ವಿದೇಶಿ ಸಿನಿಮಾಗಳ ಮೇಲೆ ಶೇ.100 ಸುಂಕ ವಿಧಿಸಿ ಟ್ರಂಪ್ ಘೋಷಣೆ!

Published : May 05, 2025, 10:11 AM ISTUpdated : May 05, 2025, 10:17 AM IST

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ಚಲನಚಿತ್ರಗಳ ಮೇಲೆ ಶೇಕಡಾ 100 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇತರ ದೇಶಗಳು ಹಾಲಿವುಡ್‌ಗೆ ಅಡ್ಡಿಪಡಿಸುತ್ತಿವೆ ಮತ್ತು ಚಿತ್ರಗಳನ್ನು ಪ್ರಚಾರ ಸಾಧನವಾಗಿ ಬಳಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

PREV
18
ವಿದೇಶಿ ಸಿನಿಮಾಗಳ ಮೇಲೆ ಶೇ.100 ಸುಂಕ ವಿಧಿಸಿ ಟ್ರಂಪ್ ಘೋಷಣೆ!

ಅಮೆರಿಕದಿಂದ ಮತ್ತೊಂದು ಸುಂಕ ಹೇರಿಕೆಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ವಿದೇಶಗಳಲ್ಲಿ ನಿರ್ಮಿತವಾಗುವ ಎಲ್ಲಾ ಚಲನಚಿತ್ರಗಳ ಮೇಲೆ ಶೇಕಡಾ 100 ರಷ್ಟು ಸುಂಕ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ. ಇತರ ದೇಶಗಳು ಹಾಲಿವುಡ್‌ಗೆ ಅಡ್ಡಿ ಉಂಟುಮಾಡುತ್ತಿವೆ ಮತ್ತು ಚಿತ್ರಗಳನ್ನು ಪ್ರಚಾರ ಉಪಕರಣವಾಗಿ ಬಳಸುತ್ತಿವೆ ಎಂದು ಆರೋಪಿಸಿರುವ ಟ್ರಂಪ್ ಅಮೆರಿಕದ ಸಿನಿಮಾ ಉದ್ಯಮವೇ ಸಾಯುತ್ತಿರುವ ಸ್ಥಿತಿಯಲ್ಲಿ ಇದೆ ಎಂದಿದ್ದಾರೆ.
 

28

ಸಿನೆಮಾಗಳ ಮೇಲಿನ ಸುಂಕವನ್ನು ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಬರೆದುಕೊಂಡಿದ್ದು. "ಅಮೆರಿಕದ ಚಲನಚಿತ್ರ ಉದ್ಯಮ ವೇಗವಾಗಿ ನಿರ್ನಾಮವಾಗುತ್ತಿರುವ ಕಡೆಗೆ ಹೆಜ್ಜೆ ಇಟ್ಟಿದೆ," ಎಂದಿದ್ದಾರೆ. "ಇತರ ದೇಶಗಳು ನಮ್ಮ ಚಿತ್ರದ ನಿರ್ದೇಶಕರನ್ನು ಮತ್ತು ಸ್ಟುಡಿಯೋಗಳನ್ನು ಅಮೆರಿಕದಿಂದ ಅವರಲ್ಲಿಗೆ ತೆಗೆದುಕೊಂಡು ಹೋಗಲು ಪ್ರೋತ್ಸಾಹಿಸುತ್ತಿದೆ. ಹಾಲಿವುಡ್ ಹಾಗೂ ಅಮೆರಿಕದ ಹಲವಾರು ಸ್ಥಳಗಳು ಧ್ವಂಸಗೊಳ್ಳುತ್ತಿವೆ. ಇದು ಇತರ ದೇಶಗಳ ಸಂಯೋಜಿತ ಯತ್ನವಾಗಿದ್ದು, ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿದೆ. ಇದರ ಜೊತೆಗೆ ಈ ಎಲ್ಲಾ ಚಟುವಟಿಕೆಗಳು ಸಂದೇಶ ಮತ್ತು ಪ್ರಚಾರದ ಸಾಧನಗಳಾಗಿವೆ!" ಹೀಗಾಗಿ ವಿದೇಶಗಳಲ್ಲಿ ನಿರ್ಮಿತವಾಗುವ ಎಲ್ಲ ಚಲನಚಿತ್ರಗಳ ಮೇಲೂ ಶೇಕಡಾ 100 ರಷ್ಟು ಸುಂಕ ವಿಧಿಸಲು ನಾನು ವಾಣಿಜ್ಯ ಇಲಾಖೆ ಮತ್ತು ಅಮೆರಿಕದ ವ್ಯಾಪಾರ ಪ್ರತಿನಿಧಿಗೆ ತಕ್ಷಣ ಕಾರ್ಯಾರಂಭಿಸಲು ಆದೇಶ ನೀಡಿದ್ದೇನೆ,"  ಎಂದು ಟ್ರಂಪ್‌ ಹೇಳಿದ್ದಾರೆ. ನಮಗೆ ಮತ್ತೆ ಅಮೆರಿಕದಲ್ಲಿ ತಯಾರಾದ ಚಿತ್ರಗಳು ಬೇಕಾಗಿದೆ! ಎಂದಿದ್ದಾರೆ.
 

38

ಯುಎಸ್‌ಟಿಆರ್  ಹೇಳೋದೇನು?
ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರಿಪ್ರೆಸೆಂಟೇಟಿವ್ (USTR) ಹೇಳುವ ಪ್ರಕಾರ, ವಿದೇಶಿ ನಿಯಮಗಳು ಮತ್ತು ತೆರಿಗೆ ರಿಯಾಯಿತಿಗಳಂತಹ ಸೂಕ್ಷ್ಮ ಅಡೆತಡೆಯ ನಿಯಮಗಳು ಅಮೆರಿಕದ ಚಲನಚಿತ್ರ ನಿರ್ಮಾಪಕರಿಗೆ ನಷ್ಟ ಉಂಟು ಮಾಡಬಹುದು. ಅನೇಕ ಅಂತಾರಾಷ್ಟ್ರೀಯ ನಗರಗಳು ಚಲನಚಿತ್ರ ನಿರ್ಮಾಣಕ್ಕೆ ತೆರಿಗೆ ರಿಯಾಯಿತಿಗಳನ್ನು ನೀಡುತ್ತಿವೆ, ಇದರಿಂದ ಟೊರೊಂಟೋ, ಡಬ್ಲಿನ್ ಮುಂತಾದ ಸ್ಥಳಗಳಿಗೆ ಚಲನಚಿತ್ರ ನಿರ್ಮಾಪಕರು ಪ್ರಯಾಣಿಸುತ್ತಿರುತ್ತಾರೆ. ಇದಕ್ಕೆ ಪ್ರತಿಯಾಗಿ, ಕ್ಯಾಲಿಫೋರ್ನಿಯಾದ ಗವರ್ನರ್ ಗ್ಯಾವಿನ್ ನ್ಯೂಸಮ್ ಹಾಲಿವುಡ್ ಚಿತ್ರೋದ್ಯಮವನ್ನು ಪುನರ್ಜೀವನಗೊಳಿಸಲು ದೊಡ್ಡ ತೆರಿಗೆ ಮನ್ನಾ ಯೋಜನೆಯನ್ನು ಸೂಚಿಸಿದ್ದಾರೆ.
 

48

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಇಳಿಕೆ
ಕೊರೊನಾ ಮಹಾಮಾರಿಯ ನಂತರ ಬಹುತೇಕ ಪ್ರಮುಖ ಚಿತ್ರಗಳು ತೆರೆಕಾಣದ ಕಾರಣ, ಅಮೆರಿಕದಲ್ಲಿ ಚಿತ್ರ ಟಿಕೆಟ್ ಮಾರಾಟವು ಇಳಿಕೆಯಾಗಿದ್ದು, ಜನರು ಹೆಚ್ಚು ಸ್ಟ್ರೀಮಿಂಗ್ ಸೇವೆ, ಓಟಿಟಿಗಳ ಮೊರೆ ಹೋಗುತ್ತಿದ್ದಾರೆ.

ಹಾಲಿವುಡ್ ಸಂಕಷ್ಟದಲ್ಲಿದೆ
ಚೀನಾ, ಅಮೆರಿಕದ ಕೆಲ ಸಿನಿಮಾಗಳನ್ನು ಕಡಿಮೆ ಸಂಖ್ಯೆಯಲ್ಲಿ ಒಪ್ಪಿಕೊಳ್ಳುತ್ತಿದ್ದ ಕಾರಣ, ಹಾಲಿವುಡ್ ಈಗಾಗಲೇ ಕೆಲವು ಆರ್ಥಿಕ ಅಡಚಣೆಯಲ್ಲಿದೆ. ಚೀನಾ, ಅಮೆರಿಕ ನಂತರದ ಎರಡನೇ ದೊಡ್ಡ ಚಿತ್ರ ಮಾರುಕಟ್ಟೆಯಾಗಿದ್ದರೂ, ಈಗ ಸ್ಥಳೀಯ ಚೀನೀ ಚಿತ್ರಗಳು ಹೆಚ್ಚು ಯಶಸ್ಸು ಕಾಣುತ್ತಿವೆ.

58

ಚೀನಾದ ಪ್ರತಿಕ್ರಿಯೆ ಏನು?
ಏಪ್ರಿಲ್ 10ರಂದು, ಚೀನಾ ಸರ್ಕಾರದ ಚಲನಚಿತ್ರ ವಿಭಾಗವು, "ಅಮೆರಿಕದ ಈ ತಪ್ಪು ಕ್ರಮದಿಂದ ಚೀನಾದ ಜನರು ಅಮೆರಿಕನ್ ಸಿನಿಮಾಗಳನ್ನು ಇಷ್ಟಪಡದ ಸ್ಥಿತಿ ಉಂಟಾಗಬಹುದು," ಎಂದು ಹೇಳಿದೆ.

ಟ್ರಂಪ್ ನ ಆರ್ಥಿಕ ನೀತಿ ಮತ್ತು ವ್ಯಾಪಾರ ಯುದ್ಧ
ಈ ಹೊಸ ಕ್ರಮವು ಟ್ರಂಪ್ ಅವರ ಅಸ್ಥಿರವಾದ ವ್ಯಾಪಾರ ನೀತಿಗೆ ಮತ್ತೊಂದು ಸೇರ್ಪಡೆಯಾಗಿದೆ. ಅವರು ಈಗಾಗಲೇ ಅನೇಕ ವಿದೇಶಿ ಸರಕುಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸಿದ್ದಾರೆ, ಚೀನಾದ ಉತ್ಪನ್ನಗಳ ಮೇಲೆ ಶೇಕಡಾ 145 ರಷ್ಟು ಸುಂಕ ಸೇರಿದೆ. ಪ್ರತಿಯಾಗಿ, ಚೀನಾದ ಸರ್ಕಾರವೂ ಅಮೆರಿಕನ್ ಉತ್ಪನ್ನಗಳ ಮೇಲೆ ಶೇಕಡಾ 125 ರಷ್ಟು ಸುಂಕ ವಿಧಿಸಿದೆ. ಇದರಿಂದ ಜಾಗತಿಕ ಸರಬರಾಜು, ಮಾರಾಟ  ತೊಂದರೆಗೆ ಒಳಗಾಗಿದ್ದು, ಆರ್ಥಿಕ ಕುಸಿತದ ಭೀತಿಯನ್ನುಂಟುಮಾಡಿದೆ.
 

68

ಚೀನಾದ ಪ್ರತಿಕ್ರಿಯೆ ಏನು?
ಏಪ್ರಿಲ್ 10ರಂದು, ಚೀನಾ ಸರ್ಕಾರದ ಚಲನಚಿತ್ರ ವಿಭಾಗವು, "ಅಮೆರಿಕದ ಈ ತಪ್ಪು ಕ್ರಮದಿಂದ ಚೀನಾದ ಜನರು ಅಮೆರಿಕನ್ ಸಿನಿಮಾಗಳನ್ನು ಇಷ್ಟಪಡದ ಸ್ಥಿತಿ ಉಂಟಾಗಬಹುದು," ಎಂದು ಹೇಳಿದೆ.

ಟ್ರಂಪ್ ನ ಆರ್ಥಿಕ ನೀತಿ ಮತ್ತು ವ್ಯಾಪಾರ ಯುದ್ಧ
ಈ ಹೊಸ ಕ್ರಮವು ಟ್ರಂಪ್ ಅವರ ಅಸ್ಥಿರವಾದ ವ್ಯಾಪಾರ ನೀತಿಗೆ ಮತ್ತೊಂದು ಸೇರ್ಪಡೆಯಾಗಿದೆ. ಅವರು ಈಗಾಗಲೇ ಅನೇಕ ವಿದೇಶಿ ಸರಕುಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸಿದ್ದಾರೆ, ಚೀನಾದ ಉತ್ಪನ್ನಗಳ ಮೇಲೆ ಶೇಕಡಾ 145 ರಷ್ಟು ಸುಂಕ ಸೇರಿದೆ. ಪ್ರತಿಯಾಗಿ, ಚೀನಾದ ಸರ್ಕಾರವೂ ಅಮೆರಿಕನ್ ಉತ್ಪನ್ನಗಳ ಮೇಲೆ ಶೇಕಡಾ 125 ರಷ್ಟು ಸುಂಕ ವಿಧಿಸಿದೆ. ಇದರಿಂದ ಜಾಗತಿಕ ಸರಬರಾಜು, ಮಾರಾಟ  ತೊಂದರೆಗೆ ಒಳಗಾಗಿದ್ದು, ಆರ್ಥಿಕ ಕುಸಿತದ ಭೀತಿಯನ್ನುಂಟುಮಾಡಿದೆ.
 

78

ಅಮೆರಿಕದ ಆರ್ಥಿಕ ಪರಿಸ್ಥಿತಿ
2025ರ ಮೊದಲ ತ್ರೈಮಾಸಿಕದಲ್ಲಿ ಅಮೆರಿಕದ ಜಿಡಿಪಿ ಶೇಕಡಾ 0.3 ರಷ್ಟು ಇಳಿಕೆಯಾಗಿದ್ದು, ಆಮದು ಹಾಗೂ ಗ್ರಾಹಕ ವೆಚ್ಚ ತೀವ್ರವಾಗಿ ಕಡಿಮೆಯಾಗಿದೆ. ಚೀನಾದಿಂದ ಸಾಗಣಾ ಸಾಮಗ್ರಿಗಳ ಬುಕ್ಕಿಂಗ್ ಶೇಕಡಾ 60 ರಷ್ಟು ಇಳಿದಿದ್ದು, ಶಿಪ್ಪಿಂಗ್ ಕಂಪನಿಗಳು ಚಲನೆಯ ನಾಲ್ಕನೇ ಭಾಗವನ್ನು ರದ್ದುಗೊಳಿಸಿವೆ. ಲಾಸ್ ಎಂಜಲೀಸ್‌ ಬಂದರಿನಲ್ಲಿ ಸರಕು ಆಗಮನ ಶೇಕಡಾ 35 ರಷ್ಟು ಇಳಿಯಲಿದೆ ಎಂದು ಅಂದಾಜಿಸಲಾಗಿದೆ.

ಆರ್ಥಿಕ ನಷ್ಟಕ್ಕೆ ಟ್ರಂಪ್ ಧೋರಣೆ ಕಾರಣವೆ?
ಬೋಸ್ಟನ್ ಕಾಲೇಜಿನ ಆರ್ಥಶಾಸ್ತ್ರಜ್ಞ ಬ್ರಿಯಾನ್ ಬೆಥ್ಯೂನ್  ಹೇಳಿಕೆಯಂತೆ, "ಈ ಎಲ್ಲ ನಷ್ಟಕ್ಕೂ ಟ್ರಂಪ್ ಅವರ ನೀತಿಗಳೇ ಕಾರಣ" ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
 

88

ವಿದೇಶಿ ದೇಶಗಳ ತೀವ್ರ ಟೀಕೆ
ಟ್ರಂಪ್ "ಸ್ವಿಟ್ಜರ್ಲೆಂಡ್, ದಕ್ಷಿಣ ಕೊರಿಯಾ ಮತ್ತು ಜಪಾನ್" ಎಂಬ ದೇಶಗಳೊಂದಿಗೆ ವಿಶೇಷ ಒಪ್ಪಂದಗಳನ್ನು ಮಾಡಿಕೊಂಡಿದ್ದೇನೆ ಎಂದು ಹೇಳುತ್ತಿದ್ದರೂ, ಈ ದೇಶಗಳ ನಾಯಕರು ಸಂಕಷ್ಟದಿಂದ ಬಳಲುತ್ತಿದ್ದಾರೆ. "ಟ್ರಂಪ್ ಏನು ಬಯಸುತ್ತಾರೆ ಎಂಬುದು ಸ್ಪಷ್ಟವಿಲ್ಲ. ಯಾರೆಲ್ಲ ಅವರ ಪರವಾಗಿ ಮಾತಾಡುತ್ತಿದ್ದಾರೆ ಎಂಬುದೂ ಅರ್ಥವಾಗುತ್ತಿಲ್ಲ," ಎಂದು ಅಟ್ಲಾಂಟಿಕ್ ಕೌನ್ಸಿಲ್‌ನ ಜೋಷ್ ಲಿಪ್ಸ್ಕಿ ಹೇಳಿದರು.

Read more Photos on
click me!

Recommended Stories