ತಾನೇ ತೋಡಿದ ಗುಂಡಿಗೆ ಬಿದ್ದ ಚೀನಾ: ಡ್ರ್ಯಾಗನ್‌ ಬಣ್ಣ ಬಯಲು ಮಾಡಿದ ಲೈವ್ ವಿಡಿಯೋ!

First Published | Jun 25, 2020, 6:15 PM IST

ಚೀನಾ ಇಡೀ ವಿಶ್ವಕ್ಕೆ ಕೊರೋನಾ ಹೆಸರಲ್ಲಿ ನೀಡಿರುವ 'ಉಡುಗೊರೆ' ಜನರನ್ನು ಅದೆಷ್ಟು ಕಂಗೆಡಿಸಿದೆ ಎಂದರೆ ಎಲಲ್ಲರೂ ಅದರತ್ತ ಛೀ.. ಥೂ ಎಂದು ಉಗಿಯಲಾರಂಭಿಸಿದ್ದಾರೆ. ಇದರ ಒಂದು ಎಡವಟ್ಟಿನಿಂದ ಇಂದು ವಿಶ್ವದ ಅನೇಕ ರಾಷ್ಟ್ರಗಳು ಸಾವಿನ ಮನೆಯಂತಾಗಿವೆ. ಇನ್ನು ಬಾವಲಿ ಮಾಂಸ ತಿಂದ ಪರಿಣಾಮ ಈ ವೈರಸ್ ಮನುಷ್ಯರ ದೇಹ ಸೇರಿಕೊಂಡಿದೆ ಎಂಬುವುದು ಚೀನಾದ ವಾದ. ಆದರೆ ಇನ್ನೂ ಅನೇಕ ಮಂದಿ ಇದು ಚಿನಾದ ಲ್ಯಾಬ್‌ನಲ್ಲಿ ನಿರ್ಮಿಸಿದ್ದು, ಉದ್ದೇಶಪೂರ್ವಕವಾಗಿ ಹರಡಿದೆ ಎಂದಿದ್ದಾರೆ. ಅನೇಕ ರಾಷ್ಟ್ರಗಳು ಕೊರೋನಾ ಸಂಬಂಧ ಚೀನಾವನ್ನು ಆರೋಪಿಸಿವೆ. ಇದೇ ಕಾರಣದಿಂದ ಚೀನಾ ತನ್ನ ದೇಶದಲ್ಲಿ ಈ ವೈರಸ್‌ನಿಂದಾಗುತ್ತಿರುವ ಸಾವು ನೋವಿನ ಲೆಕ್ಕಾಚಾರವನ್ನು ಜಗತ್ತಿನಿಂದ ಮುಚ್ಚಿಡುತ್ತಿದೆ. ಅಲ್ಲದೇ ಈ ಮಾಹಿತಿಯನ್ನು ಹೊರ ಜಗತ್ತಿಗೆ ನೀಡುವವರು ನಿಗೂಢವಾಗಿ ನಾಪತ್ತೆಯಾಗುತ್ತಿದ್ದಾರೆ. ಹೀಗಿರುವಾಗಲೇ ಸದ್ಯ ಇಲ್ಲಿನ ನಲ್ವತ್ತು ವರ್ಷದ ಸ್ವತಂತ್ರ ಪತ್ರಕರ್ತೆ ಜಹಾಂಗ್ ಜಹಾಂರನ್ನು ಅರೆಸ್ಟ್ ಮಾಡಿದ್ದಾರೆಂಬ ಮಾತುಗಳು ಕೇಳಿ ಬಂದಿವೆ. ಈ ಪತ್ರಕರ್ತೆ ವುಹಾನ್, ಶಾಂಘೈ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ವಿಶ್ವಕ್ಕೆ ವಿಡಿಯೋ ಮೂಲಕ ತೋರಿಸಿದ್ದರು. ಇದಾದ ಬಳಿಕ ಈಕೆ ಕಳೆದ ತಿಂಗಳಿಂದ ನಾಪತ್ತೆಯಾಗಿದ್ದಾರೆ. ಸದ್ಯ ವರದಿಗಳನ್ವಯ ಇವರನ್ನು ಅರೆಸ್ಟ್ ಮಾಡಲಾಗಿದೆ.
 

ಚೀನಾದ ಸಿಟಿಜನ್ ಜರ್ನಲಿಸ್ಟ್ ದೇಶದಲ್ಲಿರುವ ಕೊರೋನಾ ಪರಿಸ್ಥಿತಿಯನ್ನು ಲವಾರು ವಿಡಿಯೋಗಳ ಮೂಲಕ ವಿಶ್ವದೆದುರು ತೆರೆದಿಟ್ಟಿದ್ದರು. ಇದಾದ ಬಳಿಕ ಕಳೆದ ಕೆಲ ಸಮಯದಿಂದ ಅವರು ಯಾವುದೇ ವಿಡಿಯೋ ಪೋಸ್ಟ್ ಮಾಡಿರಲಿಲ್ಲ. ಸದ್ಯ ಅವರನ್ನು ಅರೆಸ್ಟ್ ಮಾಡಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.
undefined
ಶಾಂಘೈ ನಿವಾಸಿ ನಲ್ವತ್ತು ವರ್ಷದ ಜಹಾಂಗ್ ಜಹಾಂರನ್ನು ಜನರನ್ನು ಕೆರಳಿಸಿರುವ ಹಾಗೂ ಉದ್ರೇಕಿಸಿರುವ ಆರೋಪದಡಿಯಲ್ಲಿ ಪೊಳಿಸರು ಅರೆಸ್ಟ್ ಮಾಡಿದ್ಧಾರೆ. ಇನ್ನು ಜಹಾಂಗ್ ಚೀನಾದ ಅಸಲಿ ಬಣ್ಣ ಬಯಲು ಮಾಡಿ ನಾಪತ್ತೆ ಅಥವಾ ಅರೆಸ್ಟ್ ಆದ ನಾಲ್ಕನೇ ಪತ್ರಕರ್ತೆಯಾಗಿದ್ದಾರೆ.
undefined

Latest Videos


ಜಹಾಂಗ್ ಯೂಟ್ಯೂಬ್ ಹಾಗೂ ಟ್ವಿಟರ್‌ ಮೂಲಕ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಆಸ್ಪತ್ರೆಯೊಂದರ ದೃಶ್ಯವಿತ್ತು. ಇದರಲ್ಲಿ ಆಸ್ಪತ್ರೆಯ ಕಾರಿಡೋರ್‌ನಲ್ಲಿ ರೋಗಿಗಳು ನರಳಾಡುತ್ತಿರುವುದು ಬಯಲಾಗಿತ್ತು. ತನ್ನ ದೇಶದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ ಎಂದು ಹೇಳುತ್ತಿದ್ದರೆ, ಈ ವಿಡಿಯೋ ಬೇರೆಯೇ ವಿಚಾರವನ್ನು ಬಯಲು ಮಾಡುತ್ತಿತ್ತು. ಇಲ್ಲಿ ಸೋಂಕಿತರ ಸಂಖ್ಯೆ ಅದೆಷ್ಟು ವೃದ್ಧಿಸಿದೆ ಎಂದರೆ ಆಸ್ಪತ್ರೆಯಲ್ಲಿ ಜಾಗದ ಅಭಾವ ಕಂಡು ಬಂದು ರೋಗಿಗಳು ಕಾರಿಡಾರ್‌ನಲ್ಲಿ ನರಳಾಡುತ್ತಿದ್ದಾರೆ.
undefined
ಎರಡನೇ ವಿಡಿಯೋದಲ್ಲಿ ಸ್ಮಶಾನಗಳ ಪರಿಸ್ಥಿತಿ ಅನಾವರಣಗೊಳಿಸಿದ್ದರು. ದೇಶದಲ್ಲಾದ ಸಾವಿನ ಸಂಖ್ಯೆ ಹಾಗೂ ಅಧಿಕೇತವಾಗಿ ಹೇಳಿದ ಸಂಖ್ಯೆಗೆ ಅಜಗಜಾಂತರ ವ್ಯತ್ಯಾಸವಿದೆ.
undefined
ಸ್ಮಶಾನದಲ್ಲಿ ನಡು ರಾತ್ರಿಯೂ ಸಿಬ್ಬಂದಿ ಶವಗಳನ್ನು ಸುಡುತ್ತಿರುವುದು ಕಂಡು ಬಂದಿತ್ತು. ಇದರಿಂದ ಚೀನಾ ಸಾವಿನ ಸಂಖ್ಯೆ ವಿಶ್ವದಿಂದ ಮುಚ್ಚಿಡುತ್ತಿರುವುದು ಸ್ಪಷ್ಟವಾಗಿದೆ.
undefined
ಜಹಾಂಗ್ ಈ ವಿಡಿಯೋದಲ್ಲಿ ಕೊರೋನಾ ವೈರಸ್ ನಿರ್ಮಿಸಲಾದ ಲ್ಯಾಬ್‌ ದೃಶ್ಯಗಳನ್ನೂ ಶೇರ್ ಮಾಡಿದ್ದರು.
undefined
ಈ ವಿಡಿಯೋದಲ್ಲಿ ಲ್ಯಾಬ್ ಸುತ್ತಲೂ ವಿದ್ಯುತ್ ಬೇಲಿ ಹಾಕಿರುವುದು ಕಂಡು ಬಂದಿದೆ. ಜೊತೆಗೆ ಸೇನಾ ಸಿಬಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಲ್ಯಾಬ್‌ ಒಂದರ ಭದ್ರತೆಗೆ ಸೇನಾ ಸಿಬ್ಬಂದಿ ನಿಯೋಜನೆ ಸಾಮಾನ್ಯವಲ್ಲ.
undefined
ಜಹಾಂಗ್ ಈ ಮೊದಲೂ ಹಲವಾರ ಬಾರೀ ಚೀನಾ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಹಿಂದೆಯೂ ಅವರು ಚೀನಾ ಅಧ್ಯಕ್ಷರ ನೀತಿಯನ್ನು ವಿರೊಧಿಸಿದ್ದರು.
undefined
ಇದು ಚೀನಾದ ಆಸ್ಪತ್ರೆಯೊಂದರಲ್ಲಿ ಮಧ್ಯರಾತ್ರಿ ಕಂಡು ಬಂದ ದೃಶ್ಯ.
undefined
ಈ ಹಿಂದೆ 34 ವರ್ಷದ ಚೆನ್ ಚೀನಾದಲ್ಲಿರುವ ಕೊರೋನಾ ಸ್ಥಿತಿಯನ್ನು ಬಯಲು ಮಾಡಿದ್ದರು. ಆದರೆ ಇದಾದ ಬಳಿಕ ಅವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
undefined
ವುಹಾನ್‌ನ ಫಾಂಗ್‌ ಕೂಡಾ ಇದೇ ರೀತಿ ನಾಪತ್ತೆಯಾಗಿದ್ದಾರೆ. ಇವರು ಫೆಬ್ರವರಿ ಆರಂಭದಿಂದ ಯಾರಿಗೂ ಕಂಡು ಬಂದಿಲ್ಲ.
undefined
ಜೆಹುಯೇ ಹೆಸರಿನ ಇವರೂ ಕಳೆದ ಫೆಬ್ರವರಿಯಿಂದ ನಾಪತ್ತೆಯಾಗಿದ್ದಾರೆ. ಇವರು ಚೀನಾದ ಲ್ಯಾಬ್‌ಗೆ ಕದ್ದು ಮುಚ್ಚಿ ಎಂಟ್ರಿಯಾಗಿದ್ದರು. ಫೆಬ್ರವರಿಯಲ್ಲಿ ಇವರನ್ನು ಅರೆಸ್ಟ್ ಮಾಡಿದ್ದು, ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಇದಾದ ಬಳಿಕ ಅವರು ಯಾವುದೇ ಪೋಸ್ಟ್ ಹಾಕಿಲ್ಲ
undefined
ಕಮ್ಯುನಿಟಿ ಪಾರ್ಟಿಯ ಸದಸ್ಯ ಜಿಕಿಯಾಂಗ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೊರೋನಾ ವಿರುದ್ಧ ತೆಗೆದುಕೊಂಡ ಕ್ರಮ ಟೀಕಿಸಿದ್ದರು. ಇದಾದ ಬಳಿಕ ಅವರ ವಿರುದ್ಧ ತನಿಖೆ ಆರಂಭವಾಗಿದೆ.
undefined
34 ವರ್ಷದ ಡಾಕ್ಟರ್ ವೆನ್‌ಲಿಯಾನಗ್ ಕೊರೋನಾದಿಂದ ಮೃತಪಟ್ಟಿದ್ದರು. ಅವರು ಮೊಟ್ಟ ಮೊದಲು ಕೊರೋನಾ ಸಂಬಂಧ ಮಾಹಿತಿಯನ್ನು ವಿಶ್ವದೆದುರು ತೆರೆದಿಟ್ಟಿದ್ದರು.
undefined
click me!