ಜುಲೈ 25, 2017 ರಂದು, ನಿಮಿಷಾ ಪ್ರಿಯಾ ಯೆಮನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ಸ್ವಂತ ಕ್ಲಿನಿಕ್ ಪ್ರಾರಂಭಿಸಲು ಯೆಮೆನ್ ಪ್ರಜೆಯಾಗಿರುವ ತಲಾಲ್ ಅಬ್ದುಲ್ ಮೆಹದಿ ಸಹಾಯವನ್ನು ಪಡೆದುಕೊಂಡಿದ್ದರು. ನಂತರ ಇಬ್ಬರ ಮಧ್ಯೆ ಜಗಳ ಏರ್ಪಟ್ಟಿದ್ದರಿಂದ ತಲಾಲ್ ಅಬ್ದುಲ್ ಮೆಹದಿಯ ಉಸಿರನ್ನು ನಿಮಿಷಾ ಪ್ರಿಯಾ ನಿಲ್ಲಿಸಿದ್ದರು. ಅಂದಿನಿಂದ ನಿಮಿಷಾ ಪ್ರಿಯಾ ಯೆಮನ್ ಜೈಲಿನಲ್ಲಿದ್ದಾರೆ.