9/11 Terror Attack: ದಾಳಿಯ ಭೀಕರತೆ ತಿಳಿಸುತ್ತವೆ ಗ್ರೌಂಡ್ ಝೀರೋನ ಈ 10 ಚಿತ್ರಗಳು!
First Published | Sep 11, 2021, 9:00 AM IST9/11 ವಿಶ್ವದ ಇತಿಹಾಸದಲ್ಲೇ ಅತ್ಯಂತ ಭೀಕರ ದಿನವಾಗಿ ದಾಖಲಾಗಿದೆ. ಭಯೋತ್ಪಾದನೆಯ ಬಗ್ಗೆ ಪ್ರಪಂಚದ ದೃಷ್ಟಿಕೋನ ಬದಲಾಯಿಸಿದ ದಿನವದು. ಅಮೆರಿಕವನ್ನೇ ಬದಲಾಯಿಸಿದ ಹಾಗೂ ವಿಶ್ವದ ಕುಖ್ಯಾತ ಭಯೋತ್ಪಾದಕ ಬಿನ್ ಲಾಡೆನ್ ಸಾವಿಗೆ ಕ್ಷಣಗಣನೆ ಆರಂಭವಾದ ದಿನ. ಹೌದು. ಅಮೆರಿಕದಲ್ಲಿ ಭಯೋತ್ಪಾದಕ ದಾಳಿ ನಡೆದ ದಿನವಿದು. ಈ ಭಯೋತ್ದಾದಕ ದಾಳಿಗೆ ಬರೋಬ್ಬರಿ 2,996 ಜನರನ್ನು ಬಲಿಯಾಗಿದ್ದರು. ಈ ಉಗ್ರ ದಾಳಿ ನಡೆಸಲು ಅಲ್ ಖೈದಾ 19 ಭಯೋತ್ಪಾದಕರನ್ನು ನೇಮಿಸಿ, 4 ವಿಮಾನಗಳನ್ನು ಅಪಹರಿಸಿತ್ತು. ಸೆಪ್ಟೆಂಬರ್ 11 ರ ಬೆಳಿಗ್ಗೆ 8.46 ಮತ್ತು 10.28 ರ ನಡುವೆ ಎರಡು ವಿಮಾನಗಳು ವಿಶ್ವ ವ್ಯಾಪಾರ ಕೇಂದ್ರದ(WTC) ಟವರ್ ಗಳಿಗೆ ಡಿಕ್ಕಿ ಹೊಡೆದವು. ಮೂರನೆಯದು ಪೆಂಟಗನ್‌ನಿಂದ ಮತ್ತು ನಾಲ್ಕನೇ ವಿಮಾನ ಪೆನ್ಸಿಲ್ವೇನಿಯಾದಲ್ಲಿ ಪತನಗೊಂಡಿತ್ತು. ಜಾರ್ಜ್ ಡಬ್ಲ್ಯು ಬುಷ್ ಆಗ ಅಮೆರಿಕದ ಅಧ್ಯಕ್ಷರಾಗಿದ್ದರು. ಹೀಗಿರುವಾಗ 9/11 ದಾಳಿಯ ಹಲವು ಚಿತ್ರಗಳು ಬೆಳಕಿಗೆ ಬಂದಿದ್ದವು, ಆದರೆ ಗ್ರೌಂಡ್ ಐಈರೋ ಫೋಟೋಗಳನ್ನು ನೋಡಿದವರು ಕೆಲವರಷ್ಟೇ. ಹೀಗಿರುವಾಗ ಈ ದಾಳಿಯ ಭೀಕರತೆ ತಿಳಿಸಿಕೊಡುವ 10 ಚಿತ್ರಗಳು ಇಲ್ಲಿವೆ ನೋಡಿ.