ಪ್ರಧಾನಿ ಮೋದಿ ಭೇಟಿ ಬಳಿಕ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಯಾಗುತ್ತಿದೆ. ಆಂಡ್ರಿಯಾ ಜಿಯಾಂಬ್ರುನೊ ಜೊತೆಗಿನ 10 ವರ್ಷದ ಸಂಬಂಧ, ಪುತ್ರಿಯ ಜನನ ಮತ್ತು 2023ರಲ್ಲಿ ನಡೆದ ಬ್ರೇಕಪ್ ಹಿನ್ನೆಲೆಯ ಬಗ್ಗೆ ಕುತೂಹಲಕರ ವಿವರ.
ಪ್ರಧಾನಿ ನರೇಂದ್ರ ಮೋದಿ(PM Modi) ಅವರು ತಮ್ಮ ಐದು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಇತ್ತೀಚೆಗೆ ಇಟಲಿಗೆ ನೀಡಿದ್ದರು. ಅವರನ್ನು ರೋಮ್‌ನಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ(Georgia Meloni) ಆತ್ಮೀಯವಾಗಿ ಸ್ವಾಗತಿಸಿದ್ದರು. ಈ ಭೇಟಿಯ ಸಮಯದಲ್ಲಿ ಮೆಲೋನಿ ಅವರು ಪ್ರಧಾನಿ ಮೋದಿ ಜೊತೆಗಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಅವರನ್ನು 'ನನ್ನ ಸ್ನೇಹಿತ' ಎಂದು ಬಣ್ಣಿಸಿದ್ದರು. ಈ ಬೇಟಿ ವೇಳೆ 'ಮೆಲೋಡಿ' ಚಾಕೊಲೆಟ್ ಫೋಟೋ ಜಗತ್ತಿನಾದ್ಯಂತ ವೈರಲ್ ಆಯ್ತು. ಪ್ರಧಾನಿ ಮೋದಿ ಇಟಲಿಗೆ ಭೇಟಿ ಬೆನ್ನಲ್ಲೇ ಇದೀಗ ಜಾರ್ಜಿಯಾ ಮೆಲೋನಿ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಅನೇಕರು ಕೂತುಹಲದಿಂದ ಕೆದಕಲು ಶುರು ಮಾಡಿದ್ದಾರೆ. ಮದುವೆಯಾಗದೆ ತಾಯಿಯಾದಳಾ ಮೆಲೋನಿ? ಜಾರ್ಜಿಯಾ ಮೆಲೋನಿ ಅವರ ಗೆಳೆಯ ಯಾರು? ಕುತೂಹಲಕಾರಿ ವಿಚಾರ ಇಲ್ಲಿದೆ ನೋಡಿ.
26
ಜಾರ್ಜಿಯಾ ಮೆಲೋನಿ ಮಾಜಿ ಗೆಳೆಯ ಯಾರು?
ಜಾರ್ಜಿಯಾ ಮೆಲೋನಿ ಅವರ ದೀರ್ಘಕಾಲದ ಸಂಗಾತಿಯಾಗಿದ್ದ, ಇಟಾಲಿಯನ್ ಪತ್ರಕರ್ತ ಮತ್ತು ಟಿವಿ ನಿರೂಪಕ ಆಂಡ್ರಿಯಾ ಜಿಯಾಂಬ್ರುನೊ. ಇಬ್ಬರೂ ಮೊದಲ ಬಾರಿ 2014ರಲ್ಲಿ ಟಿವಿ ಸ್ಟುಡಿಯೋದಲ್ಲಿ ಭೇಟಿಯಾದರು. ಅದೇ ಸ್ಟುಡಿಯೋಗೆ ಅತಿಥಿಯಾಗಿ ಬಂದಿದ್ದ ಮೆಲೋನಿ ಮತ್ತು ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ಜಿಯಾಂಬ್ರುನೊ ನಡುವಿನ ಪರಿಚಯ ಕ್ರಮೇಣ ಗಾಢ ಸಂಬಂಧವಾಗಿ ಬೆಳೆಯಿತು.
36
ಮದುವೆಯಾಗದೆ 10 ವರ್ಷಗಳ ಕಾಲ ಒಟ್ಟಿಗೆ ಜೀವನ
ಇಬ್ಬರೂ ಅಧಿಕೃತವಾಗಿ ಮದುವೆಯಾಗಿರಲಿಲ್ಲ. ಆದರೂ ಸುಮಾರು 10 ವರ್ಷಗಳ ಕಾಲ ಒಟ್ಟಿಗೆ ಲಿವಿಂಗ್ ಟುಗೆದರ್ ಇದ್ದರು. ಈ ಅವಧಿಯಲ್ಲಿ ಅವರ ಸಂಬಂಧವನ್ನು ಇಟಲಿಯ ರಾಜಕೀಯ ಮತ್ತು ಮಾಧ್ಯಮ ವಲಯಗಳು ಸದಾ ಗಮನಿಸುತ್ತಿದ್ದವು.
ಹತ್ತು ವರ್ಷಗಳ ಒಟ್ಟಿಗೆ ಇದ್ದ ಪರಿಣಾಮವಾಗಿ 2016ರಲ್ಲಿ ಈ ದಂಪತಿಗೆ ಗಿನೆವ್ರಾ ಎಂಬ ಪುತ್ರಿ ಜನಿಸಿದರು. ಪ್ರಧಾನಿಯಾಗಿದ್ದರೂ ಕುಟುಂಬ ಜೀವನ ಮತ್ತು ತಾಯ್ತನವನ್ನು ಹೇಗೆ ಬ್ಯಾಲೆನ್ಸ್ ಮಾಡಿದರು ಎಂಬ ಬಗ್ಗೆ ಮೆಲೋನಿ ಹಲವಾರು ಬಾರಿ ಸಾರ್ವಜನಿಕವಾಗಿ ಮಾತನಾಡಿದ್ದರು.
56
ಆಂಡ್ರಿಯಾ ಜಿಯಾಂಬ್ರುನೊ ಕ್ಲಿಪ್ ಲೀಕ್!
ಅಕ್ಟೋಬರ್ 2023ರಲ್ಲಿ ಇಬ್ಬರೂ ಬೇರ್ಪಟ್ಟಿದ್ದೇವೆ ಎಂದು ಮೆಲೋನಿ ಸ್ವತಃ ಘೋಷಿಸಿದರು. ಜಿಯಾಂಬ್ರುನೊ ಅವರ ಆಫ್-ಏರ್ ವಿಡಿಯೋ ಮತ್ತು ಆಡಿಯೋ ಕ್ಲಿಪ್‌ಗಳು ಲೀಕ್ ಆದ ನಂತರ ಈ ನಿರ್ಧಾರ ಕೈಗೊಳ್ಳಲಾಯಿತು ಎಂಬುದು ತಿಳಿದುಬಂದಿದೆ. ಈ ಕ್ಲಿಪ್‌ಗಳಲ್ಲಿ ಸಹೋದ್ಯೋಗಿಗಳ ಜೊತೆಗೆ ಅನುಚಿತವಾಗಿ ವರ್ತಿಸಿರುವುದು ಇಬ್ಬರ ನಡುವೆ ನಂಬಿಕೆ ಮುರಿದುಬೀಳಲು ಕಾರಣವಾಯ್ತು ಎನ್ನಲಾಗಿದೆ.
66
ಆಂಡ್ರಿಯಾ ಜಿಯಾಂಬ್ರುನೊ ಮೆಲೋನಿ ಹತ್ತು ವರ್ಷಗಳ ಸಂಬಂಧಕ್ಕೆ ಬ್ರೇಕ್
ಸುಮಾರು ಒಂದು ದಶಕದ ದೀರ್ಘ ಸಂಬಂಧದ ನಂತರ ಇಬ್ಬರೂ ತಮ್ಮ ಸಂಬಂಧಗಳನ್ನ ಬೇರ್ಪಡಿಸಿಕೊಂಡರು. ಜಾರ್ಜಿಯಾ ಮೆಲೋನಿ ತಮ್ಮ ಸ್ಥಾನಮಾನ ಮತ್ತು ಸಾರ್ವಜನಿಕ ಘನತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆಗಳು ನಡೆಯುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ