ಮಹಿಳೆಯೊಬ್ಬರು ಮಲಬದ್ಧತೆಯಿಂದಾಗಿ ಶೌಚಾಲಯದಲ್ಲಿ ಅತಿಯಾಗಿ ಆಯಾಸಗೊಂಡ ಪರಿಣಾಮ, ತಮ್ಮ 10 ವರ್ಷಗಳ ನೆನಪಿನ ಶಕ್ತಿಯನ್ನು ತಾತ್ಕಾಲಿಕವಾಗಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ವೈದ್ಯರು ಏನು ಹೇಳ್ತಾರೆ? ಈ ಸಮಸ್ಯೆಗೆ ಕಾರಣ ಏನು?
ಅಪಘಾತ ಅಥವಾ ತೀವ್ರ ಆಘಾತದಿಂದ ನೆನಪಿನ ಶಕ್ತಿ ಕಳೆದುಕೊಳ್ಳುತ್ತಾರೆ. ಇಂತಹ ದೃಶ್ಯಗಳನ್ನು ನಾವು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನೋಡಿರುತ್ತವೆ. ಆದ್ರೆ ಇಲ್ಲೋರ್ವ ಮಹಿಳೆ ಮಲವಿಸರ್ಜನೆ ಮಾಡುವ ವೇಳೆ ಉಂಟಾಗುವ ಆಯಾಸದಿಂದ ತನ್ನ ಸ್ಮರಣ ಶಕ್ತಿಯನ್ನು ಕಳೆದುಕೊಂಡಿದ್ದಾರೆ.
26
ಹಾಂಗ್‌ಕಾಂಗ್ ಮಹಿಳೆ
ಈ ಪ್ರಕರಣ ಕೇಳಲು ವಿಚಿತ್ರವೆನಿಸಬಹುದು. ಆದ್ರೆ ಇದು ಹಾಂಗ್‌ಕಾಂಗ್‌ಲ್ಲಿ ನಡೆದ ನೈಜ ಘಟನೆಯಾಗಿದೆ. @Psychological ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಈ ವಿಚಿತ್ರ ಪ್ರಕರಣದ ಬಗ್ಗೆ ಬರೆದುಕೊಳ್ಳಲಾಗಿದೆ. ಮಲವಿಸರ್ಜನೆ ಸಂದರ್ಭದಲ್ಲಿ ಆಯಾಸಗೊಂಡು ತಾನೇಗೆ 10 ವರ್ಷಗಳಷ್ಟು ಸ್ಮರಣಶಕ್ತಿ ಕಳೆದುಕೊಂಡೆ ಎಂಬುದನ್ನು ವಿವರಿಸಿದ್ದಾರೆ.
36
ವಿಚಿತ್ರ ಪ್ರಕರಣ
ಸ್ಮರಣಶಕ್ತಿಯನ್ನು ಕಳೆದುಕೊಂಡ ಮಹಿಳೆಯನ್ನು ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಚಿಕಿತ್ಸೆಯಿಂದಾಗಿ ಮಹಿಳೆಯ ಸ್ಮರಣಶಕ್ತಿ ಕ್ರಮೇಣವಾಗಿ ಮರಳಿದೆ. ಆದ್ರೆ ಈ ವಿಚಿತ್ರ ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದು, ಈ ಸಣ್ಣ ಪ್ರಮಾಣದ ಆಯಾಸ ಸ್ಮರಣಶಕ್ತಿ ಹೋಗುವಂತೆ ಮಾಡುತ್ತಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಈ ಸಮಸ್ಯೆಗೆ ತುತ್ತಾದ ಮಹಿಳೆ ಎರಡು ವಾರಗಳಿಂದ ಮಲಬದ್ಧತೆಯಿಂದ ಬಳಲುತ್ತಿದ್ದರು. ಶೌಚಾಲಯಕ್ಕೆ ಹೋದಾಗ ತುಂಬಾ ನೋವು ಅನುಭವಿಸುತ್ತಿದ್ದರು. ಈ ವೇಳೆ ಶೌಚಾಲಯದಲ್ಲಿ ಆಯಾಸಗೊಂಡಾಗ ಅದು ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರದೆ. ಈ ಘಟನೆ ಬಳಿಕ ಮಹಿಳೆ 8 ಗಂಟೆಗಳ ಕಾಲ ತಮ್ಮ 10 ವರ್ಷ ಜೀವನವನ್ನು ನೆನೆಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಆಘಾತಗೊಂಡ ಕುಟುಂಬಸ್ಥರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
56
ಅಸ್ಥಿರ ಜಾಗತೀಕ ವಿಸ್ಮೃತಿ
ವೈದ್ಯರು ಈ ಪ್ರಕರಣವನ್ನು ಅಸ್ಥಿರ ಜಾಗತೀಕ ವಿಸ್ಮೃತಿ (TAG) ಎಂದು ಕರೆದಿದ್ದು, ಹಠಾತ್ ಆಯಾಸ ತಾತ್ಕಲಿಕ ಸ್ಮರಣಶಕ್ತಿ ನಷ್ಟವನ್ನುಂಟು ಮಾಡುತ್ತದೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಾರೆ. ಅತಿಯಾದ ಆಯಾಸ, ದಣಿವು ಮೆದುಳಿಗೆ ಸರಬರಾಜಗುವ ಆಮ್ಮಜನಕ ಮತ್ತು ರಕ್ತದ ಹರಿವಿನ ಮೇಲೆ ತಾತ್ಕಾಲಿಕ ಪರಿಣಾಮ ಬೀರೋದರಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ವಿವರಿಸುತ್ತಾರೆ.
ಇನ್‌ಸ್ಟಾಗ್ರಾಂನ ಪೋಸ್ಟ್‌ಗೆ ಹಲವರು ಗಂಭೀರವಾಗಿ ಚರ್ಚೆ ಮಾಡಿದ್ರೆ, ಕೆಲವರು ತಮಾಷೆಯಾಗಿಯೂ ಪ್ರತಿಕ್ರಿಯಿಸಿದ್ದಾರೆ. ನಿನ್ನ ಮಾಜಿ ಗರ್ಲ್‌ಫ್ರೆಂಡ್ ಪದೇ ಪದೇ ನೆನಪಿಗೆ ಬರುತ್ತಿದ್ರೆ, ಈ ಮರೆವಿನ ಕಾಯಿಲೆ ಬರಲೇ ಎಂದು ದೇವರಲ್ಲಿ ಕೇಳಿಕೋ ಎಂದು ತಮ್ಮ ಗೆಳೆಯರಿಗೆ ಟ್ಯಾಗ್ ಮಾಡಿಕೊಳ್ಳುತ್ತಿದ್ದರು. ಶೌಚಾಲಯ ಮಾಡೋದು ಸಹ ಒಂದು ಆಯಾಸದ ಕೆಲಸ ಎಂದು ಇವತ್ತೇ ಅರ್ಥವಾಯ್ತು ಎಂದು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ