ಪಾಕಿಸ್ತಾನದ ಶ್ರೀಮಂತ ವ್ಯಕ್ತಿಯ ಮಗಳ ಆಸ್ತಿ ಅಂಬಾನಿ ಮಕ್ಕಳ ಆಸ್ತಿಗಿಂತಾ ಜಾಸ್ತಿ! ದಾನಕ್ಕೆ ಹೆಸರುವಾಸಿ ಶಾನ್ನಾ

Published : Jan 24, 2024, 03:48 PM IST

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯಂತೆ, ಪಾಕಿಸ್ತಾನದ ಶ್ರೀಮಂತ ವ್ಯಕ್ತಿ ಶಾಹಿದ್ ಖಾನ್ ಕೂಡ ತನ್ನ ಅತಿರಂಜಿತ ಜೀವನಶೈಲಿ, ಲೋಕೋಪಕಾರ ಮತ್ತು ವ್ಯಾಪಾರ ಹೂಡಿಕೆಗಳಿಂದಾಗಿ ಆಗಾಗ್ಗೆ ಸುದ್ದಿಯಾಗುತ್ತಾರೆ. ಅವರ ಪುತ್ರಿ ಶಾನ್ನಾ ದತ್ತಿ ಕಾರ್ಯದಲ್ಲಿ ತೊಡಗಿ ಪರೋಪಕಾರಕ್ಕಾಗಿ ಹೆಸರುವಾಸಿಯಾಗಿದ್ದಾಳೆ.

PREV
19
ಪಾಕಿಸ್ತಾನದ ಶ್ರೀಮಂತ ವ್ಯಕ್ತಿಯ ಮಗಳ ಆಸ್ತಿ ಅಂಬಾನಿ ಮಕ್ಕಳ ಆಸ್ತಿಗಿಂತಾ ಜಾಸ್ತಿ! ದಾನಕ್ಕೆ ಹೆಸರುವಾಸಿ ಶಾನ್ನಾ

ಪಾಕಿಸ್ತಾನದ ಹಣಕಾಸಿನ ಸ್ಥಿತಿಗತಿ ಎಷ್ಟೇ ನೆಲಕ್ಕೆ ಅಪ್ಪಳಿಸಿರಬಹುದು- ಆದರೆ, ಅಲ್ಲಿಯೂ ಕೆಲ ಅತಿ ಶ್ರೀಮಂತರಿದ್ದಾರೆ. ಅವರು, ಉದ್ಯಮರಂಗದಲ್ಲಿ ಹೆಸರು ಮಾಡುತ್ತಾ, ಲಾಭ ಮಾಡುತ್ತಾ, ದಾನ ಕಾರ್ಯದಲ್ಲೂ ತೊಡಗಿದ್ದಾರೆ. 
 

29

ಜಾಕ್ಸನ್‌ವಿಲ್ಲೆ ಜಾಗ್ವಾರ್ಸ್‌ ಆಫ್ ದ ನ್ಯಾಶನಲ್ ಫುಟ್ಬಾಲ್ ಲೀಗ್  ಮಾಲೀಕ ಶಾಹಿದ್ ಖಾನ್ ಅಂಥ ಪಾಕ್ ಶತಕೋಟಿ ಸರದಾರರಲ್ಲೊಬ್ಬರು. ಅವರು, ಪಾಕಿಸ್ತಾನದ ಅತಿ ಶ್ರೀಮಂತ ವ್ಯಕ್ತಿಯೂ ಹೌದು. 

39

12 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ಶಾಹಿದ್ ಖಾನ್ ಪಾಕಿಸ್ತಾನದ ಅತ್ಯಂತ ಶ್ರೀಮಂತ ವ್ಯಕ್ತಿ ಮಾತ್ರವಲ್ಲ, ವಿಶ್ವದ 158ನೇ ಶ್ರೀಮಂತ ವ್ಯಕ್ತಿ ಕೂಡಾ.
 

49

ಶಾಹಿದ್ ಖಾನ್ ಆನ್ ಕಾರ್ಲ್ಸನ್ ಅವರನ್ನು ವಿವಾಹವಾಗಿದ್ದಾರೆ.ದಂಪತಿಗೆ ಇಬ್ಬರು ಮಕ್ಕಳಿದ್ದು ಮಗ ಟೋನಿ ಖಾನ್ ಮತ್ತು ಮಗಳು ಶಾನ್ನಾ ನೋಯೆಲ್ ಖಾನ್. ಶಾಹಿದ್ ಅವರ ಮಗ, ಟೋನಿ ತನ್ನ ತಂದೆಯ ಉದ್ಯಮಗಳನ್ನು ನಿರ್ವಹಿಸುತ್ತಾನೆ. ಆತ ತಮ್ಮ ತಂದೆಯೊಂದಿಗೆ ಆಲ್ ಎಲೈಟ್ ವ್ರೆಸ್ಲಿಂಗ್ (AEW) ನ ಸಹ-ಮಾಲೀಕರಾಗಿದ್ದಾರೆ.  
 

59

ಆದರೆ ಅವರ ಮಗಳು ಶಾನ್ನಾ ಲೋಕೋಪಕಾರಿ ಮತ್ತು ದತ್ತಿ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ. ಶಾಹಿದ್ ಖಾನ್ ಅವರ ಮಗಳು ಶಾನ್ನಾ ಖಾನ್ ಜಾಗ್ವಾರ್ಸ್ ಫೌಂಡೇಶನ್ ಮೂಲಕ ಚಾರಿಟಬಲ್ ಉಪಕ್ರಮಗಳಿಗೆ ಹೆಸರುವಾಸಿಯಾಗಿದ್ದಾರೆ. 

69

ವುಲ್ಫ್ ಪಾಯಿಂಟ್ ಅಡ್ವೈಸರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಸ್ಟಿನ್ ಮೆಕ್‌ಕೇಬ್ ಅವರನ್ನು ವಿವಾಹವಾದ ಶಾನ್ನಾ ಖಾನ್ ಅವರು 20 ದಶಲಕ್ಷ ಡಾಲರ್‌ಗಳಿಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆಂದು ನಂಬಲಾಗಿದೆ. ಇದು ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಮಕ್ಕಳಾದ ಇಶಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಅವರ ಬಳಿ ಇರುವುದಕ್ಕಿಂತ ಹೆಚ್ಚು.

79

ವರದಿಗಳ ಪ್ರಕಾರ, ಶಾನ್ನಾ ಖಾನ್ ಮತ್ತು ಅವರ ಕುಟುಂಬವು ಕಳೆದ ವರ್ಷ ಇಲಿನಾಯ್ಸ್ ಪಶುವೈದ್ಯಕೀಯ ಬೋಧನಾ ಆಸ್ಪತ್ರೆಗೆ 123 ಕೋಟಿ ರೂ. ದಾನ ಮಾಡಿತ್ತು.

89

ಶಾನ್ನಾಳ ಬೇರುಗಳು ಪಾಕಿಸ್ತಾನಿಯಾಗಿದ್ದರೂ, ಆಕೆಯ ಸಹೋದರ ಟೋನಿ ಖಾನ್‌ನಂತೆಯೇ ಆಕೆ USAಯ ಇಲಿನಾಯ್ಸ್‌ನಲ್ಲಿ ಹುಟ್ಟಿ ಬೆಳೆದವಳು. 

 

99

ಶಾನ್ನಾ ಯುಎಸ್‌ನ ಕಾಂಗ್ರೆಸ್ಸಿಗರಿಗೆ ಜಿಲ್ಲಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ಯುನೈಟೆಡ್ ಮಾರ್ಕೆಟಿಂಗ್ ಕಂಪನಿ ವಿಶೇಷ ಪ್ಯಾಕೇಜಿಂಗ್ ವಿನ್ಯಾಸ ಸಂಸ್ಥೆಯ ಸಹ-ಮಾಲೀಕರಾಗಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories