ಭಾರತ ಅಮೆರಿಕ ಟ್ರೇಡ್ ಡೀಲ್ ಸುಂಕ ಇಳಿಕೆಗೆ ಪಾಕಿಸ್ತಾನ ಕಂಗಾಲು, ಈ ಡೀಲ್ ಪಾಕಿಸ್ತಾನದಲ್ಲಿ ಕೋಲಾಹಲ ಸೃಷ್ಟಿಸಿದೆ. ಭಾರತದ ಮೇಲಿನ ಸುಂಕ ಇಳಿಕೆಯಾಗುತ್ತಿದ್ದಂತೆ ಪಾಕಿಸ್ತಾನದಲ್ಲಿ ಪ್ರಧಾನಿ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಮನೀರ್ ಟ್ರೋಲ್.
ಭಾರತ ಹಾಗೂ ಅಮೆರಿಕ ಟ್ರೇಡ್ ಡೀಲ್ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. ಭಾರತದ ಮೇಲೆ ಶೇಕಡಾ 50ಕ್ಕೂ ಹೆಚ್ಚು ಸುಂಕ ವಿಧಿಸಿದ್ದ ಅಮರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇದೀಗ ನೀತಿ ಸಡಿಲಗೊಳಿಸಿದ್ದಾರೆ. ಭಾರತದ ಮೇಲಿನ ಸುಂಕವನ್ನು ಶೇಕಡಾ 18ಕ್ಕೆ ಇಳಿಸಿದ್ದಾರೆ. ಇದರಿಂದ ಹಲವು ವಸ್ತುಗಳ ಮೇಲಿನ ಬೆಲೆ ಇಳಿಕೆಯಾಗುತ್ತದೆ. ಜೊತೆಗೆ ಭಾರತದಿಂದ ಅಮೆರಿಕಾಗೆ ರಫ್ತು ಕೂಡ ಸರಾಗವಾಗಿ ನಡೆಯಲಿದೆ. ಆದರೆ ಈ ಟ್ರೇಡ್ ಡೀಲ್ ಪಾಕಿಸ್ತಾನದಲ್ಲಿ ಕೋಲಾಹಲ ಸೃಷ್ಟಿಸಿದೆ.
26
ಮೋದಿ ಜೊತೆ ಮಾತುಕತೆ ಬಳಿಕ ಸುಂಕ ಇಳಿಕೆ
ಪ್ರಧಾನಿ ಮೋದಿ ಜೊತೆ ಫೋನ್ ಸಂಭಾಷಣೆ ನಡೆಸಿದ ಡೋನಾಲ್ಡ್ ಟ್ರಂಪ್ ಸುಂಕ ಇಳಿಕೆ ನಿರ್ಧಾರ ಘೋಷಿಸಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಮೂಲಕ ಟ್ರಂಪ್‌ಗೆ ಧನ್ಯವಾದ ಹೇಳಿದ್ದಾರೆ. ಈ ಒಪ್ಪಂದ ಕುರಿತು ಪಾಕಿಸ್ತಾನ ಜನ ಪ್ರತಿಕ್ರಿಯಿಸುತ್ತಿದ್ದಾರೆ. ಪ್ರಮುಖವಾಗಿ ಭಾರತ ತನ್ನ ಹಿತಾಸಕ್ತಿ, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಕೆಲಸ ಮಾಡುತ್ತಿದೆ. ಆದರೆ ಪಾಕಿಸ್ತಾನದ ಪ್ರಧಾನಿ ಹಾಗೂ ಸೇನಾ ಮುಖ್ಯಸ್ಥ ಡೋನಾಲ್ಡ್ ಟ್ರಂಪ್ ಕಾಲು ಹಿಡಿದು, ಒತ್ತಿ ಬಂದರೂ ಏನೂ ಪ್ರಯೋಜನವಾಗಲಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.
36
ಈ ಟ್ರೋಲ್ ಹಿಂದಿನ ಕಾರಣವೇನು
ಪಾಕಿಸ್ತಾನ ಜನ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ವಿರುದ್ದ ಈ ಪಾಟಿ ಟ್ರೋಲ್ ಮಾಡಲು ಪ್ರಮುಖ ಕಾರಣವಿದೆ. ಭಾರತದ ಮೇಲೆ ಶೇಕಡಾ 50 ರಷ್ಟು ತೆರಿಗೆ ವಿಧಿಸಿದ್ದರು ಸೈಲೆಂಟ್ ಆಗಿ ಕೆಲಸ ಮಾಡಿ ಇದೀಗ ಸುಂಕ ಇಳಿಸಿಕೊಂಡಿದೆ. ಆದರೆ ಪಾಕಿಸ್ತಾನ ತನ್ನ ದೇಶದ ಹಿತಾಸಕ್ತಿ ಎಲ್ಲಿಗೆ ತಂದು ನಿಲ್ಲಿಸಿದೆ. ಪಾಕಿಸ್ತಾನದ ಫೌಜಿ ಫೌಂಡೇಷನ್ ಷೇರುಗಳನ್ನು ಮಾರಾಟ ಮಾಡಲಾಗಿದೆ ಅನ್ನೋ ಸುದ್ದಿಗಳು ಪಾಕಿಸ್ತಾನದಲ್ಲಿ ಹರಿದಾಡುತ್ತಿದೆ. ಇದು ಪಾಕಿಸ್ತಾನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪಾಕಿಸ್ತಾನ ತನ್ನ ದೇಶದ ಹಿತಾಸಕ್ತಿ ಮಾಡುತ್ತಿಲ್ಲ. ಪ್ರಧಾನಿ ಷರೀಪ್ ಹಾಗೂ ಸೇನಾ ಮುಖ್ಯಸ್ಥ ಮನೀರ್ ದೇಶವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಎಲ್ಲಾ ದೇಶದ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ. ಇನ್ನು ಅಡಮಾನ ಇಡಲು, ಮಾರಾಟ ಮಾಡಲು ಪಾಕಿಸ್ತಾನದ ಬಳಿ ಏಮೂ ಇಲ್ಲ. ಹೀಗಾಗಿ ಪಾಕಿಸ್ತಾನ ಜನರ ಮನೆಯಲ್ಲಿರುವ ಪಾತ್ರೆ, ಕಬ್ಬಿಣ , ಇತರ ವಸ್ತುಗಳ ಮಾರಾಟ ಮಾಡಿ ದೇಶ ನಡೆಸುತ್ತಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
56
ಪಾಕಿಸ್ತಾನಕ್ಕೆ ಮೋಸ
ಡೋನಾಲ್ಡ್ ಟ್ರಂಪ್ ಪದೇ ಪದೇ ಆಸೀಮ್ ಮುನೀರ್ ಕರೆಸಿಕೊಂಡು ಮೀಟಿಂಗ್ ಮೇಲೆ ಮೀಟಿಂಗ್ ಮಾಡಿದರು. ಬೆಸ್ಟ್ ಫೀಲ್ಡ್ ಮಾರ್ಷಲ್ ಎಂದು ಬಿರುದು ನೀಡಿದರು. ಆದರೆ ಟ್ರಂಪ್ ಭಾರತದ ಮೇಲೆ ಸುಂಕ ಇಳಿಸಿದರೆ, ಪಾಕಿಸ್ತಾನಕ್ಕೆ ಮೋಸ ಮಾಡಿದ್ದಾರೆ ಎಂದು ಪಾಕಿಸ್ತಾನ ಜನ ಹಿಗ್ಗಾ ಮುಗ್ಗಾ ಷರೀಫ್ ಹಾಗೂ ಮುನೀರ್ ಟ್ರೋಲ್ ಮಾಡುತ್ತಿದ್ದಾರೆ.
66
ಅಸಹಾಯಕನಾದ ಪ್ರಧಾನಿ ಷರೀಫ್
ಪ್ರಧಾನಿ ಷರೀಫ್ ಇತ್ತೀಚೆಗೆ ವಿಶ್ವದ ಮುಂದೆ ಭಿಕ್ಷೆ ಬೇಡಲು ನಾಯಚಿಕೆಯಾಗುತ್ತಿದೆ ಎಂದಿದ್ದರು. ಆದರೆ ಪಾಕಿಸ್ತಾನ ಮುನ್ನಡೆಸಲು, ಭಿಕ್ಷೆ ಬೇಡದೆ ಬೇರೆ ಮಾರ್ಗವಿಲ್ಲ ಎಂದಿದ್ದರು. ಇದೀಗ ಷರೀಪ್ ಒಬ್ಬ ಮೂರ್ಖ ಎಂದು ಪಾಕಿಸ್ತಾನ ಜನ ಟ್ರೋಲ್ ಮಾಡುತ್ತಿದ್ದಾರೆ. ಪಾಕಿಸ್ತಾನದ ಎಲ್ಲಾ ಸಂಪತ್ತು ಮರಾಟ ಮಾಡಿ ದೇಶವನ್ನು ಈ ಸ್ಥಿತಿಗೆ ತಂದಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ