ಅಮೆರಿಕಾದ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲೂ ಕಂಗೊಳಿಸಿದ ರಾಮ್‌ಲಲ್ಲಾ

First Published | Jan 22, 2024, 5:14 PM IST

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಮರು ನಿರ್ಮಾಣವಾಗಿದೆ. ದೇಶಾದ್ಯಂತ ಇಂದು ಹಬ್ಬದ ವಾತಾವರಣ ಮನೆ ಮಾಡಿತ್ತು. ವಿದೇಶದಲ್ಲಿರುವ ಭಾರತೀಯರು ಸಹ ಭಾರತದ ಈ ಐತಿಹಾಸಿಕ ದಿನವನ್ನು ಕಣ್ತುಂಬಿಕೊಂಡಿದ್ದಾರೆ. ಅಮೆರಿಕಾ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲೂ ರಾಮ ಕಂಗೊಳಿಸಿದ್ದಾನೆ.

ಶತಮಾನಗಳ ಕಾಲ ನಡೆಸಿದ್ದ ಹೋರಾಟದ ಫಲವಾಗಿ ಕೊನೆಗೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಮರು ನಿರ್ಮಾಣವಾಗಿದೆ. ಮಂದಿರದ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ರಾಮಲಲ್ಲಾನ ದರ್ಶನ ಪಡೆದು ಭಕ್ತಾಧಿಗಳು ಧನ್ಯರಾಗುತ್ತಿದ್ದಾರೆ.

ದೇಶಾದ್ಯಂತ ಇಂದು ಹಬ್ಬದ ವಾತಾವರಣ ಮನೆ ಮಾಡಿತ್ತು. ಎಲ್ಲಾ ಹಳ್ಳಿ ಹಳ್ಳಿಗಳಲ್ಲಿ ಜನರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.  

Tap to resize

ರಸ್ತೆಯುದ್ದಕ್ಕೂ ಕೇಸರಿ ಬಾವುಟಗಳನ್ನು ಕಟ್ಟಿದ್ದರು. ಜೈಶ್ರೀರಾಮ್‌, ಭಜನೆ ಹಾಡುಗಳು ಮುಗಿಲು ಮುಟ್ಟಿತ್ತು. ಎಲ್ಲೆಡೆ ರಾಮ ನಾಮದ ಸ್ಮರಣೆ ಕಂಡು ಬಂದಿತ್ತು.

ವಿದೇಶದಲ್ಲಿರುವ ಭಾರತೀಯರು ಸಹ ಭಾರತದ ಈ ಐತಿಹಾಸಿಕ ದಿನವನ್ನು ಸಂಭ್ರಮದಿಂದ ಕಣ್ತುಂಬಿಕೊಂಡಿದ್ದಾರೆ. ಟಿವಿ, ಲೈವ್‌ನಲ್ಲಿ ಕಾರ್ಯಕ್ರಮದ ಪ್ರಸಾರವನ್ನು ವೀಕ್ಷಿಸಿದ್ದಾರೆ.

ಮಾತ್ರವಲ್ಲ, ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಆಚರಿಸಲು ಇಲ್ಲಿ ವಾಸವಿರೋ ಭಾರತೀಯರು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಜಮಾಯಿಸಿದರು, ಐಕಾನಿಕ್ ಸ್ಥಳವನ್ನು ರೋಮಾಂಚಕ ಬಣ್ಣಗಳಿಂದ ಬೆಳಗಿಸಿದರು. ರಾಮನ ಫೋಟೋವನ್ನು ಕಂಡು ಸಂಭ್ರಮಿಸಿದರು.

ಫೋಟೋ ಮತ್ತು ವೀಡಿಯೋವನ್ನು ಭಾರತದ ಕಾನ್ಸುಲೇಟ್ ಜನರಲ್, ನ್ಯೂಯಾರ್ಕ್, ತನ್ನ X (ಟ್ವಿಟ್ಟರ್ ಖಾತೆ) ನಲ್ಲಿ ಹಂಚಿಕೊಂಡಿದೆ. 'ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ್-ಪ್ರತಿಷ್ಠೆಯ ಅದ್ಭುತ ಆಚರಣೆಯೊಂದಿಗೆ ಟೈಮ್ಸ್ ಸ್ಕ್ವೇರ್ ಅನ್ನು ಭಾರತೀಯ ಡಯಾಸ್ಪೊರಾ ಬೆಳಗಿಸಿದರು' ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ.

ಫೋಟೋಗಳಲ್ಲಿ, ಭಾರತೀಯ ಡಯಾಸ್ಪೊರಾ ಸದಸ್ಯರು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ 'ಜೈ ಶ್ರೀ ರಾಮ್' ಎಂದು ಬರೆದ ಕೇಸರಿ ಧ್ವಜಗಳನ್ನು ಬೀಸುತ್ತಿರುವುದನ್ನು ಕಾಣಬಹುದು.

'ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಿ, ಜನರು ಭಜನೆಗಳು ಮತ್ತು ಭಕ್ತಿಗೀತೆಗಳನ್ನು ಹಾಡಿದರು, ಭಾರತದ ಸಾಂಸ್ಕೃತಿಕ ಪರಂಪರೆ, ಚೈತನ್ಯ ಮತ್ತು ಏಕತೆಯನ್ನು ಪ್ರದರ್ಶಿಸಿದರು' ಎಂದು ಎಕ್ಸ್‌ನಲ್ಲಿ ಫೋಟೋ ಶೇರ್ ಮಾಡಲಾಗಿದೆ.

Latest Videos

click me!