9/11 ದಾಳಿ, ಬರೋಬ್ಬರಿ 3,000 ಗಂಟೆ ಗ್ರೌಂಡ್‌ ಝೀರೋ ಡ್ಯೂಟಿ ಮಾಡಿ ಕೊನೆಯುಸಿರೆಳೆದ ಶ್ವಾನ!

First Published | Sep 11, 2021, 5:25 PM IST

2001 ನೇ ವರ್ಷ ಅಮೆರಿಕದ ಪಾಲಿಗೆ ಬಹಳ ಕೆಟ್ಟದ್ದು. 2001 ಸೆಪ್ಟೆಂಬರ್ 11 ರಂದು WTC ಅವಳಿ ಕಟ್ಟಡದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಸುಮಾರು 3,000 ಜನರು ಸಾವನ್ನಪ್ಪಿದ್ದರು. ಇಷ್ಟು ದೊಡ್ಡ ಭಯೋತ್ಪಾದಕ ದಾಳಿ ಬಳಿಕ, ಅನೇಕ ಮಂದಿ ಮಂದಿ ರಕ್ಷಣಾ ಕಾರ್ಯಕ್ಕೆ ಜೊತೆಯಾಗಿದ್ದರು. ಆದರೆ ಮನುಷ್ಯರನ್ನು ಹೊರತುಪಡಿಸಿ, ಒಂದು ನಾಯಿ ಕೂಡ ಇದರಲ್ಲಿ ಭಾಗಿಯಾಗಿತ್ತು. ಅದು ಬರೋಬ್ಬರಿ 3,000 ಗಂಟೆಗಳ ಕಾಲ ಗ್ರೌಂಡ್‌ ಝೀರೋದಲ್ಲಿ ಡ್ಯೂಟಿ ಮಾಡಿತ್ತು. ಇಂದು, ಶನಿವಾರ ಅಮೆರಿಕದಲ್ಲಿ ನಡೆದ ಭಯೋತ್ಪಾದಕ ದಾಳಿಗೆ 20 ವರ್ಷಗಳಾಗಿವೆ. ಹೀಗಿರುವಾಗ ಎಲ್ಲೆಡೆ ಆ ಘಟನೆ ಸ್ಮರಿಸಲಾಗುತ್ತಿದೆ. ಹೀಗಿರುವಾಗ ರಕ್ಷಣಾ ಕಾರ್ಯದಲ್ಲಿ ಆಭಗಿಯಾದ ನಾಯಿ ಮತ್ತು ಅದರ ನಿರ್ವಾಹಕನ ಕಥೆ ತಿಳಿದುಕೊಳ್ಳುವುದು ಕೂಡಾ ಮುಖ್ಯ. ಜನರ ಜೀವ ಉಳಿಸಲು ಅಲ್ಲಿ 3,000 ಗಂಟೆಗಳ ನಿರಂತರ ಸೇವೆ ಸಲ್ಲಿಸಿದೆ.

ದಿ ಸನ್ ನ ವರದಿಯ ಪ್ರಕಾರ, ಆ ನಾಯಿ ಹೆಸರು ಅಟ್ಲಾಸ್. ಅದರ ಡ್ಯಾಂಟ್ಲರ್‌ ಹೆಸರು ರಾಬರ್ಟ್. ಆ ಶ್ವಾನ ಹಾಗೂ ಅದರ ನಿರ್ವಾಹಕ ಅವಳಿ ಕಟ್ಟಡದ ಮೇಲೆ ನಡೆದ ಭಯೋತ್ಪಾದಕ ದಾಳಿ ನಡೆದ 45 ನಿಮಿಷಗಳ ಬಳಿಕ ಗ್ರೌಂಡ್‌ ಝೀರೋಗೆ ತಲುಪಿದ್ದರು. ಅಲ್ಲಿ ಅವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ಹುಡುಕುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಹೀಗೆ ಕರ್ತವ್ಯ ಆರಂಭಿಸಿದ ಅವರು ಬರೋಬ್ಬರಿ ಏಳು ತಿಂಗಳು ಅಲ್ಲೇ ಇದ್ದು, ಸೇವೆ ಸಲ್ಲಿಸಿದರು.

ಮಾಧ್ಯಮ ವರದಿಗಳ ಪ್ರಕಾರ, ಈ ಶ್ವಾನ ಹಾಗೂ ಹ್ಯಾಂಡ್ಲರ್ ಜೋಡಿ ಪ್ರತಿದಿನ 12 ಗಂಟೆಯ ಪಾಳಿಯಲ್ಲಿ ಕೆಲಸ ಮಾಡುತ್ತಿತ್ತು. ಅವರು ಮೇ 2002 ರವರೆಗೆ ಸಾವಿರಾರು ರಕ್ಷಣಾ ಸಿಬ್ಬಂದಿ ಜೊತೆಗೆ ಕೆಲಸ ನಿರ್ವಹಿಸಿದರು. ದಿ ಸನ್ ವರದಿಯಂತೆ, ಅಟ್ಲಾಸ್ ತುಂಬಾ ಚಿಕ್ಕ ನಾಯಿಯಾಗಿದ್ದು, ದಾಳಿಯ ಕೆಲಸ ಸಮಯದ ಹಿಂದಷ್ಟೇ ತರಬೇತಿ ಪೂರ್ಣಗೊಳಿಸಿತ್ತು. ಅಂತಹ ಪರಿಸ್ಥಿತಿಯಲ್ಲೂ, ಅದು ಅಷ್ಟು ದಿನ ಗ್ರೌಂಡ್ ಝೀರೋದಲ್ಲಿ ಹೇಗೆ ಕೆಲಸ ನಿರ್ವಹಿಸಿತು ಎಂಬ ಬಗ್ಗೆ ಎಲ್ಲರೂ ಅಚ್ಚರಿಗೀಡಾಗಿದ್ದರು.

Tap to resize

ಈ ಬಗ್ಗೆ ಮಾತನಾಡಿದ ರಾಬರ್ಟ್ ಶ್ರೆಲ್, ಆ ದಿನ ಏನಾಯಿತೋ, ಅದನ್ನೆದುರಿಸಲು ಯಾರೂ ತರಬೇತಿ ಪಡೆದು ಸಿದ್ಧರಿರಲಿಲ್ಲ. ಅಂದಿನ ಘಟನೆ ನೆನಪಿಸಿಕೊಂಡ ಸಮಯವನ್ನು ನೆನಪಿಸಿಕೊಂಡ ಶ್ರೆಲ್, ಘಟನೆಯ ಮೊದಲ ದಿನವನ್ನು ಎಂದಿಗೂ ಮರೆಯುವುದಿಲ್ಲ. ಮೊದಲ ದಿನದ ನಂತರ ಅವಶೇಷಗಳಡಿ ಸಿಲುಕಿದವರು ಯಾರೂ ಬದುಕುಳಿಯಲಿಲ್ಲ ಎಂದಿದ್ದಾರೆ.

"1993 ರ ವಿಶ್ವ ವ್ಯಾಪಾರ ಕೇಂದ್ರ ಸ್ಫೋಟ ಮತ್ತು 1995 ಒಕ್ಲಹೋಮ ನಗರ ಸ್ಫೋಟದ ನಂತರ ಈ ರೀತಿ ಏನಾದರೂ ಸಂಭವಿಸಬಹುದು ಎಂದು ನಾನು ಊಹಿಸಿರಲಿಲ್ಲ" ಎಂದು ಶ್ರೆಲ್ ಹೇಳಿದ್ದಾರೆ. ತಮ್ಮ 25 ವರ್ಷಗಳ ಸೇವೆ ಬಳಿಕ 2007 ರಲ್ಲಿ NYPD ಯಿಂದ ಶ್ರೆಲ್ ನಿವೃತ್ತರಾದರು.

ಕ್ಯಾನ್ಸರ್‌ನಿಂದ ಸತ್ತ ಅಟ್ಲಾಸ್

ಅಟ್ಲಾಸ್ ತನ್ನ ಎಂಟನೆ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದ ನಿಧನವಾಯಿತು. ಅವಶೇಷಗಳಡಿಯಿಂದ ಬಂದ ಹೊಗೆ ಬಹಳ ವಿಷಕಾರಿಯಾಗಿತ್ತು. ಬಹುಶಃ ಅಟ್ಲಾಸ್ ಮೇಲೆ ಕೆಟ್ಟ ಪರಿಣಾಮ ಬೀರಿತು ಹಾಗೂ ಅದೇ ಅಟ್ಲಾಸ್‌ನಲ್ಲಿ ಕ್ಯಾನ್ಸರ್ ಬರಲು ಕಾರಣವಾಗಿರಬಹುದು ಎಂದು ಶ್ರೆಲ್ ವಿವರಿಸಿದ್ದಾರೆ.

ಏನಿದು 9/11 ಭಯೋತ್ಪಾದಕ ದಾಳಿ

9/11 ರಂದು ಅಮೆರಿಕದಲ್ಲಿ ಭಯೋತ್ಪಾದಕ ದಾಳಿ ನಡೆಯಿತು. 2,996 ಜನರು ಈ ಭೀಕರ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಅಲ್ ಖೈದಾ ದಾಳಿ ನಡೆಸಲು 19 ಭಯೋತ್ಪಾದಕರನ್ನು ನೇಮಿಸಿತ್ತು. 4 ವಿಮಾನಗಳನ್ನು ಅಪಹರಿಸಿದ್ದ ಭಯೋತ್ದಾದಕರು, ಸೆಪ್ಟೆಂಬರ್ 11 ರ ಬೆಳಿಗ್ಗೆ 8.46 ಮತ್ತು 10.28 ರ ನಡುವೆ ಎರಡು ವಿಮಾನಗಳಿಂದ ವಿಶ್ವ ವ್ಯಾಪಾರ ಕೇಂದ್ರದ ಟವರ್ ಗಳಿಗೆ ಡಿಕ್ಕಿ ಹೊಡೆದು ದಾಲಿ ನಡೆಸಿದ್ದರು. ಬಳಿಕ. ಮೂರನೆ ವಿಮಾನ ಪೆಂಟಗನ್‌ನಿಂದ ಮತ್ತು ನಾಲ್ಕನೇ ವಿಮಾನ ಪೆನ್ಸಿಲ್ವೇನಿಯಾದಲ್ಲಿ ಪತನಗೊಂಡಿತು. ಜಾರ್ಜ್ ಡಬ್ಲ್ಯು ಬುಷ್ ಆಗ ಅಮೆರಿಕದ ಅಧ್ಯಕ್ಷರಾಗಿದ್ದರು.

Latest Videos

click me!