ಮದ್ಯಪಾನ ಇಲ್ಲದ ದೇಶವೇ ಇಲ್ಲ ಅನ್ನಬಹುದು. ಆರೋಗ್ಯಕ್ಕೆ ಹಾನಿಕರ ಅಂತ ಗೊತ್ತಿದ್ರೂ, ಹಲವು ದೇಶಗಳಲ್ಲಿ ಆಲ್ಕೋಹಾಲ್ ಜನರ ಜೀವನಶೈಲಿಯ ಒಂದು ಭಾಗವಾಗಿದೆ. ಹಾಗಾದ್ರೆ, ಜಗತ್ತಿನಲ್ಲಿ ಅತಿ ಹೆಚ್ಚು ಆಲ್ಕೋಹಾಲ್ ಕುಡಿಯೋ ದೇಶಗಳು ಯಾವುವು ಅಂತ ಎಂದಾದರೂ ಯೋಚಿಸಿದ್ದೀರಾ?
ವಿಶ್ವದ ದೇಶಗಳಲ್ಲಿ ಮದ್ಯಪಾನದ ಬಳಕೆಯಲ್ಲಿ ದೊಡ್ಡ ವ್ಯತ್ಯಾಸಗಳಿವೆ. ಇದು ಆಯಾ ದೇಶದ ಸಂಸ್ಕೃತಿ, ಸಂಪ್ರದಾಯ, ಜೀವನಶೈಲಿ ಮತ್ತು ಆರ್ಥಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಕೆಲವು ದೇಶಗಳಲ್ಲಿ ಆಲ್ಕೋಹಾಲ್ ಸಾಮಾಜಿಕ ಜೀವನದ ಒಂದು ಭಾಗವಾಗಿದೆ. 2025ರ ಗ್ಲೋಬಲ್ ಡೇಟಾ ಪ್ರಕಾರ, ಯುರೋಪ್ ಖಂಡದಲ್ಲಿ ಅತಿ ಹೆಚ್ಚು ಮದ್ಯಪಾನ ಮಾಡುವವರಿದ್ದಾರೆ.
25
ಮೊದಲ ಸ್ಥಾನದಲ್ಲಿ ರೊಮೇನಿಯಾ
2025ರ ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ವರದಿ ಪ್ರಕಾರ, ರೊಮೇನಿಯಾ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಅಲ್ಲಿ ಪ್ರತಿಯೊಬ್ಬ ವ್ಯಕ್ತಿ ವರ್ಷಕ್ಕೆ ಸರಾಸರಿ 17 ಲೀಟರ್ ಆಲ್ಕೋಹಾಲ್ ಸೇವಿಸುತ್ತಾನೆ. ಈ ಸಂಖ್ಯೆ ವಿಶ್ವದ ಸರಾಸರಿಗೆ ಹೋಲಿಸಿದರೆ ತುಂಬಾ ಹೆಚ್ಚಾಗಿದೆ.
35
ಅತಿಥಿ ಸತ್ಕಾರದ ಸಂಕೇತ
ರೊಮೇನಿಯಾದಲ್ಲಿ ಆಲ್ಕೋಹಾಲ್ ಅನ್ನು ಅತಿಥಿ ಸತ್ಕಾರದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮದುವೆ, ಹಬ್ಬ, ಕೌಟುಂಬಿಕ ಕಾರ್ಯಕ್ರಮಗಳು ಮತ್ತು ಅಂತ್ಯಕ್ರಿಯೆಗಳಲ್ಲೂ ಮದ್ಯ ನೀಡುವುದು ಸಾಮಾನ್ಯ. ಇದರಿಂದಾಗಿ ಮದ್ಯಪಾನವು ಸಾಮಾಜಿಕವಾಗಿ ಸ್ವೀಕಾರಾರ್ಹ ಅಭ್ಯಾಸವಾಗಿದೆ. ಇಲ್ಲಿ ಮನೆಯಲ್ಲೇ ತಯಾರಿಸುವ ಸಾಂಪ್ರದಾಯಿಕ ಮದ್ಯವನ್ನು ಹೆಚ್ಚಾಗಿ ಬಳಸುತ್ತಾರೆ. ಪ್ಲಮ್ ಮತ್ತು ದ್ರಾಕ್ಷಿಯಿಂದ ತಯಾರಾಗುವ 'ತುಯಿಕಾ' ವನ್ನು ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕುಡಿಯುತ್ತಾರೆ.
ರೊಮೇನಿಯಾದಲ್ಲಿ ಮದ್ಯ ತಯಾರಿಕೆಗೆ 2000 ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿದೆ. ಅಲ್ಲಿ ಆಲ್ಕೋಹಾಲ್ ಬೆಲೆ ಕಡಿಮೆ ಇರುವುದು ಕೂಡ ಬಳಕೆ ಹೆಚ್ಚಾಗಲು ಒಂದು ಕಾರಣ. ಕೆಲವು ಕಡೆ ತೆರಿಗೆ ಇಲ್ಲದೆ ಅಥವಾ ಅಕ್ರಮವಾಗಿ ಮಾರಾಟವಾಗುವ ಮದ್ಯವೂ ಲಭ್ಯವಿದೆ. ಇವೆಲ್ಲವೂ ಸೇರಿ ಮದ್ಯಪಾನವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.
55
ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ತುಂಬಾ ಕಡಿಮೆ
ಭಾರತದಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ ಸರಾಸರಿ 3 ರಿಂದ 5 ಲೀಟರ್ ಆಲ್ಕೋಹಾಲ್ ಸೇವಿಸುತ್ತಾನೆಂದು ಅಂದಾಜಿಸಲಾಗಿದೆ. ಇದು ರೊಮೇನಿಯಾದಂತಹ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಆದರೂ, ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಮದ್ಯಪಾನದ ಬಳಕೆ ವೇಗವಾಗಿ ಹೆಚ್ಚುತ್ತಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಈ ಬದಲಾವಣೆ ಸ್ಪಷ್ಟವಾಗಿ ಕಾಣುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ