20 ವರ್ಷಗಳ ಹಿಂದೆಯೇ ದೇಶ ಬಿಟ್ಟು ಹೋದ ಗಂಡನಿಂದ ಮಹಿಳೆಗೆ ಸಿಕ್ತು ವಿಚ್ಚೇದನ

Published : Jul 27, 2025, 02:42 PM IST

2004 ರಲ್ಲಿ ಗಂಡ ದೇಶ ಬಿಟ್ಟು ಹೋದ ನಂತರ ಪತ್ನಿ ಮತ್ತು ಮಕ್ಕಳೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಂಡಿರಲಿಲ್ಲ ಅಥವಾ ಆರ್ಥಿಕ ಸಹಾಯ ಮಾಡಿರಲಿಲ್ಲ. 

PREV
14

2004ರಲ್ಲಿ ದೇಶ ಬಿಟ್ಟು ಹೋದ ಗಂಡ ಮತ್ತೆ ವಾಪಸ್ ಬರಲಿಲ್ಲ. ಹೆಂಡತಿ ಅಥವಾ ಮಕ್ಕಳ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳಲಿಲ್ಲ. ಕುಟುಂಬಕ್ಕೆ ಯಾವುದೇ ಆರ್ಥಿಕ ಸಹಾಯ ಮಾಡದ ಗಂಡನಿಂದ ಮಹಿಳೆ ವಿಚ್ಛೇದನ ಪಡೆದುಕೊಂಡಿದ್ದಾರೆ.

24

ಇಪ್ಪತ್ತು ವರ್ಷಗಳಿಂದ ಯಾವುದೇ ಆರ್ಥಿಕ ಸಹಾಯ ಮಾಡದೇ ಬಿಟ್ಟು ಹೋದ ಗಂಡನಿಂದ ಮಹಿಳೆಗೆ ಶರಿಯಾ ಕೋರ್ಟ್ ವಿಚ್ಛೇದನ ನೀಡಿದೆ. ಬಿಟ್ಟು ಹೋದ ಗಂಡ ಬಹ್ರೇನ್ ನವನಾಗಿದ್ದು, ಹೆಂಡತಿಗೆ ಕೋರ್ಟ್ ವಿಚ್ಛೇದನ ನೀಡಿದೆ. 20 ವರ್ಷಗಳ ಬಳಿಕ ಗಂಡನಿಂದ ಮಹಿಳೆ ಅಧಿಕೃತವಾಗಿ ದೂರವಾಗಿದ್ದಾರೆ.

34

2004ರಲ್ಲಿ ರಲ್ಲಿ ದೇಶ ಬಿಟ್ಟು ಹೋದ ಗಂಡ ಮತ್ತೆ ಹಿಂದಿರುಗಿ ಬಂದಿರಲಿಲ್ಲ. ಹೆಂಡತಿ ಅಥವಾ ಮಕ್ಕಳ ಜೊತೆಯೂ ವ್ಯಕ್ತಿ ಯಾವುದೇ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಕುಟುಂಬ ನಿರ್ವಹಣೆಗೂ ಯಾವುದೇ ಆರ್ಥಿಕ ಸಹಾಯ ಮಾಡಿರಲಿಲ್ಲ. ಕಾನೂನುಬದ್ಧವಾಗಿ ಮದುವೆಯಾಗಿದ್ರೂ ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಂಡಿರಲಿಲ್ಲ. ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕು ಎಂಬ ಆದೇಶವನ್ನು ಗಂಡ ಪಾಲನೆ ಮಾಡಿರಲಿಲ್ಲ.

44

ಗಂಡ ಬಿಟ್ಟು ಹೋದಾಗಿನಿಂದ ಮಹಿಳೆ ತನ್ನ ಮಕ್ಕಳೊಂದಿಗೆ ತವರು ಮನೆಯಲ್ಲಿಯೇ ವಾಸವಾಗಿದ್ದರು. ಸರಿಯಾದ ಸಾಕ್ಷಿಗಳ ಆಧಾರದ ಮೇಲೆ ಇಸ್ಲಾಮಿಕ್ ಕೌಟುಂಬಿಕ ಕಾನೂನಿನ ಪ್ರಕಾರ ಮಹಿಳೆಗೆ ಕೋರ್ಟ್ ವಿಚ್ಛೇದನ ನೀಡಿದೆ. ಕಾನೂನು ಪ್ರಕಾರ ನಿಗದಿತ ಅವಧಿ ಮುಗಿದ ನಂತರ ಮಹಿಳೆ ಮರುಮದುವೆ ಆಗಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Read more Photos on
click me!

Recommended Stories