ಮದುವೆಯಾಗಿ ಹನಿಮೂನ್‌ಗೆ ಹೊರಟ ಭಾರತದ ಪೈಲೆಟ್ ಹೆಲಿಕಾಪ್ಟರ್ ದುರಂತದಲ್ಲಿ ಸಾವು, ವಧು ಪಾರು

Published : Jun 01, 2026, 03:57 PM IST

ಭಾರತದ ಪೈಲೆಟ್ ಅದ್ಧೂರಿಯಾಗಿ ಮದುವೆಯಾಗಿದ್ದಾನೆ. ಬಳಿಕ ಹೆಲಿಕಾಪ್ಟರ್ ಮೂಲಕ ಪತ್ನಿ ಜೊತೆ ಮಂಟಪದಿಂದಲೇ ಹನಿಮೂನ್‌ಗೆ ತೆರಳಿದ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟರ್ ಪತನಗೊಂಡು ದುರಂತ ನಡೆದಿದೆ. 

PREV
16
ಹೆಲಿಕಾಪ್ಟರ್ ದುರಂತದಲ್ಲಿ ಪೈಲೆಟ್ ಸಾವು

ಪ್ರೀತಿಸಿದ ಗೆಳತಿ ಜೊತೆ ಅದ್ಧೂರಿ ವಿವಾಹ ಮಹೋತ್ಸವ ನಡೆದಿದೆ. ಕುಟುಂಬಸ್ಥರು ಆಪ್ತರು, ಗೆಳೆಯರು ಈ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಭಾರತೀಯ ಮೂಲದ 66 ವರ್ಷದ ದಾವೆ ಫಿಜಿ ವೃತ್ತಿಯಲ್ಲಿ ಪೈಲೆಟ್. ಹೀಗಾಗಿ ಮದುವೆ ಮಂಟಪದ ಬಳಿ ನವ ಜೋಡಿಗಳು ಹನಿಮೂನ್‌ಗೆ ತೆರಳಲು ಹೆಲಿಕಾಪ್ಟರ್ ರೆಡಿಯಾಗಿ ನಿಂತಿತ್ತು. ಆದರೆ ಇದೇ ಹೆಲಿಕಾಪ್ಟರ್ ಪತನಗೊಂಡು ಪೈಲೆಟ್, ನವ ವರ ದಾವೆ ಫಿಜಿ ದುರಂತ ಅಂತ್ಯಕಂಡ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.

26
ಅಮೆರಿಕದ ಡೆಲ್ಟಾ ಏರ್‌ಲೈನ್ಸ್ ಪೈಲೆಟ್

ಅಮೆರಿದ ಡೆಲ್ಟಾ ಏರ್‌ಲೈನ್ಸ್ ಪೈಲೆಟ್ ಆಗಿದ್ದ ದಾವೆ ಫಿಜಿ ಭಾರತದ ಕೇರಳದ ಮೂಲವದವರು. ಬಹುಕಾಲದ ಗೆಳೆತಿ ಜೊತೆ ಜಾರ್ಜಿಯಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿತ್ತು. ಮದುವೆ ಬಳಿಕ ರಾಬಿನ್ಸನ್ R66 ಹೆಲಿಕಾಪ್ಟರ್ ಮೂಲಕ ದಾವೆ ಫಿಜಿ ಹಾಗೂ ನವ ವಧು ಜೆಸ್ನಿ ಹನಿಮೂನ್‌ಗೆ ತೆರಳಿದ್ದಾರೆ.

36
ಹನಿಮೂನ್ ಪ್ರಯಾಣದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ

ಜಾರ್ಜಿಯಾದ ಪ್ರಖ್ಯಾತ ಆಸ್ಪತ್ರೆಯಲ್ಲಿ ಜೆಸ್ನಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದಾವೆ ಫಿಜಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜಿಸ್ನಿ ಹೆಲಿಕಾಪ್ಟರ್ ಮೂಲಕ ಅಮೆರಿಕದ ಸುಂದರ ತಾಣಕ್ಕೆ ಹನಿಮೂನ್ ಪ್ರಯಾಣ ಬೆಳೆಸಿದ್ದಾರೆ. ಉತ್ತಮ ಪೈಲೆಟ್ ಎಂದು ಗುರುತಿಸಿಕೊಂಡಿದ್ದ ದಾವೆ ಫಿಜಿ ಹಾಗೂ ಜೆಸ್ನಿ ಪ್ರಯಾಣ ಮಾಡುತ್ತಿದ್ದಂತೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

46
ಮದುವೆ ಸ್ಥಳದಿಂದ ಕೆಲವೇ ದೂರದಲ್ಲಿ ಪತನ

ಪ್ರಯಾಣ ಆರೇಂಭಿಸಿದ ಹೆಲಿಕಾಪ್ಟರ್ ಮದುವೆ ಸ್ಥಳದಿಂದ ಕೆಲವೇ ದೂರದಲ್ಲಿ ಪತನಗೊಂಡಿದೆ. ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ದೌಡಾಯಿಸಿದ್ದಾರೆ. ಈ ವೇಳೆ ದಾವೆ ಫೌಜಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ನವ ವಧು ಜೆಸ್ನಿ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಜೆಸ್ನಿಯನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿದೆ.

56
ಮದುವೆಯಾದ ಕೆಲವೇ ಗಂಟೆಗಳಲ್ಲಿ ದುರಂತ

ಚಿಕಿತ್ಸೆ ಪಡೆಯುತ್ತಿರುವ ಜೆಸ್ನಿ ಚೇತರಿಸಿಕೊಂಡು ಕಣ್ಣುಬಿಟ್ಟ ತಕ್ಷಣ ದಾವೆ ಫಿಜಿಯನ್ನು ಕೇಳಿದ್ದಾರೆ. ಕೆಲ ಹೊತ್ತಲ್ಲೇ ಪರಿಸ್ಥಿತಿ ಅರಿವಾಗಿದೆ. ವೃತ್ತಿಯಲ್ಲಿ ನರ್ಸ್ ಆಗಿರುವ ಜೆಸ್ನಿ ಒಂದೆಡೆ ಗಂಭೀರ ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದರೆ, ಇತ್ತ ಮದುವೆಯಾದ ಕೆಲವೇ ಗಂಟೆಯಲ್ಲಿ ಪತಿ ದಾವೆ ಫಿಜಿಯನ್ನು ಕಳೆದುಕೊಂಡಿದ್ದಾರೆ.

66
ಕಣ್ಣೀರಿಟ್ಟ ಮೃತನ ತಂದೆ

ಪ್ರತಿಕೂಲ ಹವಾಮಾನದಿಂದ ಸಮಸ್ಯೆಯಾಗಿದೆ. ತನಿಖೆ ನಡೆಯುತ್ತಿದೆ, ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಏನು ಮಾಡಲಿ ನನ್ನ ಮಗ ಇಲ್ಲ. ಆತನ ಪತ್ನಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ನರಕಯಾತನೆ ಅನುಭವಿಸುವಂತಾಗಿದೆ ಎಂದು ಜಾರ್ಜ್ ಫಿಜಿ ಕಣ್ಣೀರಿಟ್ಟಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories