ಪೋಸ್ಟ್‌ ಆಫೀಸ್‌ನಲ್ಲಿ ಆ ಹಣ್ಣು, ನೋಡ ನೋಡ್ತಿದ್ದಂತೆ ಎಲ್ಲರಿಗೂ ವಾಂತಿ ಶುರು!

First Published Jun 25, 2020, 5:13 PM IST

ಹಣ್ಣೊಂದು ಸೃಷಷ್ಟಿಸಿದ ಅವಾಂತರದಿಂದ ಫೋಸ್ಟ್ ಆಫೀಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ಸೇರಿದ್ದು, ಸದ್ಯ ಪೋಸ್ಟ್ ಆಫೀಸನ್ನೇ ಸ್ಥಳಾಂತರ ಮಾಡಲಾಗಿದೆ. ಹೀಗ್ಯಾಕಾಯಿಇತು? ಅಷ್ಟಕ್ಕೂ ಆ ಹಣ್ಣು ಯಾವುದು? ಇಲ್ಲಿದೆ ನೋಡಿ ಸಂಪೂರ್ಣ ವಿವರ

ಹೌದು ವಿಶ್ವದ ಅತ್ಯಂತ ದುರ್ಗಂಧದ,ವಾಕರಿಕೆ ತರುವ ಆದರೆ ಅತ್ಯಂತ ದುಬಾರೀ ಹಣ್ಣು ಎಂದೇ ಖ್ಯಾತವಾಗಿರುವಡುರೇನ್ ಇಂತಹುದ್ದೊಂದು ಅವಾಂತರ ಸೃಷ್ಟಿಸಿದೆ.
undefined
ಈ ಹಣ್ಣಿನ ಕೆಟ್ಟ ವಾಸನೆಯಿಂದಾಗಿ ಜರ್ಮನಿಯ ಪೋಸ್ಟ್‌ ಆಫೀಸ್‌ ಸಿಬ್ಬಂದಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದ್ದಾರೆ.
undefined

Latest Videos


ಇನ್ನು ಈ ಹಣ್ಣಿನ ವಾಸನೆ ಅದೆಷ್ಟು ಭಯಂಕರವಾಗಿದೆ ಎಂದರೆ ಸದ್ಯ ಈ ಪೋಸ್ಟ್‌ ಆಫೀಸ್‌ನ್ನು ಕೆಲ ದಿನಕ್ಕೆ ಸ್ಥಳಾಂತರಗೊಳಿಸಲಾಗಿದೆ.
undefined
ಇಲ್ಲಿನ ನ್ಯೂರೆಂಬರ್ಗ್‌ನ ಸ್ಥಳೀಯ ನಿವಾಸಿ ಈ ಹಣ್ಣುಗಳನ್ನು ಆರ್ಡರ್ ಮಾಡಿದ್ದು, ಇದನ್ನು ಪೋಸ್ಟ್ ಸೇವೆ ಮೂಲಕ ಕಳುಹಿಸಿಕೊಡಲಾಗಿತ್ತು. ಆದರೆ ಸಿಬ್ಬಂದಿಗೆ ಡಬಬ್ಬಿಯೊಳಗೇನಿದೆ ಎಂಬ ಮಾಹಿತಿ ಇರಲಿಲ್ಲ.
undefined
ಶನಿವಾರ ಪೋಸ್ಟ್‌ ಆಫೀಸ್‌ನಲ್ಲಿ ಇದ್ದಕ್ಕಿದ್ದಂತೆ ಕೆಟ್ಟ ವಾಸನೆ ಬರಾರಂಭಿಸಿದೆ. ಅನೇಕರಿಗೆ ವಾಕರಿಕೆಯೂ ಬಂದಿದೆ. ಸಿಬ್ಬಂದಿ ಆಆರೋಗ್ಯ ಹದಗೆಡುತ್ತಿರುವುದನ್ನು ಕಂಡ ಒಬ್ಬರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
undefined
ಅಷ್ಟರಲ್ಲಾಗಲೇ ಆರು ಮಂದಿ ವಾಂತಿ ಮಾಡಿಕೊಂಡು ತೀವ್ರ ಅಸ್ಪಸ್ಥರಾಗಿದ್ದಾರೆ. ಕೂಡಲೇ ಆಂಬುಲೆನ್ಸ್‌ ಮೂಲಕ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದವರ ಆರೈಕೆಗಾಗಿ ವೈದ್ಯಕೀಯ ಸಿಬ್ಬಂದಿಳೂ ಆಗಮಿಸಿದ್ದಾರೆ.
undefined
ಸ್ಥಳಕ್ಕಾಗಮಿಸಿದ ಪೊಲೀಸರು ಬಾಕ್ಸ್‌ನೊಳಗೆ ಸಂಶಯಾಸ್ಪದ ವಸ್ತು ಏನಾದರೂ ಇರಬಹುದಾ ಎಂದು ಭಾವಿಸಿದ್ದಾರೆ. ಆದರೆ ಬಾಕ್ಸ್ ತೆರೆದು ನೋಡಿದಾಗ ಏನಾಗಿದೆ ಎಂಬ ವಿಚಾರ ತಿಳಿದಿದೆ.
undefined
ಒಟ್ಟು ಅರವತ್ತು ಸಿಬ್ಬಂದಿಯುಳ್ಳ ಆ ಕಚೇರಿಇಯನ್ನು ಸದ್ಯ ಸ್ಥಳಾಂತರ ಮಾಡಲಾಗಿದೆ. ಇನ್ನು ಆಬಬಾಕ್ಸ್‌ನಲ್ಲಿ ಒಟ್ಟು ನಾಲ್ಕು ಹಣ್ಣುಗಳಿದ್ದವೆಂಬ ವಿಚಾರ ತಿಳಿದು ಬಂದಿದೆ. ಸದ್ಯ ಹಣ್ಣುಗಳನ್ನು ಯಾರು ಆರ್ಡರ್ ಮಾಡಿದ್ದರೋ ಅವರಿಗೆ ತಲುಪಿಸಲಾಗಿದೆ.
undefined
ವಿಶ್ವದಲ್ಲೇ ಅತೀ ಹೆಚ್ಚು ವಾಸನೆ ಮತ್ತು ವಾಕರಿಕೆ ತರುವ ಹಣ್ಣು, ಹಾಗಂತ ಯಾರು ತಿನ್ನೋದಿಲ್ಲ ಅಂದುಕೊಳ್ಳಬೇಡಿ. ಇದಕ್ಕೊಂದು ಹಬ್ಬ ಮಾಡಿ, ಜನರು ಕ್ಯೂನಲ್ಲಿ ನಿಂತು ತಿನ್ನುತ್ತಾರೆ. ನೋಡಲು ಹಲಸಿನ ಹಣ್ಣಿನಂತೆ ಕಾಣುವ ಹೆಬ್ಬಲಸು ಅಥವಾ ಡ್ಯೂರೆನ್ ಇಂಥ ವಾಸನೆ ಬೀರೋ ಹಣ್ಣು.
undefined
ಈ ಹಣ್ಣನ್ನು ಹೆಚ್ಚಾಗಿ ಚೀನಾದಲ್ಲಿ ಬಳಸುತ್ತಾರೆ.ವರ್ಷದ ಮೊದಲನೆಯ ಹುಣ್ಣಿಮೆ ದಿನ ಅಥವಾ ವರ್ಷ ಮುಗಿಯುವ ಕೊನೆ ದಿನದಂದು ಹಬ್ಬವೊಂದನ್ನು ಆಚರಿಸಿ ಈ ಹಣ್ಣನ್ನು ತಿನ್ನುತ್ತಾರೆ.
undefined
ಈ ಹಣ್ಣಿನ ವಾಸನೆ ಒಂದು ಮೈಲಿವರೆಗೂ ಹಬ್ಬಿರುತ್ತದೆ. ಯಾವರ ಮೋರಿಯ ವಾಸನೆಗಿಂತಲೂ ಕಡಿಮೆ ಇರುವುದಿಲ್ಲ. ಮೊದಲ ಸಲ ವಾಸನೆ ತೆಗೆದುಕೊಳ್ಳುವವರಿಗೆ ವಾಕರಿಕೆ ಬಂದೇ ಬರುತ್ತದೆ. ಇದರ ದುರ್ವಾಸನೆಯನ್ನು ಜಿಮ್ ಸಾಕ್ಸ್‌ನೊಂದಿಗೆ ಟರ್ಪಂಟೈನ್, ಈರುಳ್ಳಿಯನ್ನು ಮಿಕ್ಸ್ ಮಾಡಿದರೆ ಹೇಗಿರುತ್ತೋ ಹಾಗಿರುತ್ತೆ!?
undefined
ವಿಪರೀತ ಶಕ್ತಿ ತರಿಸುವ ಗುಣಗಳಿರುವ ಈ ಹಣ್ಣು ಸಿಕ್ಕಾಪಟ್ಟೆ ರುಚಿಯಾಗಿರುವುದರಿಂದ ಜನರು ತಿನ್ನಲು ಹಾತೊರೆಯುತ್ತಾರೆ. ಅಲ್ಲದೇ ಖಿನ್ನತೆಯಂಥ ಮಾನಸಿಕ ಸಮಸ್ಯೆಯನ್ನೂಹೋಗಾಲಿಡಿಸುವ ಗುಣ ಈ ಹಣ್ಣಿಗೆದೆ. ಹಲ್ಲಿನ ಹಾಗೂ ಎಲುಬಿನ ಆರೋಗ್ಯಕ್ಕೂ ಅಗತ್ಯವಿರುವ ಅಂಶಗಳು ಈ ಹಣ್ಣಿನಲ್ಲಿದ್ದು, ಪಚನ ಕ್ರಿಯೆಯನ್ನೂ ಅಭಿವೃದ್ಧಿಗೊಳಿಸುತ್ತದೆ. ಬಹಳ ಔಷಧೀಯ ಗುಣಗಳಿರೋ ಕಾರಣದಿಂದಲೇ ಈ ಹಣ್ಣು ಅದೆಷ್ಟೇ ದುರ್ವಾಸನೆಯಿಂದ ಕೂಡಿದರೂ, ತಿನ್ನುತ್ತಾರೆ.
undefined
ಹಣ್ಣಿನ ದುರ್ವಾಸನೆ ಕಾರಣದಿಂದಲೇ ಚೀನಾ ಅಥವಾ ಏಷ್ಯಾದ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಕೆಲವು ಹೊಟೇಲ್‌ಗಳಲ್ಲಿ ಈ ಹಣ್ಣನ್ನು ಮಾರುವಂತಿಲ್ಲ
undefined
click me!