ಅರಬ್ಬಿ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಹಡಗಿನ ಸಿಬ್ಬಂದಿಗೆ ಪಾಕಿಸ್ತಾನ ನೌಕಾಪಡೆಯು ಮಾನವೀಯ ನೆರವು ನೀಡಿದೆ. ಮತ್ತೊಂದೆಡೆ, ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಖ್ಯಾತ ಧರ್ಮಗುರುವನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಇಸ್ಲಾಮಾಬಾದ್: ಅರಬ್ಬಿ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ಸಿಲುಕಿದ್ದ ಭಾರತದ ಹಡಗಿನಲ್ಲಿದ್ದ ಸಿಬ್ಬಂದಿಗೆ ಪಾಕಿಸ್ತಾನ ನೌಕಾಪಡೆಯು ಮಾನವೀಯ ನೆಲೆಯಲ್ಲಿ ಸಹಾಯ ಹಸ್ತ ಚಾಚಿರುವ ಘಟನೆ ನಡೆದಿದೆ.
25
ಗೌತಮ್ ಹಡಗು
ಒಮಾನ್‌ನಿಂದ ಭಾರತಕ್ಕೆ ಬರುತ್ತಿದ್ದ ಎಂವಿ ಗೌತಮ್ ಹಡಗು ಅರಬ್ಬಿ ಸಮುದ್ರದಲ್ಲಿ ತೊಂದರೆಗೆ ಒಳಗಾಗಿತ್ತು. ಈ ವೇಳೆ ಹಡಗಿನಲ್ಲಿದ್ದ 6 ಭಾರತೀಯರು, ಓರ್ವ ಇಂಡೋನೇಷ್ಯಾ ಸಿಬ್ಬಂದಿ ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದರು. ಆಗ ಮುಂಬೈನಲ್ಲಿರುವ ಸಾಗರ ರಕ್ಷಣಾ ಮತ್ತು ಸಮನ್ವಯ ಕೇಂದ್ರವು ಪಾಕಿಸ್ತಾನಿ ಅಧಿಕಾರಿಗಳನ್ನು ಸಂಪರ್ಕಿಸಿ ಸಹಾಯ ಕೋರಿತ್ತು. ಹೀಗಾಗಿ ಸಿಬ್ಬಂದಿಗೆ ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆ (ಪಿಎಂಎಸ್‌ಎ) ನೆರವು ನೀಡಿದೆ.
35
ಆಹಾರ, ವೈದ್ಯಕೀಯ ನೆರವು ಮತ್ತು ತಾಂತ್ರಿಕ ನೆರವು
ಮಾರ್ಗಮಧ್ಯೆದಲ್ಲಿಯೇ ಸಿಲುಕಿದ್ದ ಸಿಬ್ಬಂದಿಗೆ ಆಹಾರ, ವೈದ್ಯಕೀಯ ನೆರವು ಮತ್ತು ತಾಂತ್ರಿಕ ನೆರವು ಸೇರಿದಂತೆ ತುರ್ತು ಸಹಾಯವನ್ನು ಒದಗಿಸಿತ್ತು. ಅಲ್ಲದೇ ಹಡಗಿನ ತಾಂತ್ರಿಕ ದೋಷವನ್ನು ಸರಿಪಡಿಸಲು ಕೂಡ ಯತ್ನಿಸಿತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಪಾಕ್‌ನಲ್ಲಿ ಖ್ಯಾತ ಧರ್ಮ ಗುರು ಇದ್ರೀಸ್‌ಗೆ ಗುಂಡಿಕ್ಕಿ ಹತ್ಯೆ
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಪ್ರಾಂತ್ಯದಲ್ಲಿ ಖ್ಯಾತ ಧರ್ಮಗುರು ಶೇಖ್- ಉಲ್- ಹದೀತ್ ಮೌಲಾನಾ ಮುಹಮ್ಮದ್ ಇದ್ರೀಸ್ (Sheikh-ul-Hadith Maulana Muhammad Idris) ಅವರನ್ನು ಕಿಡಿಗೇಡಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
55
ಅಪರಿಚಿತ ದಾಳಿಕೋರ
ಅಪರಿಚಿತ ದಾಳಿಕೋರ ಇಲ್ಲಿನ ಚರ್ಸದ್ದಾ ಜಿಲ್ಲೆಯ ಉತ್ಮನ್‌ಜೈ ಪ್ರದೇಶದಲ್ಲಿ ಇದ್ರೀಸ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದಾನೆ. ಗುಂಡೇಟು ತಗುಲಿದ್ದ ಮುಹಮ್ಮದ್ ಆಸ್ಪತ್ರೆಯಲ್ಲಿ ಅಸುನೀಗಿದ್ದರೆ, ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ಹಿರಿಯ ಮತ್ತು ಧಾರ್ಮಿಕ ವಿದ್ವಾಂಸರಲ್ಲಿ ಒಬ್ಬರಾಗಿರುವ ಇವರು ಧಾರ್ಮಿಕ ಉಪನ್ಯಾಸ ನೀಡಲು ತೆರಳುತ್ತಿದ್ದಾಗ ದಾಳಿ ನಡೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ