ಅಂಬಾನಿ ಮನೆ ಸಮಾರಂಭಕ್ಕಿಂತ ಹೆಚ್ಚು ಆಕರ್ಷಣೆ ಪಡೆಯುತ್ತಿದೆ ಸ್ವಿಸ್ ಆಲ್ಪ್ಸ್‌ನಲ್ಲಿ ನಡೆದ ಈ ವಿವಾಹ

First Published Apr 18, 2024, 5:57 PM IST

ಭಾರತೀಯರ ವಿವಾಹ ಸಮಾರಂಭಗಳ ಕಲ್ಪನೆಯೇ ಬೇರೆ, ಪಾಶ್ಚಾತ್ಯರದು ಡಿಸ್ನಿ, ಐಸ್, ಪ್ರಿನ್ಸೆಸ್ ಥೀಮ್ ಕಲ್ಪನೆಗಳು ಹೆಚ್ಚು. ಈ ವಿವಾಹದ ಫೋಟೋ ನೋಡಿದವರು ಇದಂಥೂ ಯಾವುದೋ ಫೇರಿಟೇಲ್‌ಗೆ ಜೀವ ಬಂದಂತಿದೆ ಅಂತಿದಾರೆ.

ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ರ ವಿವಾಹಪೂರ್ವ ಆಚರಣೆಯ ಚಿತ್ರಗಳು ಮತ್ತು ಕ್ಲಿಪ್‌ಗಳು ಇನ್ನೂ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿವೆ.

ಈ ವಾರದ ಆರಂಭದಲ್ಲಿ, ವಧು-ವರರು ತಮ್ಮ 'ಪ್ರಿನ್ಸೆಸ್ ಡೈರೀಸ್' ರಾಯಲ್ ಸ್ಲಂಬರ್ ಪಾರ್ಟಿ-ಥೀಮ್ ಬ್ರೈಡಲ್ ಶವರ್ ಅನ್ನು ಹೊಂದಿದ್ದರು. ಇದೇ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.

ಈ ಎಲ್ಲವನ್ನೂ ನೋಡಿದ ಮೇಲೆ ಅಂಬಾನಿಗಳನ್ನೂ ಮೀರಿ ವಿಶೇಷವಾಗಿ ಯಾರೂ ವಿವಾಹವಾಗಲು ಸಾಧ್ಯವಿಲ್ಲ ಎಂದು ನೀವಂದುಕೊಂಡಿದ್ದರೆ, ನಿಮ್ಮ ನಿಲುವು ಬದಲಿಸುತ್ತವೆ ಈ ಫೋಟೋಗಳು.

ಈ ಜೋಡಿಯ ವಿವಾಹದಲ್ಲಿ ವಿಶ್ವದ ಎಲ್ಲ ಸೆಲೆಬ್ರಿಟಿಗಳಿರಲಿಲ್ಲ, ಜಿಗಿಮಿಗಿ ಇರಲಿಲ್ಲ, ಆದರೆ, ಇದಾದ ಸ್ಥಳ, ಐಸ್ ಥೀಮ್ ನಿಮ್ಮ ಮನಸ್ಸನ್ನು ಐಸಿನಂತೇ ಕರಗಿಸುತ್ತದೆ. 

ರೇಸರ್ ಡ್ಯಾರೆನ್ ಲೆಯುಂಗ್ ಮತ್ತು ಅವನ ಲೇಡಿಲೋವ್ ಲೂಸಿ ಲೆಯುಂಗ್ ಸ್ವಿಟ್ಜರ್ಲೆಂಡ್‌ನ ಝೆರ್ಮಾಟ್ ಅನ್ನು ತಮ್ಮ ವಿವಾಹಕ್ಕೆ ಗಮ್ಯವಾಗಿ ಆಯ್ದುಕೊಂಡರು.

2,727 ಮೀಟರ್ ಎತ್ತರದಲ್ಲಿ ದಟ್ಟ ಹಿಮಚ್ಛಾದಿತ ಪ್ರದೇಶ.. ಎಲ್ಲಿ ನೋಡಿದರೂ ಬಿಳಿಯ ಹಾಸು.. ಅದರ ನಡುವೆ ಬಿಳಿ ಐಸ್ ಬಾಕ್ಸ್‌ನೊಳಗೆ ಬಿಳಿ ಗೌನ್ ತೊಟ್ಟು ರಾಜಕುಮಾರಿಯಂತೆ ನಿಂತ ವಧು..

ಎಲ್ಲೆಲ್ಲೂ ಐಸಿನದೇ ಅಲಂಕಾರ. ಅದೇ ಬಣ್ಣಗಳ ಹೂವಿನ ಉಡುಗೆ ತೊಟ್ಟ ಸ್ವಾಗತಕಾರಿಣಿಯರು, ಮಧ್ಯೆ ನೀರಿನಂತೆ ಕಾಣುವ ಗಾಜಿನ ಹಾಸು..

ಇವುಗಳ ನಡುವೆ ವಧು ವರ ನಡೆದು ಬರುತ್ತಿದ್ದರೆ ಇದು ಸತ್ಯವೋ, ಕಾಲ್ಪನಿಕವೋ ಎಂದು ಅನುಮಾನ ಹುಟ್ಟುವಷ್ಟು ಸೊಗಸಾಗಿ ಈ ಮದುವ ನಡೆದಿದೆ. 

ಈ ಚಳಿಗಾಲದ ವಂಡರ್‌ಲ್ಯಾಂಡ್ ಮದುವೆಯನ್ನು ಪ್ರಸಿದ್ಧ ಛಾಯಾಗ್ರಾಹಕ ಡೇವಿಡ್ ಬಾಸ್ಟಿಯಾನೋನಿ ಸೆರೆ ಹಿಡಿದಿದ್ದಾರೆ. ಇದೊಂದು ಮಾಂತ್ರಿಕ ಲೋಕದಂತೆಯೇ ಭಾಸವಾಗುತ್ತದೆ. 

ಅಲ್ಲಿ ಅತಿಥಿಗಳಿಗಿಟ್ಟ ಚೇರ್‌ಗಳು ಕೂಡಾ ಗಾಜಿನವೋ, ಐಸಿಂದಲೇ ಒಡಮೂಡಿದವೋ ಅರಿವಾಗದಷ್ಟು ಪಾರದರ್ಶಕವಾಗಿ ಸುಂದರವಾಗಿವೆ. 

ಚಂಡಮಾರುತಗಳು, ಹಿಮಪಾತ, ಕೆಟ್ಟ ಹವಾಮಾನ, ನಕಾರಾತ್ಮಕ ತಾಪಮಾನ ಸೇರಿದಂತೆ ಅನೇಕ ಅಡೆತಡೆಗಳನ್ನು ಎದುರಿಸಿ 40 ದಿನ ಒದ್ದಾಡಿ ಇಲ್ಲಿ ಈ ಮಟ್ಟಿಗೆ ಹೂವಿನ ಅಲಂಕಾರ ಮಾಡಿದ್ದೇವೆ ಎಂದು ಐ ಆಮ್ ಫ್ಲವರ್ ಕಂಪನಿ ಹೇಳಿದೆ. 

click me!