ಭಾರತದಲ್ಲಿ ಮನೆ ಮುಂದೆ ಗೇಟ್‌, ಕಾಂಪೌಂಡ್‌ಗಾಗಿ ಜಗಳ; ಅಮೆರಿಕದಲ್ಲಿ ಗೇಟ್‌, ಕಾಂಪೌಂಡ್‌ ಹಾಕೋದೇ ಇಲ್ಲ; ಯಾಕೆ?

Published : May 25, 2026, 03:43 PM IST

Why American Houses Don't Have Gates: ಭಾರತದಲ್ಲಿ ಸ್ವಲ್ಪ ಜಾಗ ಸಿಕ್ರೂ, ಗೇಟ್‌ ಹಾಕಿ ಇದು ನನ್ನ ಜಾಗ ಅಂತಾರೆ. ಆದರೆ ಅಮೆರಿಕದಲ್ಲಿ ಮಾತ್ರ ಎಲ್ಲಿಯೂ ಕಾಂಪೌಂಡ್‌ ಇರೋದಿಲ್ಲ, ಗೇಟ್‌ ಇರೋದಿಲ್ಲ. ಅಮೆರಿಕದಲ್ಲಿ ಮನೆಯ ರಸ್ತೆಯಿಂದ ನೇರವಾಗಿ ಹುಲ್ಲು ಕಾಣುತ್ತದೆ. ಇದಕ್ಕೂ ಕೂಡ ಕಾರಣ ಇದೆ.

PREV
15
Homeowners Association ಕಟ್ಟುನಿಟ್ಟಾದ ನಿಯಮಗಳು

ಅಮೆರಿಕದಲ್ಲಿ 'ಹೋಮ್ ಓನರ್ಸ್ ಅಸೋಸಿಯೇಷನ್' (HOA) ಎಂಬ ಸಮಿತಿ ಇದೆ. ಅಕ್ಕ ಪಕ್ಕದ ಮನೆ ಕೂಡ ಒಂದೇ ರೀತಿ ಇರಬೇಕು, ಸುಂದರವಾಗಿರಬೇಕು ಎಂದುಕೊಳ್ತಾರೆ. ಹೀಗಾಗಿ ಮನೆಯ ಸೌಂದರ್ಯ ಹಾಳಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಗೇಟ್‌, ಕಾಂಪೌಂಡ್‌ ಹಾಕೋ ಹಾಗಿಲ್ಲ.

25
ಸುರಕ್ಷತೆ, ಕಡಿಮೆ ಅಪರಾಧದ ಪ್ರಮಾಣ

ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಕಳ್ಳತನ ಅಥವಾ ಅಪರಾಧ ಆಗೋದು ಕಡಿಮೆ. ಅಲ್ಲಿ ಪೊಲೀಸ್‌ ವ್ಯವಸ್ಥೆ ಚೆನ್ನಾಗಿದೆ, CCTV ಕ್ಯಾಮೆರಾ, ಸೆಕ್ಯೂರಿಟಿ ಅಲಾರಂ, ಸ್ಮಾರ್ಟ್ ಡೋರ್ ಬೆಲ್‌ ಕೂಡ ಇರುತ್ತದೆ. ಹೀಗಾಗಿ ಗೇಟ್‌, ಕಾಂಪೌಂಡ್‌ ಬೇಡ.

35
ಮುಕ್ತತೆಯ ಸಂಸ್ಕೃತಿ

ಅಮೆರಿಕದಲ್ಲಿ ಮುಕ್ತತೆಗೆ (Openness) ಹೆಚ್ಚು ಮಹತ್ವ ಕೊಡ್ತಾರೆ. ಮನೆಯ ಮುಂದೆ ಗೇಟ್ ಅಥವಾ ಕಾಂಪೌಂಡ್‌ ಹಾಕಿದರೆ, ಪಕ್ಕದಮನೆಯವರಿಂದ ನಮ್ಮನ್ನು ಬೇರ್ಪಡಿಸಿದಂತೆ ಎಂದು ನಂಬಲಾಇದೆ. ಅಷ್ಟೇ ಅಲ್ಲದೆ ಅದನ್ನು ಅಸಹ್ಯ ಎಂದು ಕೂಡ ಅಂದುಕೊಂಡಿದ್ದಾರೆ.

45
ತುರ್ತು ಸೇವೆ ಮುಖ್ಯ

ಯಾವುದೇ ಸಮಸ್ಯೆ ಬಂದಾಗಲೂ ಅಲ್ಲಿ, ಗೇಟ್‌ಗಳು ಅಡ್ಡಿಯಾಗಬಾರದು. ಮನೆಗೆ ಬೆಂಕಿ ಬಿದ್ದಾಗ ಅಥವಾ ಯಾರಿಗಾದರೂ ಆರೋಗ್ಯ ಸಮಸ್ಯೆ ಆದಾಗ ಬಹಳ ಸುಲಭವಾಗಿ ರೋಗಿಗಳನ್ನು ಆಂಬುಲೆನ್ಸ್‌ಗೆ ಹಾಕಲು ಅನುಕೂಲ ಆಗಬೇಕು.

55
ಅಮೆರಿಕದ ಪ್ರಾಪರ್ಟಿ ವಿನ್ಯಾಸ

ಅಮೆರಿಕದ ಮನೆಗಳನ್ನು ಮುಂಭಾಗ ಹೀಗೆ ಇರಬೇಕು, ಹಿಂಭಾಗ ಹೀಗೆ ಇರಬೇಕು ಎಂದು ನಿಯಮ ಇದೆ. ಮನೆಯ ಹಿಂಭಾಗ ಮರದ ಅಥವಾ ಪ್ಲಾಸ್ಟಿಕ್‌ನ ಬೇಲಿ ಹಾಕಿರುತ್ತಾರೆ.

ಪಾರ್ಸೆಲ್ ಡೆಲಿವರಿ ಸುಲಭವಾಗಲು

ಅಮೆರಿಕದಲ್ಲಿ ರಸ್ತೆಯ ಪಕ್ಕದಲ್ಲೇ ಅಂಚೆ ಪೆಟ್ಟಿಗೆಗಳು ಇರುತ್ತವೆ. ಡೆಲಿವರಿ ಬಾಯ್‌ಗಳು ನೇರವಾಗಿ ಬಂದು ಮನೆಯ ಮುಂಭಾಗದ ಬಾಗಿಲ ಬಳಿ ಇಟ್ಟು ಹೋಗುತ್ತಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories