ಕೊರೋನಾ ವಿರುದ್ಧ ಲಸಿಕೆಯ ಚಮತ್ಕಾರ, ಮಾನವರ ಮೇಲೆ ಪ್ರಯೋಗ ಯಶಸ್ವಿ!

First Published May 19, 2020, 2:53 PM IST

ವಿಶ್ವಾದ್ಯಂತ ಅಟ್ಟಹಾಸ ಮೂಡಿಸಿರುವ ಕೊರೋನಾ ವೈರಸ್ ತಾಂಡವಕ್ಕೆ ಬ್ರೇಕ್ ಹಾಕಲು ಎಲ್ಲ ದೇಶಗಳು ಹಗಲಿರುಳು ಶ್ರಮಿಸುತ್ತಿವೆ. ವಿಜ್ಞಾನಿಗಳು ಲಸಿಕೆ ತಯಾರಿಸಲು ನಿರಂತರ ಶ್ರಮಿಸುತ್ತಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಪ್ರಾಣಿಗಳ ಹಾಗೂ ಮಾನವನ ಮೇಲೆ ತಯಾರಿಸಿದ ಲಸಿಕೆಯ ಪ್ರಯೋಗವೂ ಭರದಿಂದ ಸಾಗಿವೆ. ಇವೆಲ್ಲದರ ನಡುವೆ ಅಮೆರಿಕದಲ್ಲಿ ನಡೆಯುತ್ತಿರುವ ಪ್ರಯೋಗಕ್ಕೆ ಸಂಬಂಧಿಸಿದಂತೆ ಶುಭ ಸಮಾಚಾರವೊಂದು ಲಭಿಸಿದೆ. ಇಲ್ಲಿನ ಮಾನವನ ಮೇಲೆ ನಡೆದ ಲಸಿಕೆಯು ಅದ್ಭುತ ಫಲಿತಾಂಶ ನೀಡಿದೆ.

ಈ ಲಸಿಕೆ ತಯಾರಿಸಿದ ಬೋಸ್ಟನ್‌ನಲ್ಲಿರುವ ಕಂಪನಿ ಮಾರ್ಡನಾ ಸೋಮವಾರ ಲಸಿಕೆ ಪ್ರಯೋಗಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ. ಯಾರೆಲ್ಲರ ಮೇಲೆ mRNA ಲಸಿಕೆ ಪ್ರಯೋಗ ನಡೆಸಲಾಗಿದೆಯೋ ಅವರ ದೇಹದಲ್ಲಿ ನಾವು ಊಹಿಸಿರುವುದಕ್ಕಿಂತಲೂ ಅಧಿಕ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಇದರಿಂದಾಗುವ ಅಡ್ಡ ಪರಿಣಾಮವೂ ಕಡಿಮೆ ಇದೆ, ಎಂದಿದೆ.
undefined
ಇದಕ್ಕಿಂತ ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ: ಸಿಇಓ:ಸೋಮವಾರ ಮಾರ್ಡನಾ ಆರಂಭಿಕ ಹಂತದ ಪ್ರಯೋಗ ಹಾಗೂ ಇದರಿಂದ ಸಿಕ್ಕ ಫಲಿತಾಂಶದ ಮಾಹಿತಿ ನೀಡಿದೆ. ಇದರ ಅನ್ವಯ mRNA-1273 ಹೆಸರಿನ ಈ ಲಸಿಕೆಯನ್ನು ಯಾರಿಗೆ ನೀಡಲಾಗಿದೆಯೋ ಅವರ ದೇಹದಲ್ಲಿಕಂಡು ಬರುವ ಅಡ್ಡ ಪರಿಣಾಮಗಳು ಗೋಚರಿಸಿವೆ. ಅಲ್ಲದೇ ಲಸಿಕೆಯೂ ಸುರಕ್ಷಿತವೆಂದು ಹೇಳಿ ಕೊಂಡಿದೆ.
undefined
ಲಸಿಕೆ ಚುಚ್ಚಿಸಿಕೊಂಡ ವ್ಯಕ್ತಿಯ ಇಮ್ಯೂನ್ ಸಿಸ್ಟಂ ವೈರಸ್ ವಿರುದ್ಧ ಹೋರಾಡಿ ಕೊರೋನಾದಿಂದ ಗುಣಮುಖರಾದ ರೋಗಿಗಳಿಗಿಂತಲೂ ಉತ್ತಮವಾಗಿದೆ.ಇದಕ್ಕಿಂತ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಕಂಪನಿ ಸಿಇಓ ಸ್ಟೀಫನ್ ಬೈಂಸಿಲ್ ತಿಳಿಸಿದ್ದಾರೆ.
undefined
42 ದಿನಗಳಿಂದ ಮಾನವರ ಮೇಲೆ ಪ್ರಯೋಗ ನಡೆಸುತ್ತಿರುವ ಮೊದಲ ಕಂಪನಿ: ಮಾರ್ಡನಾ ಲಸಿಕೆ ತಯಾರಿಸುವ ರೇಸ್‌ನಲ್ಲಿ ಅಮೆರಿಕದ ಈ ಕಂಪನಿ ಎಲ್ಲರನ್ನೂ ಹಿಂದಿಕ್ಕಿದೆ. ಈ ಕಂಪನಿಯು ಲಸಿಕೆ ತಯಾರಿಸಲು ಅಗತ್ಯವಾದ ಜೆನೆಟಿಕ್‌ ಕೋಡ್‌ ಸಂಗ್ರಹಿಸುವುದರಿಂದ ಹಿಡಿದು, ಅದನ್ನು ಮನುಷ್ಯರ ಮೇಲೆ ಪ್ರಯೋಗಿಸುವವರೆಗಿನ ಪಯಣವನ್ನು ಕೇವಲ 42 ದಿನಗಳಲ್ಲಿ ಸಾಧಿಸಿದೆ. ಅಲ್ಲದೇ ಇದು ಪ್ರಾಣಿಗಳನ್ನು ಬಿಟ್ಟು, ನೇರವಾಗಿ ಮಾನವನ ಮೇಲೆಯೇ ಪ್ರಯೋಗ ನಡೆಸಿದೆ.
undefined
ಮಾರ್ಚ್‌ನಲ್ಲಿ ಆರಂಭವಾಗಿತ್ತು ಪ್ರಯೋಗ:ಮಾರ್ಚ್ 16ರಂದು ಸಿಯೆಟಲ್‌ನ ಕಾಯ್ಜರ್ ಪರ್ಮನೆಂಟ್ ರಿಸರ್ಚ್ ಫೆಸಿಲಿಟಿಯಲ್ಲಿ ಎಲ್ಲಕ್ಕಿಂತ ಮೊದಲು ಈ ಲಸಿಕೆ ಇಬ್ಬರು ಮಕ್ಕಳ ತಾಯಿ, 43 ವರ್ಷದ ಜೆನಿಫರ್ ಹೆಸರಿನ ಮಹಿಳೆಗೆ ಚುಚ್ಚಲಾಗಿತ್ತು. ಮೊದಲ ಪ್ರಯೋಗದಲ್ಲಿ 18 ರಿಂದ 55 ವರ್ಷದ 45 ಆರೋಗ್ಯವಂತರನ್ನು ಭಾಗಿ ಮಾಡಲಾಗಿತ್ತು. ಇವರಲ್ಲಿ ಆರಂಭದಲ್ಲಿ ಎಂಟು ಮಂದಿಗೆ ಈ ಲಸಿಕೆ ಚುಚ್ಚಲಾಗಿತ್ತು.
undefined
ಕಡಿಮೆ ಪ್ರಮಾಣ ನೀಡಿ ಪ್ರಯೋಗ ನಡೆಸಲು ತಯಾರಿ: ಮಾರ್ಡನಾದ ಮುಖ್ಯ ವೈದ್ಯಾಧಿಕಾರಿ ಟಾಲ್ ಜಕಸ್ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಲಸಿಕೆಯ ಪ್ರಮಾಣವನ್ನು ಕಡಿಮೆ ಮಾಡಿದರೂ, ಮಹಾಮಾರಿ ವಿರುದ್ಧ ಹೋರಾಡುವಲ್ಲಿ ಇಮ್ಯೂನ್ ಸಿಸ್ಟಂ ಹೆಚ್ಚಾಗಿದೆ.ಈ ಫಲಿತಾಂಶ ಹಾಗೂ ಇಲಿಗಳ ಮೇಲಿನ ಅಧ್ಯಯನದ ಬಳಿಕ ಸಿಕ್ಕ ವರದಿ ಆಧಾರದ ಮೇಲೆ ಕಂಪನಿ ಇನ್ನು ಕಡಿಮೆ ಡೋಸ್ ನೀಡಿ ಪ್ರಯೋಗಿಸಲು ನಿರ್ಧರಿಸಿದೆ, ಎಂದಿದ್ದಾರೆ.
undefined
ಪ್ರಯೋಗದ ಮೊದಲ ಹಂತದಲ್ಲಿ ಅನೇಕ ಲಸಿಕೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಡ್ಡ ಪರಿಣಾಮಗಳು ದಾಖಲಾಗಿವೆ. ಉದಾ: ಲಸಿಕೆ ಚುಚ್ಚಿದ ಜಾಗದಲ್ಲಿ ಚಳಿಯಾದ ಅನುಭವ.ಈ ಫಲಿತಾಂಶ mRNA-1273 ಲಸಿಕೆಯಲ್ಲಿ ಕೊರೋನಾ ತಡೆಯುವ ಶಕ್ತಿ ಇದೆ ಎಂಬ ವಿಶ್ವಾಸ ನಮ್ಮಲ್ಲಿ ಮೂಡಿಸಿದೆ ಎಂದಿದ್ದಾರೆ.
undefined
ಮಾರ್ಡನಾ ಷೇರುಗಳಲ್ಲಿ ಮೂರು ಪಟ್ಟು ಏರಿಕೆ:ಈ ಕಂಪನಿ ಕೊರೋನಾ ವಿರುದ್ಧ ಪರಿಣಾಮಕಾರಿ ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾಗುತ್ತಿದೆ,ಎಂಬ ಸುದ್ದಿ ಬಹಿರಂಗಗೊಂಡ ಬೆನ್ನಲ್ಲೇ, ಇದರ ಷೇರು ಮೌಲ್ಯ ಮೂರು ಪಟ್ಟು ಏರಿಕೆಯಾಗಿದೆ.
undefined
ಪ್ರಯೋಗದ ಮೂರನೇ ಹಂತ ಶೀಘ್ರದಲ್ಲೆ ಆರಂಭ: ಎರಡನೇ ಹಂತದಲ್ಲಿ 600 ಜನರ ಮೇಲೆ ನಡೆಸುವುದಾಗಿ ಮಾರ್ಡನಾ ತಿಳಿಸಿದೆ. ಅಲ್ಲದೇ ಜುಲೈನಲ್ಲಿ ಈ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯಲಿದ್ದು, ಇದರಲ್ಲಿ ಸಾವಿರಕ್ಕೂ ಅಧಿಕ ಜನರ ಮೇಲೆ ಪ್ರಯೋಗ ನಡೆಯಲಿದೆ.
undefined
click me!