ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರವು 'ಸ್ವಚ್ಛ ಪಂಜಾಬ್' ಯೋಜನೆಯಡಿ ಎಮ್ಮೆ ಸಾಕಿದವರಿಂದ 'ಸೆಗಣಿ ಕರ' ವಸೂಲಿ ಮಾಡಲು ಮುಂದಾಗಿದೆ. ತ್ಯಾಜ್ಯ ನಿರ್ವಹಣೆ ಮತ್ತು ಜೈವಿಕ ಅನಿಲ ಉತ್ಪಾದನೆಗೆ ಹಣ ಸಂಗ್ರಹಿಸುವ ಈ ಯೋಜನೆಗೆ, ಈಗಾಗಲೇ ಸಂಕಷ್ಟದಲ್ಲಿರುವ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಇಸ್ಲಾಮಾಬಾದ್: ಇಷ್ಟು ಕಾಲ ಹಣಕ್ಕಾಗಿ ವಿದೇಶಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಬಾಗಿಲು ಬಡಿಯುತ್ತಿದ್ದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರವೀಗ ಇದೀಗ ತನ್ನ ಜನರ ಜೇಬಿಂದ ಹಣ ಕಸಿದು ಬೊಕ್ಕಸ ತುಂಬಿಸಿಕೊಳ್ಳಲು ಮುಂದಾಗಿದೆ. ಇದರ ಭಾಗವಾಗಿ, ಎಮ್ಮೆಗಳನ್ನು ಸಾಕಿದವರಿಂದ ‘ಸೆಗಣಿ ವಸೂಲಿ’ ಮಾಡುವುದಾಗಿ ಘೋಷಿಸಿದೆ.
24
ದಿನಕ್ಕೆ 30 ರು. ವಸೂಲಿ
‘ಸ್ವಚ್ಛ ಪಂಜಾಬ್’ ಯೋಜನೆಯ ಅಡಿಯಲ್ಲಿ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ ಮತ್ತು ಜೈವಿಕ ಅನಿಲ ಉತ್ಪಾದನೆಗೆ ಹಣ ಒದಗಿಸುವ ಸಲುವಾಗಿ ಪ್ರತಿ ಎಮ್ಮೆಗೆ ದಿನಕ್ಕೆ 30 ರು. ವಸೂಲಿ ಮಾಡುವ ಚಿಂತನೆಯಲ್ಲಿ ಅಧಿಕಾರಿಗಳಿದ್ದಾರೆ. ಇದರ ಭಾಗವಾಗಿ ಈಗಾಲೇ 168 ಜಾನುವಾರು ಸಾಕಾಣಿಕೆ ಪ್ರದೇಶಗಳನ್ನು ಮರಿಯಂ ನವಾಜ್‌ರ ಸರ್ಕಾರ ಗುರುತಿಸಿದೆ ಎನ್ನಲಾಗಿದೆ.
34
ಭಾರೀ ಟೀಕೆ
ನಗರದ ಸ್ವಚ್ಛತೆ ಮತ್ತು ಜೈವಿಕ ಅನಿಲ ಬಳಕೆ ಉತ್ತೇಹಿಸುವ ಉದ್ದೇಶ ಇದೆ ಎಂದು ಸರ್ಕಾರ ಹೇಳುತ್ತಿದ್ದರೂ, ಈ ಪ್ರಸ್ತಾವಿತ ಕ್ರಮಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಅತ್ತ ಬೆಳೆ ನಷ್ಟ, ದುಬಾರಿ ಮೇವಿನಂತಹ ಸಮಸ್ಯೆಗಳಿಂದ ಬಳಲುತ್ತಿರುವ ರೈತರಿಗೆ ಈ ಹೊಸ ತೆರಿಗೆಯಿಂದ ಭಾರೀ ಹೊರೆಯಾಗಲಿದೆ.
‘ಸರ್ಕಾರಕ್ಕೆ ಆದಾಯ ತರುತ್ತಿದ್ದ ಮೂಲಗಳು ಬರಿದಾಗಿರುವ ಕಾರಣ ಆಡಳಿತ ನಡೆಸಲು ತಗುಲುವ ವೆಚ್ಚವನ್ನು ಈ ರೀತಿ ವಸೂಲಿ ಮಾಡಲಾಗುತ್ತಿದೆ. ದೇಶವು ಸೆಗಣಿಯಿಂದಲೂ ಹಣ ಗಳಿಸುವ ಬಗ್ಗೆ ಯೋಚಿಸುವ ಸ್ಥಿತಿಗೆ ಬಂದು ತಲುಪಿದೆ’ ಎಂಬ ಆಕ್ರೋಶವೂ ಕೇಳಿಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ