ಅಯ್ಯೋ..ಪ್ರಧಾನಿಗೆ ಅವಾಚ್ಯ ಶಬ್ದ ಬಳಸಿದ ಅಮೆರಿಕ ಅಧ್ಯಕ್ಷ Donald Trump; ಸುಮ್ನೆ ಇರಲ್ಲ ಎಂದ ಇಸ್ರೇಲ್

Published : Jun 02, 2026, 09:10 AM IST

Iran Israel War: ಅಮೆರಿಕ ಹಾಗೂ ಇರಾನ್‌ ನಡುವಿನ ಈಗಿನ ಸಂಬಂಧ, ಯುದ್ಧದ ಬಗ್ಗೆ ಹೊಸತಾಗಿ ಹೇಳುವಂಥದ್ದು ಏನೂ ಇಲ್ಲ. ಈಗ ಅಮೆರಿಕ ಜೊತೆ ಯಾವುದೇ ಒಪ್ಪಂದ ಮಾಡಿಕೊಳ್ಳಬೇಕಾದರೆ ಲೆಬನಾನ್‌ನಲ್ಲಿ ಕದನ ವಿರಾಮ ಘೋಷಿಸಲೇಬೇಕು ಎಂದು ಇರಾನ್‌ ಹೇಳಿದೆ. ಈಗ ಟ್ರಂಪ್‌ ಅವರು ಬೈದಿದ್ದಾರೆ. 

PREV
15
ದೇಶಗಳ ಮಧ್ಯೆ ಯುದ್ಧ ಯಾಕೆ?

ಇರಾನ್‌ ಹಾಗೂ ಇಸ್ರೇಲ್‌ಗೆ ಆಗಿ ಬರೋದಿಲ್ಲ. ಇಸ್ಲಾಂಮಿಕ್‌ ಕ್ರಾಂತಿ ಆದ ಬಳಿಕ ಕೂಡ ಇಸ್ರೇಲ್‌ಗೆ ಕಾನೂನುಬದ್ಧ ದೇಶ ಎಂಬ ಪಟ್ಟ ಕೂಡ ಸಿಕ್ಕಿಲ್ಲ. ಇಸ್ರೇಲ್‌ನ್ನು ನಿರ್ನಾಮ ಮಾಡೋದು ಇರಾನ್‌ ಗುರಿ. ಇಸ್ರೇಲ್‌ ಹಾಗೂ ಅಮೆರಿಕ ಒಳ್ಳೆಯ ಸ್ನೇಹ ಸಂಬಂಧ ದೇಶಗಳು. ಇಸ್ರೇಲ್‌ಗೆ ಏನೇ ಆದರೂ ಅಮೆರಿಕ ಅದರ ಪರ ಇರುತ್ತದೆ. ಹೀಗಾಗಿ ಇರಾನ್‌ ಗಾಜಾದ ಹಮಾಸ್ (Hamas), ಲೆಬನಾನ್‌ನ ಹೆಜ್ಬುಲ್ಲಾ (Hezbollah), ಯೆಮನ್‌ನ ಹೌತಿ (Houthis) ಬಂಡುಕೋರರರಿಗೆ ಹಣ ಕೊಟ್ಟು ಇಟ್ಟುಕೊಂಡಿದೆ.

25
ಇಸ್ರೇಲ್‌ ಪ್ರಧಾನಿಗೆ ಬೈದ್ರು!

ಫೋನ್‌ನಲ್ಲಿ‌ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು "ಹುಚ್ಚ", ಕೃತಘ್ನ ಎಂದು ಹೇಳಿದ್ದಾರೆ. “ನಿನಗೇನಾದರೂ ಹುಚ್ಚು ಹಿಡಿದಿದ್ಯಾ? ನಾನಿಲ್ಲ ಅಂದ್ರೆ ನೀನು ಈಗ ಜೈಲಿನಲ್ಲಿ ಇರಬೇಕಾಗಿತ್ತು. ನಾನು ನಿನ್ನನ್ನು ಸೇಫ್‌ ಮಾಡಿದ್ದೇನೆ. ಈಗ ಎಲ್ಲರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ. ಹೀಗಾಗಿ ಇಡೀ ಜಗತ್ತೇ ಇಸ್ರೇಲ್ ಅನ್ನು ದ್ವೇಷ ಮಾಡುವಂತಾಗಿದೆ" ಎಂದು ಹೇಳಿದ್ದಾರಂತೆ.

35
ಜೈಲಿಗೆ ಹೋಗಿಲ್ಲ

ಟ್ರಂಪ್ ಅವರು ನೆತನ್ಯಾಹು ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. "ನೀನು ಏನು ಮಾಡುತ್ತಿದ್ದೀಯಾ?" ಎಂದು ಕೂಗಿದ್ದಾರಂತೆ. ಇಸ್ರೇಲ್‌ನ ನಾಯಕ ಭ್ರಷ್ಟಾಚಾರ ಮಾಡಿದ್ದರೂ ಕೂಡ, ನಾನು ಬೆಂಬಲ ಕೊಟ್ಟೆ, ಹೀಗಾಗಿ ಜೈಲಿಗೆ ಹೋಗಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

45
ಹಾಗೆಲ್ಲ ಮಾಡಬೇಡಿ

ಲೆಬನಾನ್‌ನ ರಾಜಧಾನಿ ಬೀರತ್ ಮೇಲೆ ದಾಳಿ ಮಾಡ್ತೀವಿ ಎಂದು ಇಸ್ರೇಲ್‌ ಬೆದರಿಕೆ ಹಾಕುತ್ತಿವೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಆ ದೇಶವನ್ನು ಮತ್ತಷ್ಟು ಒಂಟಿಯಾಗಿಸುತ್ತವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಲೆಬನಾನ್‌ನಲ್ಲಿ ನಾಗರಿಕರ ಸಾವು, ಹಬ್ದುಲ್ಲಾ ನಾಯಕರನ್ನು ಗುರಿ ಮಾಡಿಕೊಂಡು, ವಸತಿ ಕಟ್ಟಡಗಳ ಮೇಲೆ ದಾಳಿ ಮಾಡುತ್ತಿರುವ ಬಗ್ಗೆ ಟ್ರಂಪ್‌ ಕಿಡಿಕಾರಿದ್ದಾರೆ. ಸದ್ಯಕ್ಕೆ ಇಸ್ರೇಲ್, ಬೀರತ್‌ನಲ್ಲಿರುವ ಹಬ್ದುಲ್ಲಾ ನೆಲೆಗಳ ಮೇಲೆ ದಾಳಿ ಮಾಡೋದು ಬೇಡ ಎಂದು ಸುಮ್ಮನಾಗಿದೆಯಂತೆ.

55
ನಾವು ಸುಮ್ಮನೆ ಇರೋದಿಲ್ಲ

ಇದಾದ ಬಳಿಕ ನೆತನ್ಯಾಹು ಅವರು, "ಹಬ್ದುಲ್ಲಾ ಇಸ್ರೇಲ್ ಮೇಲಿನ ದಾಳಿ ನಿಲ್ಲಿಸಿಲ್ಲ ಅಂದರೆ, ಬೀರತ್‌ನಲ್ಲಿರುವ ನೆಲೆಗಳ ಮೇಲೆ ಇಸ್ರೇಲ್ ದಾಳಿ ಮಾಡುತ್ತೆ, ಈ ನಡುವೆ ದಕ್ಷಿಣ ಲೆಬನಾನ್‌ನಲ್ಲಿ ಕಾರ್ಯಾಚರಣೆ ಮುಂದುವರಿಯುತ್ತೆ ಎಂದು ಡೊನಾಲ್ಡ್ ಟ್ರಂಪ್‌ಗೆ ಹೇಳಿದ್ದೀನಿ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ" ಎಂದು ಹೇಳಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories