ಯುಕೆ ಹೆಲಿಕಾಪ್ಟರ್ ಪತನದಲ್ಲಿ ಏಕೈಕ ಮಹಿಳಾ ಕಮಾಂಡೋ ಸೇರಿ ಮೂವರು ಸೇನಾಧಿಕಾರಿಗಳು ಸಾವು

Published : Jun 05, 2026, 08:22 AM IST

ತರಬೇತಿ ವೇಳೆ ಸೇನಾ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಏಕೈಕ ಮಹಿಳಾ ಕಮಾಂಡೋ ಸೇರಿ ಮೂವರು ಸೇನಾಧಿಕಾರಿಗಳು ಮೃತಪಟ್ಟ ಘಟನೆ ನಡೆದಿದೆ. 2001ರ ಬಳಿಕ ಕಮಾಂಡೋ ತರಬೇತಿ ಪೂರ್ಣಗೊಳಿಸಿ ವಾಯುಪಡೆ ಸೇರಿದ್ದ ಏಕೈಕ ಕಮಾಂಡೋ ಇದೀಗ ದುರಂತ ಅಂತ್ಯಕಂಡಿದ್ದಾರೆ.

PREV
16
31ರ ಹರೆಯದ ಏಕೈಕಾ ಮಹಿಳಾ ಕಮಾಂಡೋ ಸಾವು

ಸೇನಾಧಿಕಾರಿಗಳ ತರಬೇತಿ ವೇಳೆ ನೌಕಾಪಡೆಯ ಏಕೈಕ ಮಹಿಳಾ ಕಮಾಂಡೋ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಘಟನೆ ಯುಕೆಯಲ್ಲಿ ನಡೆದಿದೆ. ಬ್ರಿಟನ್ ನೇವಿಯ ಏಕೈಕ ಮಹಿಳಾ ಕಮಾಂಡೋ 31ರ ಹರೆಯದ ಲಿಲಿ ಮೇ ಫಿಶರ್ ದುರಂತ ಅಂತ್ಯ ಕಂಡಿದ್ದಾರೆ.

26
ಹೆಲಿಕಾಪ್ಟರ್ ಪತನಕ್ಕೆ ಕಾರಣವೇನು

ಇಂಗ್ಲೆಂಡ್‌ನ ಸೌತ್‌ವೆಸ್ಟ್ ಭಾಗದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಪತನಕ್ಕೆ ಕಾರಣ ಸ್ಪಷ್ಟವಾಗಿಲ್ಲ. 2022ರಲ್ಲಿ ತರಬೇತಿ ಪೂರ್ಣಗೊಳಿಸಿ ಬ್ರಿಟನ್ ನೇವಿ ಸೇರಿಕೊಂಡಿದ್ದ ಏಕೈಕ ಮಹಿಳಾ ಕಮಾಂಡೋ ಇದೀಗ ಹೆಲಿಕಾಪ್ಚರ್ ಪತನದಲ್ಲಿ ಅಂತ್ಯಕಂಡಿದ್ದಾರೆ. ಬ್ರಿಟನ್ ನೌಕಾಪಡೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.

36
ಅಲ್ ಆರ್ಮ್ಸ್ ಕಮಾಂಡೋ

ಬ್ರಿಟನ್ ನೇವಿಯಲ್ಲಿನ ಅಲ್ ಆರ್ಮ್ಸ್ ಕಮಾಂಡೋ ಎಂಬ ಹೆಗ್ಗಳಿಗೆಗೆ ಫಿಶರ್ ಪಾತ್ರರಾಗಿದ್ದರು. ಕಾರಣ 2001ರಿಂದ ಈ ಆಲ್ ಆರ್ಮ್ಸ್ ಕಮಾಂಡೋ ತರಬೇತಿ ಪೂರ್ಣಗೊಳಿಸಿದ ಏಕೈಕ ಕಮಾಂಡೋ ಈ ಫಿಶರ್. ಫಿಶರ್ ಬರೋಬ್ಬರಿ 17 ಬಾರಿ ಪಯತ್ನಿಸಿ ಪಾಸ್ ಆಗಿದ್ದರು

46
ಅಂತಿಮ ತರಬೇತಿ ವೇಳೆ ದುರಂತ

ಆಲ್ ಆರ್ಮ್ಸ್ ಕಮಾಂಡೋ ತರಬೇತಿಯ ಕೊನೆಯ ತರಬೇತಿ ವೇಳೆ ದುರಂತ ಸಂಭವಿಸಿದೆ. ತರಬೇತಿಯ ಅಂತಿಮ ಹಂತದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಈ ಘಟನೆಯಲ್ಲಿ ನೌಕಾಪಡೆಯ ಮತ್ತಿಬ್ಬರು ಕಿರಿಯ ಅಧಿಕಾರಿಗಳು ದುರಂತ ಅಂತ್ಯಕಂಡಿದ್ದಾರೆ.

56
ಇನ್‌ಸ್ಟಾಗ್ರಾಂನಲ್ಲಿ ಭರ್ಜರಿ ಫಾಲೋವರ್ಸ್

ನೌಕಾಪಡೆಯ ಕಮಾಂಡೋ ಆಗಿದ್ದ ಫಿಶರ್ ಇನ್‌ಸ್ಟಾಗ್ರಾಂನಲ್ಲಿ 45 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು. ತಮ್ಮ ನೌಕಾಪಡೆಯ ಸೇವೆ, ತರಬೇತಿ ಕುರಿತು ಪೋಸ್ಟ್ ಮಾಡಿ ಜನರ ನೆಚ್ಚಿನ ಕಮಾಂಡೋ ಆಗಿ ಹೊರಹೊಮ್ಮಿದ್ದರು. ಸೋಶಿಯಲ್ ಮೀಡಿಯಾ ಮೂಲಕ ಜನರ ಜೊತೆ ಉತ್ತಮ ಸಂಪರ್ಕದಲ್ಲಿದ್ದರು.

66
ತನಿಖೆಗೆ ಆದೇಶ

ಬ್ರಿಟನ್ ನೌಕಾಪಡೆಯ ಏಕೈಕ ನೇವಿ ಕಮಾಂಡೋ ದುರಂತ ಅಂತ್ಯಕಂಡ ಹೆಲಿಕಾಪ್ಟರ್ ಪತನ ಕುರಿತು ಬ್ರಿಟನ್ ಸರ್ಕಾರ ತನಿಖೆಗೆ ಆದೇಶಿಸಿದೆ. ಅಂತಿಮ ಹಂತದಲ್ಲಿ ತಾಂತ್ರಿಕ ದೋಷವೋ ಅಥವಾ ಉದ್ದೇಶಪೂರ್ವಕ ಕೃತ್ಯವೋ ಎಂಬ ಅನುಮಾನಗಳನ್ನು ಕೆಲ ಎಜೆನ್ಸಿಗಳು ವ್ಯಕ್ತಪಡಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories