WWE ರೆಸ್ಲರ್ ಎರಿಕಾ ಹ್ಯಾಮಂಡ್ ಮದ್ವೆಯಾದ ಟೆಕ್ ಬಿಲಿಯನೇರ್ ಅಂಕುರ್ ಜೈನ್

First Published | Apr 28, 2024, 3:11 PM IST


ಟೆಕ್ ಬಿಲಿಯನೇರ್, ಬಿಲ್ಟ್  ರಿವಾರ್ಡ್ಸ್‌ನ ಸಿಇಒ ಅಂಕುರ್ ಜೈನ್ ಅವರು ಮಾಜಿ ಡಬ್ಲ್ಯುಡಬ್ಲ್ಯುಇ  ರೆಸ್ಲರ್ ಎರಿಕಾ ಹ್ಯಾಮಂಡ್ ಅವರೊಂದಿಗೆ ಅದ್ದೂರಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಏಪ್ರಿಲ್ 26 ರಂದು ಈಜಿಫ್ಟ್‌ನ ಗ್ರೇಟ್ ಸ್ಫಿಂಕ್ಸ್ ಮುಂದೆ ಇವರಿಬ್ಬರೂ ಮದುವೆಯಾಗಿದ್ದಾರೆ. 

ಟೆಕ್ ಬಿಲಿಯನೇರ್, ಬಿಲ್ಟ್  ರಿವಾರ್ಡ್ಸ್‌ನ ಸಿಇಒ ಅಂಕುರ್ ಜೈನ್ ಅವರು ಮಾಜಿ ಡಬ್ಲ್ಯುಡಬ್ಲ್ಯುಇ  ರೆಸ್ಲರ್ ಎರಿಕಾ ಹ್ಯಾಮಂಡ್ ಅವರೊಂದಿಗೆ ಅದ್ದೂರಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಏಪ್ರಿಲ್ 26 ರಂದು ಈಜಿಫ್ಟ್‌ನ ಗ್ರೇಟ್ ಸ್ಫಿಂಕ್ಸ್ ಮುಂದೆ ಇವರಿಬ್ಬರೂ ಮದುವೆಯಾಗಿದ್ದಾರೆ. 

ಈಜಿಪ್ಟ್‌ನ ಗ್ರೇಟ್ ಪಿರಮಿಡ್‌ಗಳ ಭವ್ಯ ಹಿನ್ನೆಲೆಯ ಮುಂದೆ ನಡೆದ ಅದ್ದೂರಿ ಸಮಾರಂಭದಲ್ಲಿ ಇಬ್ಬರು ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ. ವಿವಾಹ ಪೂರ್ವ ಆಚರಣೆಗಳು ಬಹಳ ಅದ್ದೂರಿಯಾಗಿ ನಡೆದಿದ್ದು,  ದಕ್ಷಿಣ ಆಫ್ರಿಕಾದಲ್ಲಿ ಮೂರು ರಾತ್ರಿಯ ಸಫಾರಿಯೊಂದಿಗೆ ಪ್ರಾರಂಭವಾಗಿತ್ತು.

Latest Videos


ಇಲ್ಲಿ ಒಂದು ರಾತ್ರಿಗೆ 2,000 ಡಾಲರ್ ವೆಚ್ಚವಾಗುತ್ತದೆ. ನಂತರ ದಂಪತಿಗಳು ಈಜಿಪ್ಟ್‌ಗೆ ಹೊರಟ್ಟಿದ್ದು, ಅಲ್ಲಿ 130 ಅತಿಥಿಗಳಿಗೆ ನಾಲ್ಕು ದಿನಗಳ ಪಾರ್ಟಿಯನ್ನು ಆಯೋಜಿಸಿದರು ಎಂದು ವರದಿಯಾಗಿದೆ.

ಎರಿಕಾ ಜೊತೆ ಮದುವೆಗೆ ನಾನು ಮೊದಲಿಗೆ ಬಾಹ್ಯಾಕಾಶವನ್ನು ವೇದಿಕೆಯಾಗಿಸಲು ಬಯಸಿದ್ದೆ ಎಂದು ಅಂಕುರ್ ಜೈನ್ ಹೇಳಿದ್ದಾರೆ. ಆದರೆ ಇವರ ಮದ್ವೆಯ ಸ್ಥಳವು ವಿಶಿಷ್ಟವಾಗಿತ್ತು. ಈ ಜೋಡಿ ಯಾವುದೇ ಸಾಂಪ್ರದಾಯಿಕ ಪಾರ್ಟಿಯನ್ನು ಮಾಡಲಿಲ್ಲ, ಪಾಶ್ಚಿಮಾತ್ಯ ಶೈಲಿಯಲ್ಲಿರುವಂತೆ ಸಾಂಪ್ರದಾಯಿಕ ವಿವಾಹದ ಕೇಕ್ ಅನ್ನು ಕತ್ತರಿಸಿರಲಿಲ್ಲ

ಬಿಲ್ಟ್ ರಿವಾರ್ಡ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಅಂಕುರ್ ಜೈನ್ ಅವರು  ರಂಬಲ್ ಬಾಕ್ಸಿಂಗ್‌ನಲ್ಲಿ ಕೆಲಸ ಮಾಡಲು ಶುರು ಮಾಡಿದ ಎರಿಕಾ ಅವರ ಪರಿಚಯವಾಗಿದೆ. ಆ ಸಮಯದಲ್ಲಿ ಫಿಟ್‌ನೆಟ್‌ ಇನಸ್ಟ್ರಕ್ಟರ್ ಆಗಿ ಎರಿಕಾ ಕೆಲಸ ಮಾಡುತ್ತಿದ್ದು, ಈಗ ಆ ಸಂಸ್ಥೆಯೇ ಎರಿಕಾಗೆ ಸೇರಿದೆ.

ಅಂಕುರ್‌ ಜೈನ್ ಎರಿಕಾ ಮದ್ವೆಯಲ್ಲಿ ಹಾಲಿವುಡ್‌ನ ಅನೇಕ ತಾರೆಯರು ಭಾಗವಹಿಸಿದ್ದರು. ಮದುವೆಗೆ ಬಂದ ಅತಿಥಿಗಳಿಗೆ ಸ್ಪಿಂಕ್ಸ್‌ನ ಪಿರಮಿಡ್‌ಗಳನ್ನು ಖಾಸಗಿಯಾಗಿ ನೋಡುವುದಕ್ಕೆ ಅವಕಾಶ ಇತ್ತು.

ಹಾಗೆಯೇ ಗ್ರ್ಯಾಂಡ್ ಈಜಿಫ್ಟಿಯನ್ ಮ್ಯೂಸಿಯಂನಲ್ಲಿ ಅದ್ದೂರಿ ಡಿನ್ನರ್ ಪಾರ್ಟಿಯನ್ನು ಅಯೋಜಿಸಲಾಗಿತ್ತು. ಅಸಂಪ್ರದಾಯಿಕ ಶೈಲಿಯಲ್ಲಿ ಜೋಡಿ ಮದ್ವೆಯಾಗಲು ಬಯಸಿದ್ರಿಂದ ವೆಡ್ಡಿಂಗ್ ಕೇಕ್ ಆಗಲಿ, ಬ್ರೈಡಲ್ ಪಾರ್ಟಿ ಆಗಿರಲಿ, ಬ್ರೈಡ್‌ ಮೈಡ್ ಆಗಲಿ ಇರಲಿಲ್ಲ, 

ಅಂಕುರ್ ಜೈನ್ ಮತ್ತು ಎರಿಕಾ ಹ್ಯಾಮಂಡ್ ಅವರ ಈ ಅದ್ದೂರಿ ಈಜಿಪ್ಟಿನ ವಿವಾಹಕ್ಕೆ ಲ್ಯಾನ್ಸ್ ಬಾಸ್  ಮೈಕೆಲ್ ಟರ್ಚಿನ್, ರಾಬಿನ್ ಥಿಕ್ ಮತ್ತು ಏಪ್ರಿಲ್ ಲವ್ ಜಿಯರಿ, ಕೆವಿನ್ ಒ'ಲಿಯಾರಿ ಮತ್ತು ಲಿಂಡಾ ಓ'ಲಿಯರಿ, ಪ್ರಭಾವಿ ಸೆರೆನಾ ಕೆರಿಗನ್, ಮಾಜಿ ಟೆಕ್ಸಾಸ್ ಗವರ್ನರ್ ರಿಕ್ ಪೆರ್ರಿ ಮತ್ತು ಅನಿತಾ ಪೆರ್ರಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ರಂಗು ತುಂಬಿದರು. 

click me!