ಕೊರೋನಾ ಸೋಂಕಿತೆಯನ್ನು ನ್ಯುಮೋನಿಯಾ ರೋಗಿ ಎಂದು ಮನೆಗೆ ಕಳುಹಿಸಿದ್ರು!

First Published Mar 22, 2020, 12:55 PM IST

ಕೊರೋನಾ ವೈರಸ್ ಇಡೀ ವಿಶ್ವಲಕ್ಕೇ ಅಪಾಯ ತಂದೊಡ್ಡಿದೆ. ಚೀನಾದ ವುಹಾನ್ ನಿಂದ ಆರಂಭವಾದ ಈ ಮಹಾಮಾರಿ ವಿಶ್ವದ ನೂರಾರು ರಾಷ್ಟ್ರಗಳಿಗೆ ವ್ಯಾಪಿಸಿ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಅಮೆರಿಕಾದಲ್ಲೂ ಅನೇಕ ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ. ವಿಶ್ವದ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂಬ ಹೆಗ್ಗಳಿಕೆ ಅಮೆರಿಕಾಗಿದೆ. ಹೀಗಿದ್ದರೂ ಇಲ್ಲೊಬ್ಬ ಕೊರೋನಾ ಸೋಂಕಿತ ಮಹಿಳೆಯನ್ನು ನ್ಯುಮೋನಿಯಾ ರೋಗಿ ಎಂದು ಮನೆಗೆ ಕಳುಹಿಸಿದ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. 
 

ಕೊರೋನಾ ಹಾಗೂ ನ್ಯುಮೋನಿಯಾ ಲಕ್ಷಣಗಳು ಪರಸ್ಪರ ಹೋಲುತ್ತವೆ. ಆದರೆ ಒಂದು ವಾರದ ಬಳಿಕ ಮಹಿಳೆಯನ್ನು ಪರಿಶೀಲಿಸಿದಾಗ ಆಕೆಗೆ ಕೊರೋನಾ ಇರುವುದು ದೃಢಪಟ್ಟಿದೆ.
undefined
ಹೀಗಿದ್ದರೂ ವೈದ್ಯರು ಆ ಮಹಿಳೆಯನ್ನು ಮನೆಗೆ ಕಳುಹಿಸಿದ್ದಾರೆ, ಅಲ್ಲದೇ ಚಿಕಿತ್ಸೆಗೆ ಬರೋಬ್ಬರಿ 26 ಲಕ್ಷ ಬಿಲ್ ಭರಿಸುವಂತೆಯೂ ಆಸ್ಪತ್ರೆ ಸೂಚಿಸಿದೆ.
undefined
ಡ್ಯಾನಿ ಎಕ್ಸಿನಿ ಹೆಸರಿನ ಮಹಿಳೆ ಎದೆ ನೋವಿನಿಂದ ಹಾಗೂ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗೇ ಅವರು ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದರು.
undefined
ಅವರಿಗೆ ಉಸಿರಾಡಲೂ ಬಹಳ ಕಷ್ಟವಾಗುತ್ತಿತ್ತು. ಕೊರೋನಾ ಇದೆ ಹಾಗೂ ಇಷ್ಟು ಹಣ ಭರಿಸಬೇಕೆಂದು ತಿಳಿದ ಬಳಿಕ ಆಕೆಗೆ ಮತ್ತಷ್ಟು ತಲೆನೋವಾಗಿದೆ. ಆಕೆ ಬಳಿ ಯಾವುದೇ ಹೆಲ್ತ್ ಕಾರ್ಡ್ ಕೂಡಾ ಇರಲಿಲ್ಲ.
undefined
ಇನ್ನು ಅಮೆರಿಕಾ ಕೊರೋನಾಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದೆಯಾದರೂ, ಹೆಲ್ತ್ ಕಾರ್ಡ್ ಇರದಿರುವವರಿಗೆ ಇಲ್ಲಿ ಭಾರೀ ಶುಲ್ಕ ವಿಧಿಸಲಾಗುತ್ತದೆ.
undefined
ಕೊರೋನಾ ಸಂಕ್ರಮಿತ ಮಹಿಳೆಯನ್ನು ಆರಂಭದಲ್ಲಿ ನ್ಯುಮೋನಿಯಾ ಪೀಡಿತೆ ಎಂದು ಹೇಳಲಾಗಿದೆ.
undefined
ಬಳಿಕ ಬಂದ ವರದಿಯಲ್ಲಿ ಆ ಮಹಿಳೆ ಕೊರೋನಾ ವೈರಸ್ ನಿಂದ ಬಳಲುತ್ತಿರುವ ವಿಚಾರ ಬಯಲಾಗಿದೆ ಹೀಗಿದ್ದರೂ ವೈದ್ಯರು ಆ ಮಹಿಳೆಗೆ ಭಾರೀ ಶುಲ್ಕ ವಿಧಿಸಿದ ಬಿಲ್ ನೀಡಿ, ಮನೆಗೆ ಕಳುಹಿಸಿದ್ದಾರೆ.
undefined
click me!