ಭಾರತದಲ್ಲಿ ಸುಮ್‌ ಸುಮ್ನೆ ವೆಹಿಕಲ್ ಹಾರ್ನ್‌ ಮಾಡ್ತಾರೆ; ಅಮೆರಿಕದಲ್ಲಿ ಹಾರ್ನ್‌ ಮಾಡೋದೇ ಇಲ್ಲ! ಯಾಕೆ?

Published : May 25, 2026, 03:14 PM IST

What is a car horn called in America: ಭಾರತದಲ್ಲಿ ಗಾಡಿಯಿದೆ ಎಂದು ಹಾರ್ನ್‌ ಮಾಡೋದುಂಟು. ಯಾರನ್ನೋ ಕರೆಯಲು ಕೂಡ ಹಾರ್ನ್‌ ಮಾಡ್ತಾರೆ. ಆದರೆ ಅಮೆರಿಕದಲ್ಲಿ ಆ ರೀತಿ ಹಾರ್ನ್‌ ಮಾಡೋದು ತುಂಬ ಅಪರೂಪ. ಇದಕ್ಕೂ ಕಾರಣ ಇದೆ.

PREV
16
ಕಾನೂನು ನಿಯಮಗಳು, ದಂಡ

ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಹಾರ್ನ್ ಮಾಡೋ ಹಾಗಿಲ್ಲ. ಇದಕ್ಕೆ ಒಂದಿಷ್ಟು ನಿಯಮ ಇದೆ. ಅಪಘಾತವನ್ನು ತಪ್ಪಿಸೋದಿಕ್ಕೆ, ತುರ್ತು ಸಂದರ್ಭಗಳಲ್ಲಿ ಮಾತ್ರ ಹಾರ್ನ್‌ ಮಾಡಬೇಕು. ಗ್ರೀನ್‌ ಸಿಗ್ನಲ್‌ ಬಂತು ಎಂದು ಹಾರ್ನ್‌ ಮಾಡಿದರೆ ದಂಡ ಕಟ್ಟಬೇಕು.

26
ಸಾಂಸ್ಕೃತಿಕ ದೃಷ್ಟಿಕೋನ, ಅಸಭ್ಯತೆ

ಅಮೆರಿಕದವರ ಪ್ರಕಾರ ಹಾರ್ನ್ ಮಾಡೋದು ಅತ್ಯಂತ ಅಸಭ್ಯ ನಡವಳಿಕೆಯಂತೆ. ಹಾರ್ನ್‌ ಮಾಡಿದರೆ ಎದುರಿಗಿರುವ ಚಾಲಕನಿಗೆ ಬೈಯ್ದರು ಅಥವಾ ಸಿಟ್ಟು ಮಾಡಿಕೊಂಡರು ಎಂಬ ಅರ್ಥ ಬರುತ್ತದೆ. ಅಲ್ಲಿ ಕೂಲ್‌ ಆಗಿ ಗಾಡಿ ಓಡಿಸಬೇಕು.

36
ಅತ್ಯುತ್ತಮ ರಸ್ತೆ ವ್ಯವಸ್ಥೆ, ಸಿಗ್ನಲ್‌ಗಳು

ಅಮೆರಿಕದ ರಸ್ತೆಗಳು, ಟ್ರಾಫಿಕ್ ವ್ಯವಸ್ಥೆ ನಿಜಕ್ಕೂ ಚೆನ್ನಾಗಿವೆ, ವೈಜ್ಞಾನಿಕವಾಗಿ, ಹೀಗಾಗಿ ಹಾರ್ನ್‌ ಮಾಡೋ ಅವಶ್ಯಕತೆ ಕೂಡ ಇರೋದಿಲ್ಲ. ಪ್ರತಿ ರಸ್ತೆಯಲ್ಲೂ ಲೇನ್ ಮಾರ್ಕಿಂಗ್‌ಗಳು, ಸೈನ್ ಬೋರ್ಡ್‌ಗಳು, ಜಿಪಿಎಸ್ ಕೂಡ ಇರುತ್ತದೆ. ಡ್ರೈವರ್‌ಗಳಿಗೆ ಮೊದಲು ಎಲ್ಲಿಗೆ ಹೋಗಬೇಕು, ಎಲ್ಲಿ ನಿಲ್ಲಬೇಕು ಎಂದು ಗೊತ್ತಿರುತ್ತದೆ, ಹೀಗಾಗಿ ಹಾರ್ನ್‌ ಮಾಡಿ ಬೇರೆಯವರಿಗೆ ಹೇಳಬೇಕು ಎಂಬುದಿಲ್ಲ.

46
ಪಾದಚಾರಿಗಳಿಗೆ ಮೊದಲ ಆದ್ಯತೆ

ಪಾದಚಾರಿಗಳು ರಸ್ತೆ ದಾಟುವಾಗ ಡ್ರೈವರ್‌ಗಳು ವಾಹನವನ್ನು ತಾವಾಗಿಯೇ ನಿಲ್ಲಿಸುತ್ತಾರೆ, ಆದರೆ ಹಾರ್ನ್‌ ಮಾಡೋದಿಲ್ಲ, ದಾರಿ ಬಿಡಿ ಎಂದು ಹೇಳೋದಿಲ್ಲ.

56
ಶಿಸ್ತು, ಲೈಸೆನ್ಸ್

ಅಮೆರಿಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಅಷ್ಟು ಸುಲಭವಲ್ಲ. ಅಲ್ಲಿ ಡ್ರೈವರ್‌ಗಳು ಉತ್ತಮ ತರಬೇತಿ ಪಡೆದು ಪರೀಕ್ಷೆಗಳನ್ನು ಪಾಸ್ ಮಾಡಿರುತ್ತಾರೆ. ಮುಂದೆ ಇರೋದು ತಪ್ಪಾಗಿ ವಾಹನ ಓಡಿಸಿದರೂ ಕೂಡ, ನಾವು ನಮ್ಮ ವಾಹನವನ್ನು ಹೇಗೆ ಕಂಟ್ರೋಲ್‌ ಮಾಡಬೇಕು ಎಂದು ಅವರು ಫಿಕ್ಸ್‌ ಆಗಿರುತ್ತಾರೆ.

66
ರೋಡ್ ರೇಜ್ ಭಯ

ಅನಗತ್ಯವಾಗಿ ಏನಾದರೂ ಹಾರ್ನ್‌ ಮಾಡಿದ್ರೆ ಮುಂದೆ ಇರುವ ಡ್ರೈವರ್‌ ಬಂದು ಜಗಳ ಮಾಡ್ತಾರೆ. ಇದರಿಂದ ಇನ್ನೊಂದಿಷ್ಟು ಹೊಡೆದಾಟ ಆಗಲೂಬಹುದು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories