ಇರಾಕ್‌ನ ಬಗ್ದಾದ್‌ನಲ್ಲಿ ಸಂಸದೆ ಹಿಂದ್ ಅಲ್-ಅಬ್ಬಾಸಿ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ, ಅಧಿಕಾರಿಗಳು 927 ಕೋಟಿ ರೂಪಾಯಿ ನಗದು ಮತ್ತು 27 ಕೆ.ಜಿ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಚಿನ್ನದಲ್ಲಿ ಚಿನ್ನದ ಒಳ ಉಡುಪುಗಳು ಸೇರಿವೆ.
ಪ್ರಭಾವಿಗಳ ಮನೆಯ ಮೇಲೆ ರೇಡ್ ಮಾಡಿದಾಗ, ಕೋಟಿ ಕೋಟಿ ಬೆಲೆ ಬಾಳುವ ಚಿನ್ನಾಭರಣ, ಲೆಕ್ಕ ಮಾಡಲು ಬಾರದಷ್ಟು ನಗದು, ಈ ಹಣವನ್ನು ಲೆಕ್ಕ ಮಾಡಲು ಇಟ್ಟುಕೊಂಡಿರುವ ಮಷಿನ್‌ಗಳು ಸೇರಿದಂತೆ ಇನ್ನು ಏನೇನೋ ಸಿಗುವುದು ಮಾಮೂಲು. ಆದರೆ, ಹಿಂದೆಂದೂ ಕಂಡರಿಯದ ಒಂದು ಘಟನೆ ಇಲ್ಲಿ ನಡೆದಿದೆ. ಅದು ಸಂಸದೆಯ ಮನೆಯಲ್ಲಿ ಚಿನ್ನದ ಒಳ ಉಡುಪುಗಳು ಪತ್ತೆಯಾಗಿವೆ. ಅದೂ 27 ಕೆ.ಜಿ ತೂಕದ ಉಡುಪುಗಳು ಇವು. ಜೊತೆಗೆ 927 ಕೋಟಿ ರೂಪಾಯಿಗ ನಗದನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
25
ಜಾಗತಿಕ ಮಟ್ಟದ ಸಂಚಲನ
ಅಂದಹಾಗೆ ಇದು ನಡೆದಿರುವುದು ಇರಾಕ್‌ನ ಬಗ್ದಾದ್‌ನಲ್ಲಿ. ಇರಾಕ್‌ನಲ್ಲಿ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ಅಲ್ಲಿನ ಭ್ರಷ್ಟಾಚಾರ ನಿರೋಧಕ ಸಂಸ್ಥೆ ನಡೆಸಿರುವ ದಾಳಿ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇರಾಕ್‌ನ ಪ್ರಭಾವಿ ಸಂಸದೆ ಹಿಂದ್ ಅಲ್-ಅಬ್ಬಾಸಿ ಅವರ ಬಾಗ್ದಾದ್‌ನಲ್ಲಿರುವ ನಿವಾಸದ ಮೇಲೆ ನಡೆದ ದಿಢೀರ್ ದಾಳಿಯಲ್ಲಿ ಬರೋಬ್ಬರಿ 57 ಮಿಲಿಯನ್ ಯು.ಎಸ್. ಡಾಲರ್ (ಸುಮಾರು 927 ಕೋಟಿ ರೂಪಾಯಿ) ನಗದು ಮತ್ತು 27 ಕಿಲೋಗ್ರಾಂ ಅಪಾರ ಮೌಲ್ಯದ ಶುದ್ಧ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
35
ದೇಶದ ಇತಿಹಾಸದಲ್ಲೇ ದೊಡ್ಡ ಭ್ರಷ್ಟಾಚಾರ
ಜೂನ್ 30 ರಂದು ನಡೆದ ಈ ಕಾರ್ಯಾಚರಣೆಯ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಭ್ರಷ್ಟಾಚಾರದ ಜಪ್ತಿ ಪ್ರಕ್ರಿಯೆ ಇದಾಗಿದೆ ಎಂದು ಹೇಳಲಾಗಿತ್ತು.
ಸಂಸದೆಯ ಮನೆಯಲ್ಲಿ ತನಿಖಾಧಿಕಾರಿಗಳು ತೀವ್ರ ಶೋಧ ನಡೆಸಿದಾಗ ಬಂಡಲ್ ಆಫ್ ನೋಟುಗಳು ಮತ್ತು ಕೋಟ್ಯಂತರ ಮೌಲ್ಯದ ಚಿನ್ನದ ಬಿಲ್ಲೆಗಳು ಪತ್ತೆಯಾಗಿವೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅಲಿಯಾ ಮತ್ತು ಅವರ ಮಗನನ್ನು ಬಂಧಿಸಲಾಗಿದೆ.
55
ಈ ಹಿಂದೆ ದಾಳಿ
ಈ ಹಿಂದೆ ಮಾಜಿ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಸೇರಿದಂತೆ ಹಿರಿಯ ರಾಜಕಾರಣಿಗಳು, ಸಂಸದರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು. ಮೇ ತಿಂಗಳಲ್ಲಿ ಪ್ರಧಾನಿಯಾದ ಅಲಿ ಅಲ್-ಜೈದಿ, ದೇಶದಲ್ಲಿನ ಭ್ರಷ್ಟಾಚಾರ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಇರಾಕ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ