ವಾಷಿಂಗ್ಟನ್: ಜೆಫ್ರಿ ಎಪ್‌ಸ್ಟೀನ್ ಜಾಗತಿಕ ಮಟ್ಟದಲ್ಲಿ ಸಂಚಲನ ಮಾಡಿಸಿತ್ತು. ದಶಕಗಳ ಕಾಲ ನಡೆದ ವ್ಯವಸ್ಥಿತ ಲೈಂ*ಗಿಕ ಶೋಷಣೆಯ ಕರಾಳ ಮುಖವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಇದೀಗ ಈ ಫೈಲ್ ನ್ಯಾಯಾಂಗ ಇಲಾಖೆ ರಿಲೀಸ್ ಮಾಡಿದೆ.
ಅಮೆರಿಕದ ಲೈಂ*ಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಸಂಬಂಧಿಸಿದ 30 ಲಕ್ಷಪುಟಗಳ ದಾಖಲೆಗಳನ್ನು ಅಮೆರಿಕ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದೆ ಎಂದು ಯುಎಸ್ ಡೆಪ್ಯೂಟಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಶುಕ್ರವಾರ ಘೋಷಿಸಿದ್ದಾರೆ.
26
2,000 ಕ್ಕೂ ಹೆಚ್ಚು ವಿಡಿಯೊಗಳು!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2,000 ಕ್ಕೂ ಹೆಚ್ಚು ವಿಡಿಯೊಗಳು ಮತ್ತು 1,80,000 ಚಿತ್ರಗಳನ್ನು ಇದು ಹೊಂದಿದೆ ಎಂದರು. ಈ ಮೂಲಕ ಇನ್ನಷ್ಟು ಜಾಗತಿಕ ಮಟ್ಟದ ಉದ್ಯಮಿಗಳು, ರಾಜಕಾರಣಿಗಳು, ಪ್ರಭಾವಿಗಳ ಬಂಡವಾಳ ಬಯಲಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
36
ಏನಿದು ಹಗರಣ?
ಎಪ್‌ಸ್ಟೀನ್ ಹೈಪ್ರೊಫೈಲ್ ಲೈಂಗಿಕ ಕಾರ್ಯಕರ್ತೆಯರನ್ನು 2 ದಶಕಗಳ ಹಿಂದೆ ಅಮೆರಿಕದ ಗಣ್ಯರಿಗೆ ಒದಗಿಸುತ್ತಿದ್ದ ಒಂದು ವ್ಯವಸ್ಥಿತ ಜಾಲವಾಗಿದೆ.
ಈ ಹಿಂದೆ ಡೊನಾಲ್ಡ್ ಟ್ರಂಪ್, ಬಿಲ್ ಗೇಟ್ಸ್, ಬಿಲ್ ಕ್ಲಿಂಟನ್, ಮೈಕೆಲ್ ಜಾಕ್ಸನ್ ಸೇರಿ ಅನೇಕ ಗಣ್ಯರು ಸುಂದರ ಹುಡುಗಿಯರ ಜತೆ ಇರುವ ಕೆಲವು ಫೋಟೋಗಳು ಬಿಡುಗಡೆ ಆಗಿದ್ದವು. ಇದು ಜಾಗತಿಕ ವಲಯದಲ್ಲಿ ಸಂಚಲನವನ್ನೇ ಮೂಡಿಸಿತ್ತು.
56
ಕೋರ್ಟ್ ಸೂಚನೆ ಮೇರೆಗೆ ಕಡತ ರಿಲೀಸ್
ಕೋರ್ಟ್ ಸೂಚನೆ ಮೇರೆಗೆ ಆತನ ಕಡತಗಳಲ್ಲಿರುವ ಎಲ್ಲ ಬಾಕಿ ಫೋಟೋ, ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಕಳೆದ ತಿಂಗಳೇ ಟ್ರಂಪ್ ಸರ್ಕಾರ ಘೋಷಿಸಿತ್ತು. ಇದೀಗ ಅಮೆರಿಕ ನ್ಯಾಯಾಂಗ ಇಲಾಖೆ ಎಲ್ಲಾ ದಾಖಲೆಗಳನ್ನು ರಿಲೀಸ್ ಮಾಡಿದೆ.
66
200ಕ್ಕೂ ಅಧಿಕ ಪ್ರಮುಖ ವ್ಯಕ್ತಿಗಳ ಮುಖವಾಡ ಬಯಲು?
ಜೆಫ್ರಿ ಎಪ್‌ಸ್ಟೀನ್ 2008ರಲ್ಲಿ ಮಕ್ಕಳ ಲೈಂ*ಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು. ಇನ್ನು ಎಪ್‌ಸ್ಟೀನ್ ಫೈಲ್‌ನಲ್ಲಿ 200ಕ್ಕೂ ಅಧಿಕ ಪ್ರಮುಖ ವ್ಯಕ್ತಿಗಳ ಹೆಸರಿದ್ದು, ಇವರೆಲ್ಲಾ ಮಹಿಳೆಯರು ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಕ್ರೂರ ಲೈಂಗಿಕ ಶೋಷಣೆ ನಡೆಸಿರುವುದು ಈ ಫೈಲ್‌ನಲ್ಲಿ ದಾಖಲಾಗಿದೆ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ