ಹರ್ಮುಜ್ ಜಲಸಂಧಿ ಮತ್ತೆ ಬಂದ್! ಇಸ್ರೇಲ್ ಮೇಲೆ ಕೆಂಡಾಮಂಡಲವಾದ ಇರಾನ್‌ನಿಂದ ದಿಢೀರ್ ಕ್ರಮ

Published : Jun 20, 2026, 08:51 PM IST

ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ, ಇರಾನ್ ಹರ್ಮುಜ್ ಜಲಸಂಧಿಯನ್ನು ಮತ್ತೆ ಬಂದ್ ಮಾಡಿದೆ. ಇಸ್ರೇಲ್‌ನ ಈ ಕ್ರಮವು ಕದನ ವಿರಾಮ ಒಪ್ಪಂದದ ಉಲ್ಲಂಘನೆ ಎಂದು ಇರಾನ್ ಆರೋಪಿಸಿದ್ದು, ಈ ಬೆಳವಣಿಗೆಯು ವಲಯದಲ್ಲಿ ಮತ್ತೆ ಸಂಘರ್ಷದ ವಾತಾವರಣವನ್ನು ಸೃಷ್ಟಿಸಿದೆ.

PREV
15
ಹರ್ಮುಜ್ ಜಲಸಂಧಿಯನ್ನು ಮತ್ತೆ ಬಂದ್

ಟೆಹ್ರಾನ್: ಅಮೆರಿಕದೊಂದಿಗಿನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್, ಹರ್ಮುಜ್ ಜಲಸಂಧಿಯನ್ನು ಮತ್ತೆ ಬಂದ್ ಮಾಡಿದೆ. ಇಸ್ರೇಲ್‌ನ ಈ ಕ್ರಮವು ಒಪ್ಪಂದದ ಸಂಪೂರ್ಣ ಉಲ್ಲಂಘನೆ ಎಂದು ಆರೋಪಿಸಿರುವ ಇರಾನ್ ಈ ಸಂಬಂಧ ತುರ್ತು ನಿರ್ಧಾರ ಕೈಗೊಂಡಿದೆ.

25
ಮತ್ತೆ ಸಂಘರ್ಷದ ವಾತಾವರಣ

ಬೇರೆ ಬೇರೆ ದೇಶಗಳಲ್ಲಿ ಸ್ಥಗಿತಗೊಳಿಸಲಾಗಿರುವ ತನ್ನ ಆಸ್ತಿಯನ್ನು ಗಲ್ಫ್ ರಾಷ್ಟ್ರಗಳಿಗೆ ಪರಿಹಾರವಾಗಿ ನೀಡುವ ಯಾವುದೇ ಅಂತಾರಾಷ್ಟ್ರೀಯ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಇರಾನ್ ಕಠಿಣ ಎಚ್ಚರಿಕೆ ನೀಡಿದೆ. ಹರ್ಮುಜ್ ಜಲಸಂಧಿ ಮತ್ತೆ ಬಂದ್ ಆಗಿರುವುದರಿಂದ, ಈ ವಲಯದಲ್ಲಿ ಮತ್ತೆ ಸಂಘರ್ಷದ ವಾತಾವರಣ ನಿರ್ಮಾಣವಾಗುವ ಆತಂಕ ಶುರುವಾಗಿದೆ.

35
ಲೆಬನಾನ್‌ನಲ್ಲಿ ಹೆಚ್ಚಿದ ಸಂಘರ್ಷ

ಇಂದು ಜಿನೀವಾದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ನಡೆಯಬೇಕಿದ್ದ ಮಾತುಕತೆಯನ್ನು ರದ್ದುಗೊಳಿಸಲಾಗಿತ್ತು. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಈ ಸಭೆಯಿಂದ ಹಿಂದೆ ಸರಿದ ಕಾರಣ ಮಾತುಕತೆ ರದ್ದಾಗಿತ್ತು. ಲೆಬನಾನ್‌ನಲ್ಲಿ ಇಸ್ರೇಲ್ ನಿರಂತರವಾಗಿ ನಡೆಸುತ್ತಿರುವ ಭೀಕರ ದಾಳಿಯಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂಬ ಆತಂಕದಿಂದ ಜೆ.ಡಿ. ವ್ಯಾನ್ಸ್ ಈ ನಿರ್ಧಾರ ತೆಗೆದುಕೊಂಡಿದ್ದರು.

45
ಇಸ್ರೇಲ್‌ನಿಂದ ಮತ್ತಷ್ಟು ಕಠಿಣ ನಿರ್ಧಾರ

ಲೆಬನಾನ್ ಮೇಲೆ ದಾಳಿ ವಿಚಾರವಾಗಿ ಇಸ್ರೇಲ್ ಮತ್ತು ಅಮೆರಿಕ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಲೆಬನಾನ್‌ನಲ್ಲಿ ಮಧ್ಯರಾತ್ರಿಯಿಂದ ನಡೆಯುತ್ತಿರುವ ದಾಳಿಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವಾಗಲೇ ಇರಾನ್, ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ. ಇಸ್ರೇಲ್ ದಾಳಿಯನ್ನೇ ಮುಂದಿಟ್ಟುಕೊಂಡು ಇರಾನ್ ತನ್ನ ನಿಲುವನ್ನು ಮತ್ತಷ್ಟು ಕಠಿಣಗೊಳಿಸುತ್ತಿದೆ ಎಂದು ವರದಿಯಾಗಿದೆ.

55
ಇಸ್ರೇಲ್‌ನಿಂದ ಬರದ ಅಧಿಕೃತ ಪ್ರತಿಕ್ರಿಯೆ

ಲೆಬನಾನ್‌ನಲ್ಲಿನ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ಆಗ್ರಹಿಸಿವೆ. ಈ ನಡುವೆ ಅಮೆರಿಕದ ಉಪಾಧ್ಯಕ್ಷರು ಇಸ್ರೇಲ್ ವಿರುದ್ಧ ನೀಡಿದ ಹೇಳಿಕೆಯೊಂದು ಚರ್ಚೆಗೆ ಗ್ರಾಸವಾಗಿದೆ. "ಇಸ್ರೇಲ್ ಅನ್ನು ರಕ್ಷಿಸುತ್ತಿರುವ ಮೂರನೇ ಎರಡರಷ್ಟು ಶಸ್ತ್ರಾಸ್ತ್ರಗಳು ಅಮೆರಿಕದ ನಾಗರಿಕರ ತೆರಿಗೆ ಹಣದಿಂದ ಬಂದಿವೆ" ಎಂದು ಅವರು ಹೇಳಿಕೆ ನೀಡಿದ್ದರು. ಇದಕ್ಕೆ ಇಸ್ರೇಲ್ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories