ಅಪರೂಪದ ವಿದ್ಯಮಾನಕ್ಕೆ ಆಕಾಶವೇ ಕೆಂಪೇರಿತು: ಬಲ್ಗೇರಿಯಾ ಬಾನಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ನಾರ್ತರ್ನ್‌ ಲೈಟ್

First Published Nov 7, 2023, 3:48 PM IST

ಅರೋರಾ ಬೋರಿಯಾಲಿಸ್ ಅಥವಾ ನಾರ್ತರ್ನ್ ಲೈಟ್ಸ್  ಎಂದು ಕರೆಯಲ್ಪಡುವ ನೈಸರ್ಗಿಕ ವಿದ್ಯಮಾನವೊಂದು  ಬಲ್ಗೇರಿಯಾದಲ್ಲಿ ಆಕಾಶದಲ್ಲಿ ಕಂಡು ಬಂದಿದ್ದು, ಇದರಿಂದ ಇಡೀ ಆಗಸವೇ ಕೆಂಪಗಾಗಿತ್ತು. 

Aurora Borealis

ಅಪರೂಪಕ್ಕೆ ಕಂಡ ಈ  ವಿದ್ಯಮಾನವನ್ನು ಅಲ್ಲಿನ ಜನ ಇದರ ವೀಡಿಯೋ ಫೋಟೋಗಳನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಚಿತ್ರಿಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ

Aurora Borealis

ಬರೀ ಬಲ್ಗೇರಿಯಾ ಮಾತ್ರವಲ್ಲದೇ ನೆರೆಯ ಉಕ್ರೇನ್ ಹಂಗೇರಿಯಾ, ರೊಮೇನಿಯಾದ ಆಗಸದಲ್ಲೂ ಈ ಅಪರೂಪದ ವಿದ್ಯಮಾನ ಕಂಡು ಬಂದಿದ್ದು, ಈ ಸುಂದರ ಕ್ಷಣಗಳನ್ನು ಜನ ಕಣ್ತುಂಬಿಕೊಂಡಿದ್ದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

Aurora Borealis

ಭಾನುವಾರ ಸಂಜೆ ವೇಳೆ ಕಂಡು ಬಂದ ಅಪರೂಪದ ದೃಶ್ಯಗಳು ಆಕಾಶವನ್ನು ಅತ್ಯಾಕರ್ಷಕವೆನಿಸುವ ಕೆಂಪು ಬಣ್ಣಕ್ಕೆ ತಿರುಗಿಸಿದವು.  ಅರೋರಾ ಬೋರಿಯಾಲಿಸ್ ಎಂದು ಕರೆಯಲ್ಪಡುವ ಈ ನೈಸರ್ಗಿಕ ವಿದ್ಯಮಾನವೂ ಆಗಸವನ್ನು ನೀಲಿ ಕೆಂಪು ಹಸಿರು ಹಳದಿ ಬಣ್ಣಗಳಲ್ಲಿ ಝಗಮಗಿಸುವಂತೆ ಮಾಡುತ್ತದೆ.

Aurora Borealis

ವಿವಿಧ  ರೀತಿಯ ಬಣ್ಣದ ಲೈಟ್‌ಗಳಿಂದ ಆಕಾಶವನ್ನು ಅಲಂಕಾರ ಮಾಡಿಸಿದಂತೆ ಇದು ಕಾಣುತ್ತದೆ. ಈ ಅರೋರಾ ಬೋರಿಯಾಲಿಸ್ ಬಲ್ಗೇರಿಯಾದಲ್ಲಿ ಬಹಳ ಸ್ಪಷ್ಟವಾಗಿ ಗೋಚರಿಸಿದ್ದು, ಉಕ್ರೇನ್ ಹಂಗೇರಿ ಹಾಗೂ ರೊಮೇನಿಯಾದಲ್ಲೂ ಇದು ಜನರ ಮನಸೆಳೆಯುವಲ್ಲಿ ಯಶಸ್ವಿಯಾಯ್ತು. 

Aurora Borealis

ಅನೇಕರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಖುಷಿಪಟ್ಟರು. ಕೆಲವರು ಇದು ಸೊಗಸಾಗಿದೆ ಎಂದು ಹೇಳಿದರೆ ಮತ್ತೆ ಕೆಲವರು ಇದು ಪ್ರಪಂಚದ ವಿನಾಶದ ಸೂಚನೆ ಇರಬೇಕು ಎಂದು ಬಣ್ಣಿಸಿದ್ದಾರೆ.

Aurora Borealis

ಯುಕೆ ಹಾಗೂ ಐರ್ಲೆಂಡ್‌ನಲ್ಲೂ ಈ ಸುಂದರ ದೃಶ್ಯ ಕಂಡು ಬಂದಿದ್ದು, ಆಕಾಶ ಬಣ್ಣಗಳೊಂದಿಗೆ ರೋಮ್ಸಾನ್ಸ್ ಮಾಡುತ್ತಿದೆ ಎಂದು ಕೆಲವರು ವಿಶ್ಲೇಷಿಸಿದರು. 

Aurora Borealis

ಈ ಅಪರೂಪದ ದೃಶ್ಯವೂ ಅಮೆರಿಕಾದ ಕೆಂಟುಕಿ ಸ್ಪ್ರಿಂಗ್‌ಫೀಲ್ಡ್ ಮುಂತಾದೆಡೆಯೂ ಕಂಡು ಬಂದಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅರೋರಾ ಎಂಬ ಪದವು 1619 ರಲ್ಲಿ ಹುಟ್ಟಿಕೊಂಡಿದ್ದು, ಪ್ರಖ್ಯಾತ ಖಗೋಳಶಾಸ್ತ್ರಜ್ಞ ಗೆಲಿಲಿಯೋ ಗೆಲಿಲಿ ಈ  'ಅರೋರಾ ಬೊರಿಯಾಲಿಸ್' ಎಂಬ ಹೆಸರನ್ನು ಸೂಚಿಸಿದ್ದರು. 

Aurora Borealis

ಅವರು ಈ ಪದವನ್ನು ರೋಮನ್ ದೇವತೆಯಾದ ಅರೋರಾಗೆ ಹೋಲಿಸಿದ್ದಾರೆ.  ಈ ವರ್ಷದ ಆರಂಭದಲ್ಲಿ ಮೊತ್ತ ಮೊದಲ ಬಾರಿಗೆ ಅರೋರಾ ವಿದ್ಯಮಾನ ಭಾರತದ ಲಡಾಖ್‌ನಲ್ಲೂ ಕಂಡು ಬಂದಿತ್ತು. ಇದರ ಫೋಟೋಗಳು ಕೂಡ ವೈರಲ್ ಆಗಿದ್ದವು.

click me!