ಪ್ರಾಣಿಗಳಾಯ್ತು, ಈಗ ಗರ್ಭನಾಳದ ಕಷಾಯ ಕುಡೀತಿದ್ದಾರೆ ಚೀನಾ ಮಂದಿ!
First Published | Jun 24, 2020, 5:26 PM ISTವಿಶ್ವಾದ್ಯಂತ ಚೀನಾ ವಿರುದ್ಧ ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊರೋನಾ ಹಬ್ಬಿಸುವ ಮೂಲಕ ಇದು ವಿಶ್ವಕ್ಕೇ ಸಾವನ್ನು ಹಂಚಿದೆ. ಬಳಿಕ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಬಾವಲಿ, ಹಾವು ಮೊದಲಾದ ಪ್ರಾಣಿಗಳ ಮಾಂಸ ಮಾರಾಟಕ್ಕೆ ಕಡಿವಾಣ ಹಾಕಿದೆ. ಇಷ್ಟೇ ಅಲ್ಲದೇ, ಇದು ಪ್ರತಿ ವರ್ಷ ವಿವಾದಾತ್ಮಕ ಮಾಂಸದ ಹಬ್ಬವನ್ನೂ ಆಚರಿಸುತ್ತದೆ. ಆದರೆ ಈ ಬಾರಿ ಕೊರೋನಾದಿಂದಾಗಿ ಈ ಹಬ್ಬ ಆಚರಣೆ ಇರಲಿಕ್ಕಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಹೀಗಾಗಿಲ್ಲ. ಈ ವರ್ಷವೂ ಚೀನಾದಲ್ಲಿ ಕದ್ದು ಮುಚ್ಚಿ ಈ ಹಬ್ಬದ ಆಯೋಜನಗೆ ತಯಾರಿ ನಡೆಯುತ್ತಿದೆ. ಚೀನಿಯರು ಕೇವಲ ನಾಯಿ, ಬೆಕ್ಕು, ಬಾವಲಿ ಮಾತ್ರವಲ್ಲ ಗರ್ಭನಾಳವನ್ನೂ ತಿನ್ನುತ್ತಾರೆ. ಅಲ್ಲಿನ ಸಂಪ್ರದಾಯದನ್ವಯ ಗರ್ಭನಾಳದಿಂದ ತಯಾರಿಸಿದ ಕಷಾಯದಿಂದ ಪುರುಷತ್ವ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಇದು ಬಲ ಹೆಚ್ಚಿಸಿಕೊಳ್ಳಲು ಇರುವ ಒಂದು ವಿಶೇಷ ಉಪಾಯವಂತೆ.