ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಹಾಟ್ ಬೆಡಗಿಯರು?: ನೋ ಸೆಕ್ಸ್ ಡಾಲ್ಸ್!

First Published | May 18, 2020, 6:24 PM IST

ಇಡೀ ವಿಶ್ವವೇ ಕೊರೋನಾ ವಿರುದ್ಧ ಸಮರ ಸಾರಿದೆ. ಈ ಮಹಾಮಾರಿಯಿಂದಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಹಾಮಾರಿ ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿದ್ದು, ಭಾರತ ಕೂಡಾ ಇದರಲ್ಲಿ ಒಂದು. ಆದರೀಗ ಅನೇಕ ರಾಷ್ಟ್ರಗಳು ನಿಧಾನವಾಗಿಇ ಲಾಕ್‌ಡೌನ್ ಹಿಂಪಡೆಯಲಾಗುತ್ತಿದೆ. ಹೀಗಿದ್ದರೂ ಅಪಾರ ಸಂಖ್ಯೆಯಲ್ಲಿ ಜನರು ಸೇರಲು ಅವಕಾಶವಿಲ್ಲ. ಅತ್ತ ದಕ್ಷಿಣ ಕೊರಿಯಾದಲ್ಲೂ ಕೊರೋನಾ ತಾಂಡವವಾಡುತ್ತಿದ್ದು, ಲಾಕ್‌ಡೌನ್ ಕೂಡಾ ಹೇರಲಾಗಿದೆ. ಆದರೆ ಮನೆಯಲ್ಲೇ ಕುಳಿತು ಬೇಸರದಿಂದಿರುವ ಜನರ ಮನೋರಂಜನೆಗಾಗಿ ಫುಟ್ಬಾಲ್ ಏರ್ಪಡಿಸಲಾಗಿದೆ. ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲಾಗಿದ್ದು, ಇದನ್ನು ಲೈವ್ ಟೆಲಿಕಾಸ್ಟ್ ಮಾಡಲಾಗುತ್ತಿದೆ. ಹೀಗಿರುವಾಗ ಆಟಗಾರರನ್ನು ಹುರುದುಂಬಿಸಲು ಸ್ಟೇಡಿಯಂನಲ್ಲಿ ಹಲಲವಾರು ಸುಂದರ ಯುವತಿಯರು ಕಂಡು ಬಂದಿದ್ದಾರೆ. ಈ ಪಂದ್ಯದ ಕೆಲ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದಾಗ ಸ್ಟೇಡಿಯಂನಲ್ಲಿದ್ದ ಯುವತಿಯರ ಮೇಲೆ ಹಲವರು ಗಮನ ಕೇಂದ್ರೀಕರಿಸಿದ್ದು, ಈ ವೇಳೆ ಇವರೆಲ್ಲಾ ನಿಜವಾದ ಯುವತಿಯರಲ್ಲ ಸೆಕ್ಸ್ ಡಾಲ್ಸ್ ಎಂಬ ವಿಚಾರ ಬಯಲಾಗಿದೆ ಸದ್ಯ ಜನರೆಲ್ಲಾ ಆಯೋಜಕರಿಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ.

ಸೌತ್ ಕೊರಿಯನ್ ಫುಟ್ಬಾಲ್ ಮ್ಯಾಚ್‌ನಲ್ಲಿ ಆಯೋಜಕರು ಸ್ಟೇಡಿಯಂನಲ್ಲಿ ಹಲವಾರು ಗೊಂಬೆಗಳನ್ನು ಇಟ್ಟಿದ್ದರು. ಇವುಗಳ ಕೈಯ್ಯಲ್ಲಿ ಬೋರ್ಡ್‌ಗಳು ಕೂಡಾ ಇದ್ದವು. ದೂರದಿಂದ ನೋಡಿದ್ರೆ ಮ್ಯಾಚ್ ವೀಕ್ಷಿಸಲು ಯುವತಿಯರು ಬಂದಿದ್ದಾರೆನ್ನುವಂತೆ ಇವು ಕಾಣುತ್ತಿದ್ದವು.
undefined
ಆದರೆ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ, ಇವು ಸೆಕ್ಸ್ ಡಾಲ್ಸ್ ಎಂದು ನೆಟ್ಟಿಗರ ಗಮನಕ್ಕೆ ಬಂದಿದೆ. ಇದಾದ ಬಳಿಕ ಜನರು ಆಯೋಜಕರಿಗೆ ಹಿಗ್ಗಾಮುಗ್ಗ ಬೈಯ್ಯಲಾರಂಭಿಸಿದ್ದಾರೆ.
undefined

Latest Videos


ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಆಯೋಜಕರು ಕ್ಷಮೆ ಯಾಚಿಸಿದ್ದಾರೆ. ನಮಗೆ ಇದು ಸೆಕ್ಸ್ ಡಾಲ್ಸ್ ಎಂದು ತಿಳಿದಿರಲಿಲ್ಲ. ನಾವು ಗೊಂಬೆಗಳ ಆರ್ಡರ್ ನೀಡಿದ್ದೆವು. ಆದರೆ ಗೊಂಬೆಗಳ ಬದಲು ಸೆಕ್ಸ್ ಡಾಲ್ಸ್ ಡೆಲಿವರಿ ಮಾಡಿದ್ದಾರೆ ಎಂದು ಆಯೋಜಕರು ಬರೆದಿದ್ದಾರೆ.
undefined
ಈ ಮ್ಯಾಚ್‌ ವೇಳೆ ಆಯೋಜಕರು ಎಡಲ್ಟ್‌ ಕಂಪನಿಯನ್ನು ಪ್ರೊಮೋಟ್ ಮಾಡಲು ಹೀಗೆ ಮಾಡಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಹೀಗಿರುವಾಗ ಜನರು ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಒಂದು ವೇಳೆ ಆಯೋಜಕರು ತಿಳಿಯದೆ ಹೀಗೆ ಮಾಡಿದ್ದರೆ ತಲೆ ಕೆಡಿಸಿಕೊಳ್ಳಬೇಕಿಲ್ಲ, ಆದರೆ ತಿಳಿದು ಮಾಡಿದ್ದರೆ ಅವರು ತಲೆತಗ್ಗಿಸಬೇಕಾಗುತ್ತದೆ ಎಂದಿದ್ದಾರೆ.
undefined
ಭಾರೀ ವೈರಲ್ ಆಗುತ್ತಿರುವ ಈ ಫೋಟೋಗಳನ್ನು ನೆಟ್ಟಿಗರು ಕೂಡಾ ಶೇರ್ ಮಾಡಲಾರಂಭಿಸಿದ್ದಾರೆ. ಸ್ಟೇಡಿಯಂನಲ್ಲಿ ಇವುಗಳನ್ನು ಇರಿಸುವ ಮೊದಲು ಇವುಗಳಿಗೆ ಬಟ್ಟೆಯನ್ನೂ ತೊಡಿಸಲಾಗಿದೆ.
undefined
ಆಯೋಜಕರ ಐಡಿಯಾ ಏನೋ ಚೆನ್ನಾಗಿದೆ, ಆದರೆ ಸೆಕ್ಸ್ ಡಾಲ್ಸ್ ಆಗಿರುವುದರಿಂದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
undefined
ಇವುಗಳನ್ನು ಸಾಮಾಜಿಕ ಅಂತರವಿಟ್ಟು ಸ್ಟೇಡಿಯಂನಲ್ಲಿ ಕುಳ್ಳಿರಿಸಲಾಗಿದೆ. ಅಲ್ಲದೇ ಮುಖಕ್ಕೆ ಮಾಸ್ಕ್ ಕೂಡಾ ತೊಡಿಸಲಾಗಿದೆ.
undefined
ಇನ್ನು ಈ ಎಲ್ಲಾ ಸೆಕ್ಸ್ ಡಾಲ್ಸ್‌ಗಳನ್ನು ಒಂದೇ ಕಂಪನಿಯಿಂದ ತರಿಸಲಾಗಿದ್ದು, ಆಯೋಜಕರು ಜಾಹೀರಾತಿಗಾಗಿ ಹೀಗೆ ಮಾಡಿದ್ದಾರೆಂಬ ಆರೋಪವೂ ಕೇಳಿ ಬಂದಿದೆ.
undefined
ಆಯೋಜಕರು ಸ್ಟೇಡಿಯಂನಲ್ಲಿ ಅನೇಕ ಆಡಗಾರರ ಕಟೌಟ್‌ ಕೂಡಾ ಇರಿಸಿದ್ದರು. ಈ ಮೂಲಕ ಆಟಗಾರರನ್ನು ಹುರುದುಂಬಿಸುವುದು ಆಯೋಜಕರ ಉದ್ದೇಶವಾಗಿತ್ತು.
undefined
click me!