ಇಸ್ರೇಲ್ ದಾಳಿಗೆ ನುಚ್ಚು ನೂರಾದ ಮನೆ: ಬದುಕುಳಿದ 6 ವರ್ಷದ ಮಗು!

Published : May 18, 2021, 06:26 PM ISTUpdated : May 18, 2021, 06:28 PM IST

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಮುಂದುವರೆದಿದೆ. ಎರಡು ದೇಶಗಳ ನಡುವಿನ ಈ ಹೋರಾಟದಲ್ಲಿ ಸಾವಿರಾರು ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅನೇಕ ಮಂದಿಯ ಮನೆ, ಕುಟಂಬ ಸರ್ವನಾಶವಾಗಿದೆ. ಆರು ವರ್ಷದ ಒಂದು ಮಗು ಕೂಡಾ ತನ್ನ ಇಡೀ ಮನೆ, ಕುಟುಂಬವನ್ನು ಈ ದಾಳಿಯಲ್ಲಿ ಕಳೆದುಕೊಂಡು ಅನಾಥವಾಗಿದೆ. ಸೂಜೀ ಎಶ್‌ಕುಂಟಾನಾ ಹೆಸರಿನ ಈ ಬಾಲಕಿ ಗಾಜಾ ದಾಳಿಯಲ್ಲಿ ಬದುಕುಳಿದಿದೆ, ಆದರೆ ಈ ಮುಗ್ಧ ಮಗು ತನ್ನ ತಾಯಿ ಸೇರಿ ನಾಲ್ವರು ಒಡ ಹುಟ್ಟಿದವರನ್ನು ಕಳೆದುಕೊಂಡಿದೆ. ಸದ್ಯ ಈ ಮಗುವಿನ ತಂದೆ ಈ ದಾಳಿಯಿಂದ ಪಾರಾಗಿದ್ದಾರೆ. ಇನ್ನು ಈ ಮಗು ಬರೋಬ್ಬರಿ ಏಳು ತಾಸು ಕುಸಿದು ಬಿದ್ದ ಕಟ್ಟಡದ ಅವಶೇಷಡಿ ಒದ್ದಾಡಿಕೊಂಡಿದ್ದಳೆನ್ನಲಾಗಿದೆ. ಸದ್ಯ ಸೂಜಿ ಹಾಗೂ ಆಕೆಯ ತಂದೆಯ ಚಿಕಿತ್ಸೆ ನಡೆಯುತ್ತಿದೆ.

PREV
15
ಇಸ್ರೇಲ್ ದಾಳಿಗೆ ನುಚ್ಚು ನೂರಾದ ಮನೆ: ಬದುಕುಳಿದ 6 ವರ್ಷದ ಮಗು!

ಉಭಯ ದೇಶಗಳ ನಡುವೆ ಮುಂದುವರೆದ ದಾಳಿ: ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಮುಂದುವರೆದಿದೆ. ಇಸ್ರೇಲ್ ವಿಮಾನಗಳು ಗಾಜಾ ಸಿಟಿಯಲ್ಲಿ ಸೋಮವಾರ ಬೆಳಗ್ಗೆ ಮತ್ತೊಮ್ಮೆ ದಾಳಿ ನಡೆಸಿವೆ. ಈ ಏರ್‌ಸ್ಟ್ರೈಕ್‌ನಲ್ಲಿ 42 ಪ್ಯಾಲೆಸ್ತೀನಿಯರು ಪ್ರಾಣ ಕಳೆದುಕೊಂಡಿದ್ದಾರೆನ್ನಲಾಗಿದೆ. 

25

ಜನರ ಮನೆಗಳ ಮೇಲೆ ದಾಳಿ: ಗಾಜಾ ಸಿಟಿಯಲ್ಲಿ ಭಾನುವಾರ ಇಸ್ರೇಲ್‌ನ ಯುದ್ಧ ವಿಮಾನಗಳು ಪ್ಯಾಲೆಸ್ತೀನಿಯರ ಮನೆಗನ್ನೇ ಗುರಿಯಾಗಿಸಿ ದಾಳಿ ನಡೆಸಿವೆ. ಈ ವೇಳೆ ಹಲವಾರು ಕುಟುಂಬಗಳು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.

35

ಆರು ವರ್ಷದ ಮಗುವಿನ ರಕ್ಷಣೆ: ಇಸ್ರೇಲ್‌ ಎಶ್‌ಕುಂಟಾನಾ ಕುಟುಂಬದ ಮನೆ ಮೇಲೂ ದಾಳಿ ನಡೆಸಿದೆ. ಇದರಲ್ಲಿ ಐದು ಮಂದಿಯ ಪ್ರಾಣ ಹೋಗಿದೆ. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಟ್ಟಡದ ಅವಶೇಷದಡಿ ಉಳಿದಿದ್ದ ಆರು ವರ್ಷದ ಬಾಲಕಿಯನ್ನು ಕಾಪಾಡಿದ್ದಾರೆ. ಆದರೆ ಆಕೆ ತನ್ನ ತಾಯಿಯನ್ನು ಕಳೆದುಕೊಂಡಿದ್ದಾಳೆ. ಜೊತೆಗೆ ನಾಲ್ವರು ಸಹೋದರ ಸಹೋದರಿಯರನ್ನೂ ಕಳೆದುಕೊಂಡಿದ್ದಾಳೆ.
 
45

ತಂದೆಯನ್ನು ನೋಡಿ ಸಮಾಧಾನ: ಇನ್ನು ತನ್ನ ಕುಟುಂಬ ಸದಸ್ಯರೆಲ್ಲಾ ಸಾವನ್ನಪ್ಪಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಆಕೆ ಸಂಪೂರ್ಣವಾಗಿ ಕುಸಿದಿದ್ದಾಳೆ. ಆದರೆ ಈ ನಡುವೆ ಆಕೆಯ ತಂದೆ ರಿಯಾದ್ ಎಶ್‌ಕುಂಟಾನಾರನ್ನು ನೋಡಿ ಬಾಲಕಿ ಸಮಾಧಾನ ಪಟ್ಟುಕೊಂಡಿದ್ದಾಳೆ. ತಂದೆ ಕೂಡಾ ಮಗಳು ಸುರಕ್ಷಿತವಾಗಿರುವುದನ್ನು ಕಂಡು ಸಮಾಧಾನಪಟ್ಟುಕೊಂಡಿದ್ದಾರೆ.

55

ಘಟನೆ ವಿವರಿಸಿದ ರಿಯಾದ್: ಇನ್ನು ತನ್ನ ಕುಟುಂಬ ಸುರಕ್ಷಿತವಾಗಿದೆ ಎಂಬ ನಂಬಿಕೆ ನನಗಿತ್ತು ಯಾಕೆಂದರೆ ತಮ್ಮ ಬಿಲ್ಡಿಂಗ್‌ನಲ್ಲಿ ಓರ್ವ ವೈದ್ಯರಿದ್ದರು. ಅವರು ಮಕ್ಕಳನ್ನು ಸುರಕ್ಷಿತ ಕೋಣೆಯಲ್ಲಿಟ್ಟಿದ್ದರು. ಆದರೆ ಏಕಾಏಕಿ ರಾಕೆಟ್‌ ಒಂದು ಬಂದು ಇಡೀ ಕಟ್ಟಡವನ್ನು ನೆಲಸಮ ಮಾಡಿತು ಎಂದು ರಿಯಾದ್ ವಿವರಿಸಿದ್ದಾರೆ. ನನ್ನ ಮಗ ಜೇನ್ ಡ್ಯಾಡಿ ಡ್ಯಾಡಿ ಎಂದು ಕರೆಯುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಿತ್ತು. ಆದರೆ ನನಗೆ ತಿರುಗಿ ನೋಡಲಾಗಲಿಲ್ಲ. ಯಾಕೆಂದರೆ ನಾನು ಅವಶೇಷದಡಿ ಸಿಲುಕಿದ್ದೆ ಎಂದೂ ತಿಳಿಸಿದ್ದಾರೆ.

click me!

Recommended Stories