ಕುಸಿದುಬಿದ್ದ ಮೆಟ್ರೋ ಸೇತುವೆ,  23ಜನರ ದುರ್ಮರಣ, ಘೋರ ದೃಶ್ಯ

First Published May 4, 2021, 11:22 PM IST

ಮೆಕ್ಸಿಕೋ (ಮೇ 04)   ಕೊರೋನಾ ನಡುವೆ ದೂರದ ಮೆಕ್ಸಿಕೋದಲ್ಲಿ ದೊಡ್ಡ ದುರಂತವೊಂದು ನಡೆದು ಹೋಗಿದೆ.  ಮೆಕ್ಸಿಕೊ ನಗರದ ಮೆಟ್ರೋದ ಓವರ್‌ಪಾಸ್ ಕುಸಿದು, ರಸ್ತೆಯ ನೆಲಕ್ಕೆ ಉರುಳಿದೆ.

ಚಲಿಸುತ್ತಿದ್ದ ರೈಲು ಸಹ ರಸ್ತೆಗೆ ಬಿದ್ದು ಕನಿಷ್ಠ 23 ಜನ ಸಾವನ್ನಪ್ಪಿದ್ದಾರೆ ಎನ್ನುವುದು ಆರಂಭಿಕ ಮಾಹಿತಿ.
undefined
ರಸ್ತೆಯ ಮೇಲೆ ಸಂಚರಿಸುತ್ತಿದ್ದ ಕಾರೊಂದು ನುಜ್ಜುಗುಜ್ಜಾಗಿದೆ. 70 ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ನಡೆಯುತ್ತಿದೆ.
undefined
ಮೆಟ್ರೋದ 12 ನೇ ಲೇನ್ ನಲ್ಲಿ ಅಪಘಾತ ಸಂಭವಿಸಿದ್ದು, ಇದರ ನಿರ್ಮಾಣ ಸಂಬಂಧ ದೂರುಗಳು ಮತ್ತು ಅಕ್ರಮಗಳ ಆರೋಪ ಕೇಳಿಬಂದಿತ್ತು.
undefined
ಇದೊಂದು ಭಯಾನಕ ದುರಂತ ಎಂದು ಮೆಕ್ಸಿಕನ್ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾರ್ಡ್ ಟ್ವೀಟ್ ಮಾಡಿದ್ದಾರೆ.
undefined
ಪ್ರಕರಣವನ್ನು ತನಿಖೆಗೆ ವಹಿಸಲಾಗುತ್ತದೆ ಎಂದು ಮೇಯರ್ ಕ್ಲೌಡಿಯಾ ಶೀನ್ಬೌಮ್ ತಿಳಿಸಿದ್ದಾರೆ.
undefined
ಒಲಿವೋಸ್ ಮತ್ತು ಟೆಂಜೋಕೋ ನಡುವೆ ಮೆಟ್ರೋ ಟ್ರೇನ್ ಸಂಚಾರ ಮಾಡುತ್ತಿತ್ತು.
undefined
ಈ ವೇಳೆ ಲೇನ್ ಕುಸಿದಿದೆ. ಟ್ರೇನ್ ಸಹ ಕೆಳಕ್ಕೆ ಮಗುಚಿದೆ. ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
undefined
click me!