73 ವರ್ಷಗಳ ಇತಿಹಾಸದಲ್ಲಿ ಪಾಕಿಸ್ತಾನ ಮಿಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಅಧಿಕೃತವಾಗಿ ಭಾಗವಹಿಸಲು ಮುಂದಾಗಿದೆ. ಈ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದೆ.ಈ ಸ್ಪರ್ಧೆಗೆ ಪಾಕ್ ಪರ ಪ್ರತಿನಿಧಿಸುತ್ತಿರುವ ಬೆಡಗಿ ಯಾರು ಎಂಬ ಮಾಹಿತಿ ಇಲ್ಲಿದೆ.
ಪಾಕಿಸ್ತಾನ 73 ವರ್ಷಗಳ ನಂತ್ರ ಇದೇ ಮೊದಲ ಬಾರಿ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಪಾಲ್ಗೊಳ್ತಿದೆ. 24 ವರ್ಷದ ಅನಿಕಾ ಜಮಾಲ್ ಅವರನ್ನು ಮಿಸ್ ವರ್ಲ್ಡ್ ಪಾಕಿಸ್ತಾನ 2026 ಎಂದು ಅಧಿಕೃತವಾಗಿ ಘೋಷಿಸಿ ಕಿರೀಟ ನೀಡಲಾಗಿದೆ. ವಿಯೆಟ್ನಾಂನಲ್ಲಿ ನಡೆಯಲಿರುವ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಅವರು ಪಾಕಿಸ್ತಾನವನ್ನು ಪ್ರತಿನಿಧಿಸಲಿದ್ದಾರೆ.
25
ಅನಿಕಾ ಜಮಾಲ್ ಯಾರು?
ಅನಿಕಾ ಜಮಾಲ್ ಅವರಿಗೆ ಇದು ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲ. ಇದಕ್ಕೂ ಮೊದಲು ಅವರು ಮಿಸ್ ಅರ್ಥ್, ಮಿಸ್ ಗ್ಲೋಬಲ್, ಮಿಸ್ ಕಾಸ್ಮೋ, ಮಿಸ್ ಇಕೋ ಇಂಟರ್ನ್ಯಾಷನಲ್ ಮತ್ತು ಮಿಸ್ ಔರಾ ಇಂಟರ್ನ್ಯಾಷನಲ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಾರೆ. ಸದ್ಯ ಅವರು ಅಕೌಂಟಿಂಗ್ ಮತ್ತು ಆಡಿಟಿಂಗ್ನಲ್ಲಿ ಮಾಸ್ಟರ್ಸ್ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಕೊಸೊವೊದಲ್ಲಿ ನಡೆದ ಮಿಸ್ ಫ್ರೀಡಮ್ ಆಫ್ ದಿ ವರ್ಲ್ಡ್ ಸ್ಪರ್ಧೆಯಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
35
ಅನಿಕಾ ಧ್ಯೇಯ ಏನು?
ಅನಿಕಾ ಅವರ ಪ್ರಕಾರ, ಮಿಸ್ ವರ್ಲ್ಡ್ ವೇದಿಕೆಯನ್ನು ಅವರು ಕೇವಲ ಸೌಂದರ್ಯ ಸ್ಪರ್ಧೆಯಾಗಿ ನೋಡುವುದಿಲ್ಲ. ಪಾಕಿಸ್ತಾನದಲ್ಲಿ ಥಲಸೇಮಿಯಾ ರೋಗಿಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವರಿಗೆ ಬೆಂಬಲ ಹೆಚ್ಚಿಸುವುದು ತಮ್ಮ ಮುಖ್ಯ ಉದ್ದೇಶ ಎಂದು ಹೇಳಿದ್ದಾರೆ.
ಅನಿಕಾ, ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದು ಪಾಕಿಸ್ತಾನಿ ಮಹಿಳೆಯರಿಗೆ ಹೆಮ್ಮೆಯ ವಿಷ್ಯವಾಗಿದೆ. ಮಿಸ್ ಪಾಕಿಸ್ತಾನ ವರ್ಲ್ಡ್ ಆರ್ಗನೈಸೇಶನ್ ಮುಖ್ಯಸ್ಥೆ ಸೋನಿಯಾ ಅಹ್ಮದ್, ಮಿಸ್ ವರ್ಲ್ಡ್ನಲ್ಲಿ ಪಾಕಿಸ್ತಾನದ ಮೊದಲ ಬಾರಿ ಭಾಗವಹಿಸುತ್ತಿರುವುದು ನಮ್ಮ ದೇಶಕ್ಕೆ ಐತಿಹಾಸಿಕ ಕ್ಷಣ. ಇದು ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಮಹಿಳೆಯರ ಪ್ರತಿಭೆಯನ್ನು ಪ್ರದರ್ಶಿಸುವ ದೊಡ್ಡ ಅವಕಾಶ ಎಂದಿದ್ದಾರೆ.
55
ವಿವಾದ ಸಾಧ್ಯತೆ?
ಅನಿಕಾ ಅಧಿಕೃತವಾಗಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಇಸ್ಲಾಮಿಕ್ ರಾಷ್ಟ್ರಗಳಾದ ಪಾಕಿಸ್ತಾನಕ್ಕೆ ಇದು ಸುಲಭವಲ್ಲ. ಅಲ್ಲಿನ ಹುಡುಗಿಯರಿಗೆ ಮಾಡೆಲಿಂಗ್ ಅತ್ಯಂತ ಕಷ್ಟಕರವಾಗಿದೆ. ಇಂತಹ ಫ್ಯಾಷನ್ ಶೋಗಳು ಹೆಚ್ಚಾಗಿ ಬಲಪಂಥೀಯ ಗುಂಪುಗಳಿಂದ ವಿರೋಧವನ್ನು ಎದುರಿಸುತ್ತವೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಅನಿಕಾ ಇಸ್ಲಾಮಿಕ್ ಉಗ್ರಗಾಮಿಗಳ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ