ಡಿಗ್ರಿಯೇ ಇಲ್ಲದಿದ್ದರೂ ಆರ್ಥಿಕ ತಜ್ಞರಂತೆ ಸಲಹೆ, ಯೂಟ್ಯೂಬರ್‌ಗೆ 11 ಲಕ್ಷ ರೂ ದಂಡ

Published : Apr 25, 2026, 04:26 PM IST

ಡಿಗ್ರಿಯೇ ಇಲ್ಲದಿದ್ದರೂ ಆರ್ಥಿಕ ತಜ್ಞರಂತೆ ಸಲಹೆ, ಯೂಟ್ಯೂಬರ್‌ಗೆ 11 ಲಕ್ಷ ರೂ ದಂಡ ವಿಧಿಸಲಾಗಿದೆ. ಯೂಟ್ಯೂಬ್‌ನಲ್ಲಿ ಫಿನಾನ್ಸ್, ವೈದ್ಯಕೀಯ, ಶಿಕ್ಷಣ ಸೇರಿದಂತೆ ಕೆಲ ವಿಚಾರಗಳ ಕುರಿತು ಕಂಟೆಂಟ್ ಮಾಡಲು ಕನಿಷ್ಠ ಅರ್ಹತೆ ಬೇಕು ಎಂಬ ಎಚ್ಚರಿಕೆಯನ್ನು ರವಾನಿಸಲಾಗಿದೆ. 

PREV
15
ಯೂಟ್ಯೂಬರ್‌ಗೆ ದಂಡ

ಭಾರತದಲ್ಲಿ ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾ ಮೂಲಕ ಯಾವುದೇ ಕಂಟೆಂಟ್ ವಿಡಿಯೋ ಮಾಡಿ ಪೋಸ್ಟ್ ಮಾಡಬಹುದು. ಆದಾಯ ಗಳಿಸಬಹುದು. ವಿಡಿಯೋ ಮೂಲಕ ಸಲಹೆ ನೀಡಲು, ಹೂಡಿಕೆ ಕುರಿತು ಸೂಚನೆ ನೀಡಲು ಕನಿಷ್ಠ ಅರ್ಹತೆ ನಿಯಮ ಭಾರತದಲ್ಲಿ ಇಲ್ಲ. ಆದರೆ ಚೀನಾದಲ್ಲಿ ಹಾಗಲ್ಲ. ಕೆಲ ವಿಚಾರಗಳ ಕುರಿತು ವಿಡಿಯೋ ಕಂಟೆಂಟ್ ಮಾಡಲು ಕನಿಷ್ಠ ವಿದ್ಯಾರ್ಹತೆ ಇರಬೇಕು. ಇದನ್ನು ಉಲ್ಲಂಘಿಸಿದ ಯೂಟ್ಯೂಬರ್‌ಗೆ 11.5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

25
ಫಿನಾನ್ಸ್ ಗುರುಗೆ ಬಿತ್ತು ದಂಡ

ಚೀನಾದ ವ್ಯಕ್ತಿಯೊಬ್ಬ ತನಾನು ಆರ್ಥಿಕ ಗುರು ಎಂದು ಪ್ರತಿ ದಿನ ವಿಡಿಯೋ ಮೂಲಕ ಹಲವು ಸಲಹೆ ನೀಡುತ್ತಿದ್ದ. ಹೂಡಿಕೆ, ಷೇರುಮಾರುಕಟ್ಟೆ ಸೇರಿದಂತೆ ಹಲವು ವಿಚಾರಗಳ ಕುರಿತು ವಿಡಿಯೋ ಪೋಸ್ಟ್ ಮಾಡುತ್ತಿದ್ದ. ಸೈಬರ್ ಸೆಕ್ಯೂರಿಟಿ ಅಧಿಕಾರಿಗಳು ಈತನ ಮೇಲೆ ದಾಳಿ ನಡೆಸಿದಾಗ ಸತ್ಯ ಬಹಿರಂಗವಾಗಿದೆ. ಈತನ ಬಳಿಕ ಕನಿಷ್ಠ ಡಿಗ್ರಿ ಕೂಡ ಇರಲಿಲ್ಲ. ಅರ್ಹತೆ ಇಲ್ಲದೆ ವಿಡಿಯೋ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾನೆ ಎಂದು ಚೀನಾ ಸರ್ಕಾರ ಈತನಿಗೆ 11.5 ಲಕ್ಷ ರೂಪಾಯಿ ದಂಡ ವಿಧಿಸಿದೆ.

35
ಚೀನಾದಲ್ಲಿ ನಿಯಮ ಕಠಿಣ

2025ರ ಅಕ್ಟೋಬರ್ ತಿಂಗಳಲ್ಲಿ ಚೀನಾ ಸೈಬರ್‌ಸ್ಪೇಸ್ ಆಡಳಿತ ಮಂಡಳಿ ಹೊಸ ನಿಯಮ ಜಾರಿಗೊಳಿಸಿದೆ. ಹೂಡಿಗೆ, ಉಳಿತಾಯ ಸೇರಿದಂತೆ ಆರ್ಥಿಕ ವಿಷಯ , ಶೈಕ್ಷಣಿಗೆ ವಿಷಯ, ವಿಜ್ಞಾನ, ವೈದ್ಯಕೀಯ ಸೇರಿದಂತೆ ಕೆಲ ಪ್ರಮುಖ ವಿಷಯಗಳ ಕುರಿತು ಮಾತನಾಡಲು, ವಿಡಿಯೋ ಮಾಡಲು ಕನಿಷ್ಠ ಅರ್ಹತೆ ನಿಗದಿ ಮಾಡಿದೆ. ಆಯಾ ವಿಷಯದಲ್ಲಿ ಪದವಿ, ವೃತ್ತಿಪರ ಅರ್ಹತೆ ಹೊಂದಿದ್ದರೆ ಮಾತ್ರ ಇನ್‌ಫ್ಲುಯೆನ್ಸರ್ ಆಗಿ, ವಿಡಿಯೋ ಪೋಸ್ಟ್ ಮಾಡಲು ಸಾಧ್ಯ. ಈ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ಫಿನಾನ್ಸ್ ಗುರುಗೆ ದಂಡ ವಿಧಿಸಲಾಗಿದೆ.

45
ಹಲವು ಖಾತೆಗಳು ರದ್ದು

ಈ ರೀತಿ ಅರ್ಹತೆ ಇಲ್ಲದೆ ಆರ್ಥಿಕ ಸಲಹೆ ಸೇರಿದಂತೆ ಇತರ ಸಲಹೆ ನೀಡುತ್ತಿದ್ದ ಹಲವು ಖಾತೆಗಳನ್ನು ಚೀನಾ ಸರ್ಕಾರ ರದ್ದು ಮಾಡಿದೆ. ಲಕ್ಷಾಂತರ ಫಾಲೋವರ್ಸ್ ಇದ್ದ ನೂರಾರು ಖಾತೆಗಳು ಬ್ಯಾನ್ ಆಗಿದೆ. ಅರ್ಹತೆ ಇಲ್ಲದವರು ಆರ್ಥಿಕ ಸಲಹೆಗಾರರಂತೆ, ವೈದ್ಯಕೀಯ ತಜ್ಞರಂತೆ ನಟಿಸಲು ಚೀನಾಜದಲ್ಲಿ ಅವಕಾಶವಿಲ್ಲ ಎಂದು ಸೈಪರ್‌ಸ್ಪೇಸ್ ಹೇಳಿದೆ.

55
ಚೀನಾ ಎಚ್ಚರಿಕೆ

ಹಲವರು ಸುಳ್ಳು ಮಾಹಿತಿ, ಪ್ರಚಾರಕ್ಕೆ ಕೆಲ ಷೇರುಗಳಲ್ಲಿ ಹೂಡಿಕೆ ಮಾಡಲು ಸಲಹೆ ಸೇರಿದಂತೆ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದರು. ಇದರಿಂದ ಹಲವರಿಗೆ ನಷ್ಟ ಸಂಭವಿಸುತ್ತಿತ್ತು. ಈ ರೀತಿಯ ಸುಳ್ಳು ಹಾಗೂ ಅನಗತ್ಯ ಸಲಹೆ ನೀಡುವ ಯಾವುದೇ ಇನ್‌ಫ್ಲುಯೆನ್ಸರ್ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಚೀನಾ ಎಚ್ಚರಿಸಿದೆ.

ಚೀನಾ ಎಚ್ಚರಿಕೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories