ಒಂದು ಚಿಕ್ಕ ಸಮಸ್ಯೆಯನ್ನು ಈ ಇಬ್ಬರು ಪುಟಾಣಿಗಳು ಹೇಗೆ ಕಂಡುಕೊಂಡಿದ್ದಾರೆ, ಇಬ್ಬರೂ ಸಮಸ್ಯೆ ಬಗೆಹರಿಸಲು ಶಕ್ಯರಾದರೇ ಎನ್ನುವ ಕುತೂಹಲದ ವಿಡಿಯೋ ವೈರಲ್ ಆಗಿದೆ.
ಸಮಸ್ಯೆ ಎನ್ನುವುದು ಎಲ್ಲರಿಗೂ ಇದ್ದೇ ಇರುತ್ತದೆ. ಜೀವನದಲ್ಲಿ ಸಮಸ್ಯೆ ಇಲ್ಲದ ವ್ಯಕ್ತಿಗಳೇ ಇಲ್ಲ ಎನ್ನಬಹುದೇನೋ. ಹಲವು ಸಂದರ್ಭಗಳಲ್ಲಿ ಸಮಸ್ಯೆಗಳು ಒಂದೇ ರೀತಿಯಾಗಿರುತ್ತವೆ. ಆದರೆ ಅದನ್ನು ನಿಭಾಯಿಸುವ ರೀತಿ ಬೇರೆ ಬೇರೆ ಆಗಿರುತ್ತದೆ. ಕಷ್ಟಗಳು ಹೆಚ್ಚೂ ಕಡಿಮೆ ಒಂದೇ ಆಗಿದ್ದರೂ ಆ ಕಷ್ಟವನ್ನು ಪರಿಹರಿಸಲು ಆಗದೇ ಅಳುತ್ತಾ ಕುಳಿತುಕೊಳ್ಳುವ ಒಂದು ವರ್ಗವಾದರೆ, ಅದೇ ಕಷ್ಟವನ್ನು, ಕಷ್ಟವೇ ಅಲ್ಲ ಎಂದುಕೊಂಡು ಬಗೆಹರಿಸುವುದು ಇನ್ನೊಂದು ವರ್ಗ. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಮಕ್ಕಳ ವಿಡಿಯೋ ಒಂದು ವೈರಲ್ ಆಗಿದೆ.
ಇದಕ್ಕೆ ಕೊಟ್ಟಿರುವ ಶೀರ್ಷಿಕೆ ಕುತೂಹಲವಾಗಿದ್ದು, ಒಂದೇ ಸಮಸ್ಯೆಗೆ ಪರಿಹಾರ ವಿಭಿನ್ನ ರೀತಿಯದ್ದು ಎಂದು ತೋರಿಸಲಾಗಿದೆ. ಇಲ್ಲಿರುವ ಎರಡು ಪುಟಾಣಿಗಳನ್ನು ಒಂದು ಅಡ್ಡಲಾಗಿ ಕಟ್ಟಿರುವ ದಾರದ ಅತ್ತ ಕಡೆ ಹಾಕಿದ್ದಾರೆ. ಇತ್ತ ಕಡೆ ಬಹುಶಃ ಅವರ ಪಾಲಕರು ನಿಂತಿರುವಂತಿದೆ. ಒಂದು ಮಗು ಆ ದಾರವನ್ನು ಹಿಡಿದು ಈ ಕಡೆ ಬರಲು ಆಗದೇ ಜೋರಾಗಿ ಅಳುತ್ತಿದೆ. ಯಾರಾದರೂ ನನ್ನ ಸಹಾಯಕ್ಕೆ ಬನ್ನಿ ಎನ್ನುವ ಅರ್ಥದಲ್ಲಿ ಅದು ಅಳುತ್ತಿದೆ. ಆದರೆ ಅದೇ ಇನ್ನೊಂದು ಮಗು, ಇದೊಂದು ಸಮಸ್ಯೆಯೇ ಅಲ್ಲ ಎಂಬಂತೆ, ಮೊದಲಿಗೆ ಆ ದಾರದ ಬಳಿ ಬಂದು ಅದನ್ನು ಹಿಡಿದು ಅತ್ತಿತ್ತ ನೋಡಿ, ಅದನ್ನು ಮೇಲಕ್ಕೆ ಎತ್ತಿ ಕೆಳಗಿನಿಂದ ನುಸುಳಿಕೊಂಡು ಬಂದಿದೆ.
undefined
ಬಹಳ ದಿನ ಹಲ್ಲುಜ್ಜದಿದ್ದರೆ ಜೀವಕ್ಕೇ ಅಪಾಯ! ತಜ್ಞ ವೈದ್ಯರು ಹೇಳುವುದೇನು? ಇಲ್ಲಿದೆ ಎಚ್ಚರಿಕೆ
ಎಷ್ಟು ಸಿಂಪಲ್ ಅಲ್ವಾ ಎನ್ನಿಸದೇ ಇರಲಾರದು. ಆದರೆ ಇದನ್ನೇ ಜೀವನದ ಕೆಲವೊಂದು ಸಮಸ್ಯೆಗಳಿಗೂ ಅನ್ವಯಿಸಬೇಕು ಎನ್ನುವ ಮಾತನ್ನು ಈ ವಿಡಿಯೋ ಹೇಳುತ್ತಿದೆ ಎನ್ನುವುದು ನೆಟ್ಟಿಗರ ಮಾತು. ಕೆಲವೊಮ್ಮೆ ನಮ್ಮ ಸಮಸ್ಯೆಗಳೂ ಇಷ್ಟೇ ಸಲೀಸಾಗಿ ಇರುತ್ತವೆ. ಸಮಸ್ಯೆಗೆ ಪರಿಹಾರವೂ ಅಲ್ಲೇ ಇರುತ್ತದೆ. ಆದರೆ ಕೊರಗಿ ಕೊರಗಿ ಅಯ್ಯೋ ದೇವರೆ ಎಂದುಕೊಳ್ಳುತ್ತಾ, ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿ ಬಿಡುತ್ತೇವೆ. ಇಷ್ಟು ಸಿಂಪಲ್ ಆಗಿರೋ ಸಮಸ್ಯೆಯನ್ನು ದೊಡ್ಡ ಬೆಟ್ಟದಂಥ ಸಮಸ್ಯೆ ಎಂದುಕೊಂಡು ಯೋಚಿಸಿದಾಗ ಮನಸ್ಸು ಪರಿಹಾರದ ಕಡೆಗೆ ಯೋಚನೆ ಮಾಡದೇ ಮನಸ್ಸು ಬ್ಲಾಕ್ ಆಗಿ ಬಿಡುತ್ತದೆ. ಆ ಸಮಯದಲ್ಲಿ, ಈ ಅಳುವ ಮಗುವಿನ ಸ್ಥಿತಿ ನಮ್ಮದಾಗುತ್ತದೆ ಎನ್ನುವುದನ್ನು ತುಂಬಾ ಸೂಕ್ಷ್ಮವಾಗಿ ಈ ವಿಡಿಯೋ ಸಾರಿ ಹೇಳುತ್ತಿದೆ.
ಅದೇ ಇನ್ನೊಂದೆಡೆ, ಮಕ್ಕಳನ್ನೂ ಪಾಲಕರು ತೀರಾ ತಮ್ಮ ಮೇಲೆ ಅವಲಂಬಿತರನ್ನಾಗಿ ಮಾಡಿದರೆ ಮೊದಲ ಮಗುವಿನ ಸ್ಥಿತಿ ಎಲ್ಲ ಮಕ್ಕಳಿಗೂ ಆಗುತ್ತದೆ, ಅವರನ್ನು ಸ್ವಲ್ಪ ಸ್ವಾವಲಂಬಿಯನ್ನಾಗಿ ಮಾಡಿ, ಚಿಕ್ಕ ಪುಟ್ಟ ಸಮಸ್ಯೆಯನ್ನು ಪರಿಹರಿಸಲು ಪಾಲಕರೇ ಮುಂದಾಗದಿದ್ದರೆ ಎರಡನೆಯ ಮಗುವಿನ ರೀತಿ ಮಕ್ಕಳ ಮನಸ್ಸು ಬೆಳೆಯುತ್ತದೆ. ಇವರು ಮುಂದೆ ದೊಡ್ಡ ಸಮಸ್ಯೆಗಳನ್ನೂ ಸಲೀಸಾಗಿ ಬಗೆಹರಿಸಿಬಿಡುತ್ತಾರೆ. ಆದರೆ ಇರುವುದು ಒಂದೋ, ಎರಡೋ ಮಗು ಎಂದುಕೊಂಡು ಎಲ್ಲದ್ದಕ್ಕೂ ಅಪ್ಪ-ಅಮ್ಮನೇ ಅವರನ್ನು ಏನೂ ಸಮಸ್ಯೆ ಬರದಂತೆ ಸೆರಗಲ್ಲಿ ಕಟ್ಟಿಕೊಂಡು ಓಡಾಡುತ್ತಿದ್ದರೆ, ಬಹುಶಃ ಮುಂದೆ ಕೂಡ ಆ ಮಗು ತನಗೆ ಎದುರಾಗುವ ಸಿಂಪಲ್ ಸಮಸ್ಯೆಯನ್ನೂ ಎದುರಿಸಲು ಆಗದೇ ಯಾರನ್ನೋ ಅವಲಂಬಿಸುವ ಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವುದನ್ನೂ ಈ ವಿಡಿಯೋ ತೋರಿಸಿಕೊಡುತ್ತಿದೆ.
ಆ್ಯಂಕರ್ ಅಪರ್ಣಾ ಸಾವು, ಶ್ವಾಸಕೋಶದ ಕ್ಯಾನ್ಸರ್ ಭೀತಿ, ಏನು ಹೇಳುತ್ತೆ ಸ್ಟಡೀಸ್?