊಂದಿದೆ. ಇದಲ್ಲದೆ, ಇದು ಸಾಕಷ್ಟು ಕಬ್ಬಿಣ, ಪ್ರೋಟೀನ್ ಮತ್ತು ಫೈಬರ್ ಅಂಶವನ್ನು ಹೊಂದಿದೆ. ಕಪ್ಪು ಅಕ್ಕಿ ಸೇವಿಸುವುದರಿಂದ ದೇಹವು ಸದೃಢವಾಗಿರುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ. ಕಪ್ಪು ಅಕ್ಕಿಯಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ನಾವಿಂದು ಹೇಳ್ತೇವೆ.
ಕಪ್ಪು ಅಕ್ಕಿ (Black Rice) ಯಿಂದ ಆಗುವ ಪ್ರಯೋಜನಗಳು :
ಉರಿಯೂತ (Inflammation) ನಿವಾರಕ : ಕಪ್ಪು ಅಕ್ಕಿಯಲ್ಲಿ 23 ಕ್ಕೂ ಹೆಚ್ಚು ರೀತಿಯ ಆಂಟಿಆಕ್ಸಿಡೆಂಟ್‌ಗಳಿವೆ. ಈ ಅಕ್ಕಿ ಇತರ ಅಕ್ಕಿಗಿಂತ ಹೆಚ್ಚು ಪ್ರಯೋಜನಕಾರಿ. ಫ್ರೀ ರಾಡಿಕಲ್ ಗಳು ಇದರಲ್ಲಿ ಕಂಡುಬರುತ್ತವೆ. ಕಪ್ಪು ಅಕ್ಕಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ (Cancer) ನಂತಹ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಆಂಥೋಸಯಾನಿನ್ ಕಪ್ಪು ಅಕ್ಕಿಯ ವರ್ಣದ್ರವ್ಯವಾಗಿದೆ. ಈ ಕಾರಣದಿಂದಾಗಿ ಅಕ್ಕಿಯ ಬಣ್ಣವು ಕಪ್ಪು ಅಥವಾ ನೇರಳೆ (Violet ) ಬಣ್ಣದಲ್ಲಿರುತ್ತದೆ. ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳು ಇದರಲ್ಲಿ ಕಂಡು ಬರುತ್ತದೆ.
ಹೃದಯ (Heart) ರೋಗಕ್ಕೆ ಮದ್ದು : ಕಪ್ಪು ಅಕ್ಕಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುಂಬಾ ಪ್ರಯೋಜನಕಾರಿ. ಇದು ಉತ್ತಮ ಕೊಲೆಸ್ಟ್ರಾಲ್ (Cholesterol) ಅನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದ್ರಿಂದಾಗಿ ಹೃದಯದ ಆರೋಗ್ಯ (Health) ಸುಧಾರಿಸುತ್ತದೆ.
ಬೇಕಾಬಿಟ್ಟಿ ಸ್ನ್ಯಾಕ್ಸ್ ತಿನ್ತೀರಾ, ಕೆಟ್ಟ ಅಭ್ಯಾಸ ಬಿಡೋಕೆ ಇಲ್ಲಿದೆ ಟಿಪ್ಸ್
ಕ್ಯಾನ್ಸರ್ ಗೆ ರಾಮಬಾಣ : ತಜ್ಞರ ಪ್ರಕಾರ, ಕಪ್ಪು ಅಕ್ಕಿಯಲ್ಲಿ ಆಂಥೋಸಯಾನಿನ್ ಪ್ರಮಾಣ ಅಧಿಕವಾಗಿದೆ. ಇದನ್ನು ಆಹಾರದಲ್ಲಿ ಸೇರಿಸುವುದರಿಂದ, ಕ್ಯಾನ್ಸರ್ ವಿರೋಧಿ ಗುಣಗಳು ಸಿಗುತ್ತವೆ. ಇದು ಕ್ಯಾನ್ಸರ್ ಬರುವ ಅಪಾಯವನ್ನು ದೊಡ್ಡ ಮಟ್ಟಿಗೆ ಕಡಿಮೆ ಮಾಡುತ್ತದೆ.
ಕಣ್ಣು (Eye) ಗಳಿಗೆ ಪ್ರಯೋಜನಕಾರಿ : ಕಪ್ಪು ಅಕ್ಕಿಯು ಲುಟೀನ್ ಮತ್ತು ಝೀಕ್ಸಾಂಥಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ.ಇದು ರೆಟಿನಾವನ್ನು ಸ್ವತಂತ್ರ ರಾಡಿಕಲ್‌ಗಳ ಪರಿಣಾಮಗಳಿಂದ ರಕ್ಷಿಸುತ್ತದೆ.
ಅಂಟು ಮುಕ್ತ : ಕಪ್ಪು ಅಕ್ಕಿಯಲ್ಲಿ ಗ್ಲುಟನ್ ಇರುವುದಿಲ್ಲ. ಇದರ ಸೇವನೆಯಿಂದ ಅನೇಕ ಕರುಳು ಮತ್ತು ಕರುಳಿನ ಸಮಸ್ಯೆಗಳು ದೂರವಾಗುತ್ತವೆ.
ಹೆಂಗಸರಿಗಷ್ಟೇ ಅಲ್ಲ ಗಂಡಸರಿಗೂ ಬಂದಿದೆ Birth Control Pills
ತೂಕ ಕಡಿಮೆ ಮಾಡಲು ಸಹಾಯ : ಕಪ್ಪು ಅಕ್ಕಿಯಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ತೂಕವನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿ ಎನ್ನುತ್ತಾರೆ ತಜ್ಞರು. 100 ಗ್ರಾಂ ಕಪ್ಪು ಅಕ್ಕಿಯಲ್ಲಿ ಸುಮಾರು 4.5 ಗ್ರಾಂ ಫೈಬರ್ ಇದೆ, ಇದು ನಮ್ಮ ಜೀರ್ಣಕ್ರಿಯೆಯನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.