Published : Mar 21, 2020, 11:31 AM ISTUpdated : Mar 21, 2020, 12:24 PM IST
ಕೊರೋನಾ ಸದ್ಯ ವಿಶ್ವದ 185ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ. ಈವರೆಗೂ ಒಟ್ಟು 11 ಸಾವಿರಕಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಇತ್ತ ಚೀನಾದಲಲಿ ಮೃತರ ಸಂಖ್ಯೆ ಒಂದಂಕ್ಕಿಗೆ ಇಳಿದಿದೆ. ಹೀಗಿದ್ದರೂ ಪುಟ್ಟ ರಾಷ್ಟ್ರ ಇಟಲಿ ಮಾತ್ರ ಕೊರೋನಾ ತಾಂಡವಕ್ಕೆ ಸಿಲುಕಿದ್ದು, 24 ಗಂಟೆಯಲ್ಲಿ 627 ಮಂದಿ ಬಲಿಯಾಗಿದ್ದಾರೆ. ಇಲ್ಲಿ ೬ ಸಾವಿರಕ್ಕು ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.
ಇಟಲಿಯಲ್ಲಿ ಈವರೆಗೂ 4 ಸಾವಿರ ಮಂದಿ ಕೊರೋನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಕೊರೋನಾದಿಂದ ಅತಿಹೆಚ್ಚು ಮೃತಪಟ್ಟವರಲ್ಲಿ ಇಟಲಿ ರಾಷ್ಟ್ರ ಮುಂಚೂಣಿಯಲ್ಲಿದ್ದು, ಚೀನಾಗಿಂತಲೂ ಅಧಿಕ ಮಂದಿ ಈ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ.

28
ಚೀನಾದಲ್ಲಿ ಈವರೆಗೆ ಸುಮಾರು 3300 ಮಂದಿ ಬಲಿಯಾಗಿದ್ದಾರೆ. ಇಟಲಿಯ ಲೋಂಬರ್ಡಿ ನಗರದಲ್ಲಿ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.

38
ಸುದ್ದಿಸಂಸ್ಥೆ ರಾಯ್ಟರ್ಸ್ ಅನ್ವಯ ಇಟಲಿಯಲ್ಲಿ ಈವರೆಗೆ ಬೆಳಕಿಗೆ ಬಂದ ಅಂಕಿ ಅಂಶಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆನ್ನಲಾಗಿದೆ. ಇಟಲಿಯ ಲೋಂಬರ್ಡಿ ಮೇಯರ್ ಖುದ್ದು ಅಧಿಕೃತ ಅಂಕಿ ಅಂಶಕ್ಕಿಂತಲೂ ನಾಲ್ಕು ಪಟ್ಟು ಅಧಿಕ ಮಂದಿ ಮೃತ ಪಟ್ಟಿದ್ದಾಋಎ ಎಂದು ತಿಳಿಸಿದ್ದಾರೆ.

48
ಹಫಿಂಗ್ಟನ್ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಮೇಯರ್ ವೃದ್ಧರು ತಮ್ಮ ಮನೆ ಹಾಗೂ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆಯುತ್ತಿದ್ದಾರೆ. ಯಾರೂ ಇವರ ಕುರಿತು ಕಾಳಜಿ ವಹಿಸುತ್ತಿಲ್ಲ. ಇಲ್ಲಿನ ಅನೇಕ ಮಂದಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

58
ಇಟಲಿ ಸರ್ಕಾರ ಸದ್ಯ ಇಲ್ಲಿನ ಎಲ್ಲಾ ಸಾರ್ವಜನಿಕ ಪಾರ್ಕ್ ಬಂದ್ ಮಾಡಿದೆ. ಮನೆಯಲ್ಲೇ ವ್ಯಾಯಾಮ ಮಾಡುವಂತೆ ಇದು ತನ್ನ ನಾಗರಿಕರಿಗೆ ಸೂಚಿಸಿದೆ.

68
ಚೀನಾಕ್ಕಿಂತಲೂ ಇಟಲಿಯ ಪರಿಸ್ಥಿತಿ ಬಿಗಡಾಯಿಸಿದ್ದು, ಇಲ್ಲಿ ಗುರುವಾರದಂದು 475 ಮಂದಿ ಮೃತಪಟ್ಟಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಲ್ಲಿನ ಆರೋಗ್ಯಾಧಿಕಾರಿಗಳು ಅಂದಾಜಿಸಿದ್ದಾರೆ.

78
ಇಟಲಿ ಸರ್ಕಾರ ಕಳೆದ ವಾರವೇ 25 ಮಾರ್ಚ್ ವರೆಗೆ ಎಲ್ಲಾ ರೆಸ್ಟೋರೆಂಟ್, ಬಾರ್ ಹಾಗೂ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿತ್ತು. ಇಟಲಿ ಲಾಕ್ ಡೌನ್ ಆಗಿದೆ ಹೀಗಿದ್ದರೂ ಇಲ್ಲಿ ಸಾವಿನ ಸಂಖ್ಯೆ ಮಾತ್ರ ಇಳಿಮುಖವಾಗಿಲ್ಲ.

88
ವಿಶ್ವದ ಒಟ್ಟು ಮೃತರಲ್ಲಿ ಶೇ 36.6 ರಷ್ಟು ಇಟಲಿಯಲ್ಲೇ ಸಂಭವಿಸಿವೆ. ಲೋಂಬಾರ್ಡಿ ಇಟಲಿಯ ವುಹಾನ್ ನಗರವಾಗಿ ಮಾರ್ಪಾಡಾಗಿದೆ. ಚೀನಾದ ವುಹಾನ್ ನಗರದಲ್ಲೇ ಕೊರೋನಾ ವೈರಸ್ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು.