3 ಧರ್ಮಗಳಿಗೆ ಪವಿತ್ರ ಈ ಜೆರುಸಲೇಂ: ಇಸ್ರೇಲ್, ಪ್ಯಾಲೆಸ್ತೀನ್ ಸಂಘರ್ಷಕ್ಕೂ ಇದೇ ಕಾರಣ!

First Published May 15, 2021, 6:48 PM IST

ಇಸ್ರೇಲ್ ಹಾಗೂ ಪ್ಯಾಲೆಸ್ಥಿನ್ ಮತ್ತೊಂದು ಬಾರಿ ಪರಸ್ಪರ ಎದುರು ಬದುರಾಗಿವೆ. ವೈಮಾನಿಕ ದಾಳಿ ಹಾಗೂ ಗುಂಡಿನ ಚಕಮಕಿ ಬಳಿಕ ಮತ್ತೊಮ್ಮೆ ಎರಡೂ ರಾಷ್ಟ್ರಗಳ ನಡುವೆ ಯುದ್ಧ ನಡೆಯುವ ಸಾಧ್ಯತೆಗಳು ಕಂಡು ಬಂದಿವೆ. ಮೇ 14 ರಂದು 73 ವರ್ಷ ಹಿಂದೆ ವಿಶ್ವದ ಏಕೈಕ ಯಹೂದಿ ರಾಷ್ಟ್ರ ಅಸ್ತಿತ್ವಕ್ಕೆ ಬಂದಿತ್ತು. 2014ರಲ್ಲಿ ಎರಡೂ ರಾಷ್ಟ್ರಗಳ ನಡುವೆ ಯುದ್ಧ ನಡೆದಿದ್ದು, ಇದು ಐವತ್ತು ದಿನಗಳವರೆಗೆ ನಡೆದಿತ್ತು. ಆದರೀಗ ಬರೋಬ್ಬರಿ ಏಳು ವರ್ಷಗಳ ನಡುವೆ ನಡೆದ ದಾಳಿಯಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಈ ವಿವಾದದ ಮೂಲ ಕಾರಣವೇನು? ಯುದ್ಧ ನಡೆಯುವ ಸನ್ನಿವೇಶ ಹುಟ್ಟಿಕೊಂಡಿದ್ದೇಕೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. 

ಸ್ವತಂತ್ರ ರಾಷ್ಟ್ರವೆಂದು ತಾನೇ ಘೋಷಿಸಿಕೊಂಡಿದ್ದ ಇಸ್ರೇಲ್ಮೇ 14 ರಂದು, 73 ವರ್ಷಗಳ ಹಿಂದೆ ಇಸ್ರೇಲ್ ವಿಶ್ವದ ನಕ್ಷೆಯಲ್ಲಿ ರಾಷ್ಟ್ರವಾಗಿ ಗುರುತಿಸಿಕೊಂಡಿತ್ತು. ಇದರ ಹಿಂದೆ ಹಲವಾರು ವರ್ಷಗಳ ಇತಿಹಸಾವಿದೆ. ಒಂದು ಕಾಲದಲ್ಲಿ ಇಸ್ರೇಲ್ ಟರ್ಕಿಯ ಒಟ್ಟೋಮನ್ ಸಾಮ್ರಾಜ್ಯಕ್ಕೊಳಪಡುತ್ತಿತ್ತು. ಆದರೆ ಮೊದಲ ವಿಶ್ವಯುದ್ಧದ ಬಳಿಕ ಇದು ಬ್ರಿಟನ್ ವಶಕ್ಕೆ ಹೋಯ್ತು. ಆದರೆ ಎರಡನೇ ವಿಶ್ವಯುದ್ಧದ ಬಳಿಕ 1945ರಲ್ಲಿ ಬ್ರಿಟನ್ ಇದನ್ನು ವಿಶ್ವಸಂಸ್ಥೆಗೆ ಒಪ್ಪಿಸಿತು. ಆದರೆ 1947ರಲ್ಲಿ ವಿಶ್ವಸಂಸ್ಥೆ ಈ ಪ್ರದೇಶವನ್ನು ಅರಬ್ ರಾಜ್ಯ ಹಾಗೂ ಇಸ್ರೇಲ್ ಹೀಗೆ ಎರಡು ಭಾಗವನ್ನಾಗಿಸಿತು. ಆದರೆ 1948ರ ಮೇ ತಿಂಗಳಲ್ಲಿ ತನ್ನನ್ನು ತಾನು ಸ್ವತಂತ್ರ ರಾಷ್ಟ್ರವೆಂದು ಇಸ್ರೇಲ್ ಘೋಷಿಸಿಕೊಂಡಿತು. ಈ ಮೂಲಕ ವಿಶ್ವದ ಮೊದಲ ಹಾಗೂ ಏಕೈಕ ಯಹೂದಿ ರಾಷ್ಟ್ರ ಅಸ್ತಿತ್ವಕ್ಕೆ ಬಂತು.
undefined
ಉಭಯ ರಾಷ್ಟ್ರಗಳ ನಡುವೆ ಕಲಹವೇಕೆ?1967ರಲ್ಲಿ ಇಸ್ರೇಲ್, ಸಿರಿಯಾ, ಜಾರ್ಡನ್ ಹಾಗೂ ಪ್ಯಾಲೆಸ್ತೀನ್‌ಗಳ ನಡುವೆ ಯುದ್ಧ ನಡೆಯಿತು. ಈ ವೇಳೆ ಇಸ್ರೇಲ್ ಪೂರ್ವ ಜೆರುಸಲೇಂ ಹಾಗೂ ವೆಸ್ಟ್‌ ಬ್ಯಾಂಕ್‌ನ್ನು ವಶಕ್ಕೆ ಪಡೆಯಿತು. ಅದಕ್ಕೂ ಮುನ್ನ ಇವೆರಡೂ ಜಾರ್ಡನ್‌ ವಶದಲ್ಲಿತ್ತು. ಅಂದಿನಿಂದಲೇ ಈ ಪ್ರದೇಶಗಳಲ್ಲಿ ಇಸ್ರೇಲ್ ಹಾಗೂ ಪ್ಯಾಲೆಸ್ತೀನಿಯರ ನಡುವೆ ಹಿಂಸಾತ್ಮಕ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇಡೀ ಜೆರುಸಲೇಂ ತನ್ನ ರಾಜಧಾನಿ ಎಂಬುವುದು ಇಸ್ರೇಲ್ ವಾದವಾದರೆ, ಅತ್ತ ಪ್ಯಾಲೆಸ್ತೀನ್ ಇದನ್ನು ತನ್ನ ಭವಿಷ್ಯದ ರಾಜಧಾನಿ ಎಂದು ವಾದಿಸುತ್ತದೆ.
undefined
ಜೆರುಸಲೇಂ ವಿಚಾರವಾಗಿ ಜಗಳವೇಕೆ?ಜೆರುಸಲೇಂ ಇದು ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಯಹೂದಿ ಈ ಮೂರೂ ಧರ್ಮದವರಿಗೆ ಬಹಳ ಪ್ರಮುಖವಾದ ಸ್ಥಳವಾಗಿದೆ. ಈ ಮೂರೂ ಧರ್ಮಗಳ ಆರಂಭ ಬೈಬಲ್‌ನಲ್ಲಿ ಉಲ್ಲೇಖವಾಗುವ ಪ್ರವಾದಿಯಿಂದ ಒಂದಾಗುತ್ತವೆ. ಕ್ರಿಶ್ಚಿಯನ್ ಧರ್ಮದ ಅನ್ವಯ ಇಲ್ಲಿನ ಕಲ್ವಾರಿ ಬೆಟ್ಟದಲ್ಲಿ ಯೇಸು ಕ್ರಿಸ್ತನನ್ನು ಶಿಲುಭೆಗೇರಿಸಲಾಗಿತ್ತು. ಯೇಸುವಿನ ಸಮಾಧಿ ಇಲ್ಲಿನ ಚರ್ಚ್ ಆಫ್ ದಿ ಹೋಲಿ ಸೆಪಲ್ಕರ್ ಒಳಗಿದೆ ಎನ್ನಲಾಗಿದೆ.
undefined
ಮುಸಲ್ಮಾನರಿಗೇಕೆ ಇದು ಮಹತ್ವದ್ದು?ಡೋಮ್‌ ಆಫ್ ರಾಕ್ ಹಾಗೂ ಅಲ್‌-ಅಕ್ಸಾ ಮಸೀದಿ ಇಲ್ಲಿದೆ ಎಂಬ ಕಾರಣಕ್ಕೆ ಮುಸಲ್ಮಾನರಿಗೆ ಇದು ಮಹತ್ವದ್ದು. ಈ ಮಸೀದಿಯನ್ನು ಮುಸಲ್ಮಾನರ ಮೂರನೇ ಅತ್ಯಂತ ಪವಿತ್ರ ಸ್ಥಳ ಎನ್ನಲಾಗಿದೆ. ಮೊಹಮ್ಮದ್ ಪೈಗಂಬರ್ ತನ್ನ ಯಾತ್ರೆಗೂ ಮುನ್ನ ಮೆಕ್ಕಾದಿಂದ ಇಲ್ಲಿವರೆಗೆ ತನ್ನ ಪ್ರಯಾಣ ನಿಗದಿಪಡಿಸಿದ್ದರು. ಈ ಮಸೀದಿ ಬಳಿಯೇ ಡೋಮ್ ಆಫ್ ರಾಕ್‌ ಇದೆ. ಇಲ್ಲಿಂದಲೇ ಮೊಹಮ್ಮದ್ ಪೈಗಂಬರ್‌ ಸ್ವರ್ಗಕ್ಕೆ ಹೋಗಿದ್ದರೆಂಬುವುದು ಮುಸಲ್ಮಾನರ ನಂಬಿಕೆ.
undefined
ಯಹೂದಿಗಳ ನಂಬಿಕೆ ಏನು?ಯಹೂದಿಗಳು ಜೆರುಸಲೇಂ ತಮ್ಮದೆನ್ನುತ್ತಾರೆ. ಇಲ್ಲೇ ಅಬ್ರಾಹಮ್ ತನ್ನ ಮಗ ಐಸಾಕ್‌ನ್ನು ಬಲಿ ಅರ್ಪಿಸಲು ಮುಂದಾಗಿದ್ದೆಂಬ ನಂಬಿಕೆ ಅವರದ್ದು. ಇಲ್ಲಿ ಯಹೂದಿಗಳ ಕೋಟೆಲ್ ಎನ್ನಲಾಗುವ ವೆಸ್ಟರ್ನ್‌ ವಾಲ್ ಇದೆ. ಈ ಗೋಡೆ ಪವಿತ್ರ ಮಂದಿರದ ಅವಶೇಷವಾಗಿದೆ. ಈ ಮೂಲಕ ಜೆರುಸಲೇಂ, ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಯಹೂದಿಗಳ ಪಾಲಿಗೆ ಬಹಳ ಮುಖ್ಯವಾಗಿದೆ.
undefined
ಸ್ವಾತಂತ್ರ್ಯದ 24 ಗಂಟೆ ಬಳಿಕ ದಾಳಿಇಸ್ರೇಲ್ ತನ್ನ ಸ್ವಾತಂತ್ರ್ಯ ಘೋಷಿಸಿದ ಕೇವಲ ಇಪ್ಪತ್ನಾಲ್ಕು ಗಂಟೆ ಬಳಿಕ ಅರಬ್ ರಾಷ್ಟ್ರಗಳು ಇಲ್ಲಿ ದಾಳಿ ನಡೆಸಿದ್ದವು. ಈ ಹೋರಾಟ ಸುಮಾರು ಒಂದು ವರ್ಷ ಮುಂದುವರೆದಿತ್ತು. ಇದರಲ್ಲಿ ಇಸ್ರೇಲ್ ಗೆದ್ದು, ಅರಬ್ ರಾಷ್ಟ್ರಗಳು ಸೋತಿದ್ದವು. ಈ ಯುದ್ಧ ಕೊನೆಯಾಗುತ್ತಿದ್ದಂತೆಯೇ ಇಸ್ರೇಲ್‌ನ 120 ಸಂಸದೀಯ ಸದಸ್ಯರ ಆಯ್ಕೆಗೆ 1949 ರ ಜನವರಿ 25ರಂದು ಮೊದಲ ಚುನಾವಣೆ ನಡೆಯಿತು.
undefined
ಮೊದಲ ಪಿಎಂ ಆದ ಗುರಿಯನ್ಡೇವಿಡ್‌ ಬೆನ್ ಗುರಿಯನ್ ಇಸ್ರೇಲ್‌ನ ಮೊದಲ ಪ್ರಧಾನಿಯಾದರು. ಅಂದು ವಿಶ್ವದ ಒಟ್ಟು ಯಹೂದಿಗಳ ಜನಸಂಖ್ಯೆ ಶೇ. 40ಕ್ಕಿಂತ ಅಧಿಕ ಮಂದಿ ಇಸ್ರೇಲ್‌ನಲ್ಲಿದ್ದರು. ಇಸ್ರೇಲ್‌ ವಿಶ್ವದ ಏಕೈಕ ಯಹೂದಿ ರಾಷ್ಟ್ರವಾಗಿದೆ.
undefined
ಇಸ್ರೇಲ್‌ನ ರಚನೆಗೆ ಅಡಿಪಾಯ ಹಾಕಿದ್ದ ಥಿಯೋಡರ್ ಹರ್ಜ್ಲ್ಥಿಯೋಡರ್ ಹರ್ಜ್ಲ್ ಹೆಸರಿನ ವಿಯೆನ್ನಾದ ಯಹೂದಿಯೊಬ್ಬರು ಇಸ್ರೇಲ್‌ ರಚನೆಗೆ ಸೈದ್ಧಾಂತಿಕವಾಗಿ ಅಡಿಪಾಯ ಹಾಕಿದ್ದರು. 1860ರಲ್ಲಿ ಜನಿಸಿದ ಥಿಯೋಡರ್ ಹರ್ಜ್ಲ್ ವಿಯೆನ್ನಾದಲ್ಲಿ ಓರ್ವ ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದರು.
undefined
click me!