ಇರಾನ್‌ ನಾಯಕರು ಬಲಿಷ್ಠರು, ಅದಕ್ಕೇ ಒಪ್ಪಂದಕ್ಕೆ ಬರ್ತಿಲ್ಲ: ಟ್ರಂಪ್ ಮೆಚ್ಚುಗೆಯ ರಹಸ್ಯವೇನು?

Published : Jun 08, 2026, 06:49 AM IST

ಇರಾನ್‌ನ ನಾಯಕರು ಬಲಿಷ್ಠರು ಮತ್ತು ಹೆಮ್ಮೆಯುಳ್ಳವರು, ಆದರೆ ಅಂತಿಮವಾಗಿ ಅಮೆರಿಕದೊಂದಿಗೆ ಒಪ್ಪಂದಕ್ಕೆ ಬರಲೇಬೇಕಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಸತ್ಯವನ್ನು ಒಪ್ಪಿಕೊಳ್ಳಲು ಅವರಿಗೆ ಸಮಯ ಬೇಕಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. 

PREV
14
ಇರಾನ್‌ನ ನಾಯಕರು ಬಲಿಷ್ಠರು

ವಾಷಿಂಗ್ಟನ್‌: ಇರಾನ್‌ನ ನಾಯಕರು ಬಲಿಷ್ಠರು ಹಾಗೂ ತಮ್ಮ ಸಾಮರ್ಥ್ಯದ ಬಗ್ಗೆ ಹೆಮ್ಮೆ ಹೊಂದಿದ್ದಾರೆ. ಹೀಗಾಗಿ ಅವರು ನಮ್ಮ ಜತೆಗೆ ಇನ್ನೂ ಅಂತಿಮ ಒಪ್ಪಂದ ಮಾಡಿಕೊಂಡಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೊಂಡಿದ್ದಾರೆ. ಆದರೆ, ಕೊನೆಗೆ ಅವರು ನಮ್ಮ ಜತೆಗೆ ಒಪ್ಪಂದಕ್ಕೆ ಬರುವುದು ಅನಿವಾರ್ಯ ಎಂದೂ ಇದೇ ವೇಳೆ ಟ್ರಂಪ್‌ ತಿಳಿಸಿದ್ದಾರೆ.

24
ಸತ್ಯ ಒಪ್ಪಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ

ಎನ್‌ಬಿಸಿ ಟೀವಿ ಜತೆ ಮಾತನಾಡಿದ ಅವರು, ‘ಹಲವು ತಿಂಗಳ ಸಂಘರ್ಷದ ಬಳಿಕ ಇರಾನ್‌ನ ನಾಯಕರು ತಾವು ಈಗ ಎದುರಿಸುತ್ತಿರುವ ಸ್ಥಿತಿಯನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಅವರು ಬಲಿಷ್ಠರು ಹಾಗೂ ತಮ್ಮ ಸಾಮರ್ಥ್ಯದ ಬಗ್ಗೆ ಅವರಿಗೆ ಹೆಮ್ಮೆ ಇದೆ. ತಾವು ಯಾವತ್ತೂ ಕಲ್ಪಿಸಿಕೊಳ್ಳದ ಕಾರ್ಯವನ್ನು ಅವರು ಮಾಡಲೇಬೇಕಾಗಿದೆ. ಅವರಿಗೆ ಇದನ್ನು ಬಿಟ್ಟು ಬೇರೆ ವಿಧಿ ಇಲ್ಲ, ಈ ಸತ್ಯ ಒಪ್ಪಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದರು. ಈ ಮೂಲಕ ಇರಾನ್‌ ಜತೆಗಿನ ಒಪ್ಪಂದ ವಿಳಂಬವಾಗುತ್ತಿರುವ ಕುರಿತು ಸ್ಪಷ್ಟನೆ ನೀಡಿದರು.

34
ಪಾಕ್‌ ಸಚಿವ ಇರಾನ್‌ಗೆ ಭೇಟಿ

ಸಂಘರ್ಷದ ವೇಳೆ ಅವರು ಅವರು ತೀವ್ರ ಹಿನ್ನಡೆ ಅನುಭವಿಸಿದ್ದು, ಅದಕ್ಕೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದಾರೆ. 47 ವರ್ಷಗಳಿಂದ ಅವರು ಮನಸ್ಸಿಗೆ ಬಂದಂತೆ ನಡೆದುಕೊಂಡಿದ್ದಾರೆ. ಅವರ ವಿರುದ್ಧ ಈ ರೀತಿಯ ಕ್ರಮ ತುಂಬಾ ಹಿಂದೆಯೇ ಆಗಬೇಕಿತ್ತು. ಅಮೆರಿಕದ ಹಿಂದಿನ ಅಧ್ಯಕ್ಷರು ಅಥವಾ ಬೇರೆ ದೇಶಗಳು ಈ ಕಾರ್ಯ ಮಾಡಬೇಕಿತ್ತು ಎಂದರು.

ಈ ನಡುವೆ, ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಗಳನ್ನು ಪುನರಾರಂಭಿಸುವ ಹೊಸ ಪ್ರಯತ್ನದಲ್ಲಿ ಪಾಕಿಸ್ತಾನದ ಆಂತರಿಕ ಸಚಿವರು ಭಾನುವಾರ ಟೆಹ್ರಾನ್‌ಗೆ ತೆರಳಿದ್ದಾರೆ.

44
ನಿಲ್ಲದ ದಾಳಿ

ಕದನವಿರಾಮ ಇದ್ದರೂ ಭಾನುವಾರ ದಾಳಿ ಮುಂದುವರಿದಿವೆ. ಅಂತಾರಾಷ್ಟ್ರೀಯ ಸಮುದ್ರ ಸಂಚಾರಕ್ಕೆ ಬೆದರಿಕೆಯೊಡ್ಡುವ ಹೋರ್ಮುಜ್ ಜಲಸಂಧಿಯ ಮೇಲೆ ಇನ್ನೂ 2 ಇರಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಅಮೆರಿಕ ತಿಳಿಸಿದೆ. ಮತ್ತೊಂಡೆದೆ, ಹಿಜ್ಬುಲ್ಲಾ ಉಗ್ರಗಾಮಿ ಗುಂಪು ಉತ್ತರ ಇಸ್ರೇಲ್ ಕಡೆಗೆ ಈ ಹಿಂದೆ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಲೆಬನಾನ್‌ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories