ಅಪರೂಪಕ್ಕೆ ಕಾಣಿಸಿಕೊಂಡ ಡೊನಾಲ್ಡ್ ಟ್ರಂಪ್ 18 ವರ್ಷದ ಮಗನ ಹೈಟ್ ನೋಡಿ ಬೆರಗಾದ ಜನ

Published : Apr 03, 2024, 01:31 PM ISTUpdated : Apr 03, 2024, 01:32 PM IST

ವೈಟ್‌ಹೌಸ್‌ನಲ್ಲಿದ್ದರೂ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದ ಟ್ರಂಪ್ ಕಿರಿಯ ಪುತ್ರ ಬ್ಯಾರನ್ ಟ್ರಂಪ್ 18ಕ್ಕೆಲ್ಲಾ ಸುಮಾರು 6 ಅಡಿ 7 ಇಂಚು ಎತ್ತರ ಬೆಳೆದಿದ್ದಾನೆ. ಅಪರೂಪಕ್ಕೆ ಕಾಣಿಸಿಕೊಂಡ ಈತ ಇಷ್ಟು ಸಣ್ಣ ವಯಸ್ಸಿಗೆ ಇಷ್ಟು ಎತ್ತರಕ್ಕೆ ಬೆಳೆದಿರುವುದನ್ನು ನೋಡಿ ಅಮೆರಿಕಾದ ಜನರೇ ಅಚ್ಚರಿ ಪಟ್ಟಿದ್ದಾರೆ.

PREV
19
ಅಪರೂಪಕ್ಕೆ ಕಾಣಿಸಿಕೊಂಡ ಡೊನಾಲ್ಡ್ ಟ್ರಂಪ್ 18 ವರ್ಷದ ಮಗನ ಹೈಟ್ ನೋಡಿ ಬೆರಗಾದ ಜನ

ಅಮೆರಿಕಾದ ಮಾಜಿ ಅಧ್ಯಕ್ಷ ರಿಪಬ್ಲಿಕ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾ ದಂಪತಿಯ ಪುತ್ರನಿಗೆ ಮೊನ್ನೆ ಮೊನ್ನೆಯಷ್ಟೇ 17 ತುಂಬಿ 18ನೇ ವರ್ಷಕ್ಕೆ ಕಾಲಿರಿಸಿದ್ದಾನೆ.

29

ವೈಟ್‌ಹೌಸ್‌ನಲ್ಲಿದ್ದರೂ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದ ಟ್ರಂಪ್ ಕಿರಿಯ ಪುತ್ರ ಬ್ಯಾರನ್ ಟ್ರಂಪ್ 18ಕ್ಕೆಲ್ಲಾ ಸುಮಾರು 6 ಅಡಿ 7 ಇಂಚು ಎತ್ತರ ಬೆಳೆದಿದ್ದಾನೆ. 

39

ಅಪರೂಪಕ್ಕೆ ಕಾಣಿಸಿಕೊಂಡ ಈತ ಇಷ್ಟು ಸಣ್ಣ ವಯಸ್ಸಿಗೆ ಇಷ್ಟು ಎತ್ತರಕ್ಕೆ ಬೆಳೆದಿರುವುದನ್ನು ನೋಡಿ ಅಮೆರಿಕಾದ ಜನರೇ ಅಚ್ಚರಿ ಪಟ್ಟಿದ್ದು, ಆತನ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. 

49

ಕಳೆದ ಭಾನುವಾರ ಈಸ್ಟರ್ ಆಚರಣೆಯ ಪ್ರಯುಕ್ತ ಬ್ಯಾರನ್ ಟ್ರಂಪ್ ತನ್ನ ಕುಟುಂಬ ಸದಸ್ಯರ ಜೊತೆ ಕಾಣಿಸಿಕೊಂಡಿದ್ದ. ತನ್ನ ತಂದೆ ಡೊನಾಲ್ಡ್ ಟ್ರಂಪ್ ಮಾಲೀಕತ್ವದ ಮಾರ್-ಅ-ಲಾಗೋ ಎಸ್ಟೇಟ್‌ನಲ್ಲಿ ತನ್ನ ಅಮ್ಮ ಮೆಲಾನಿಯಾ ಜೊತೆ ಕಾಣಿಸಿಕೊಂಡಿದ್ದ,

59

ಮೆಲಾನಿಯಾ ಕೂಡ ಸುಮಾರು 5 ಅಡಿ 11 ಇಂಚು ಎತ್ತರವಿದ್ದು, ಪುತ್ರ ಮಾತ್ರ 18ರ ಹರೆಯಕ್ಕೆ 6 ಅಡಿ 7 ಇಂಚು ಎತ್ತರ ಬೆಳೆದು ಅಮ್ಮನನ್ನು ಮೀರಿಸಿದ್ದಾನೆ. 

69

ಡೊನಾಲ್ಡ್ ಟ್ರಂಪ್ ಅವರು ಮತ್ತೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದಿಂದ ಸ್ಪರ್ಧಿಸಲು ಕಾರ್ಯತಂತ್ರ ರೂಪಿಸುತ್ತಿದ್ದು, ಹಲವು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಈಗಾಗಲೇ ಭಾಗಿಯಾಗಿದ್ದಾರೆ. 

79

ಆದರೆ ಟ್ರಂಪ್ 5ನೇ ಪುತ್ರ ಹಾಗೂ ಮೆಲಾನಿಯಾ ಮೊದಲ ಪುತ್ರ ಬ್ಯಾರನ್ ಟ್ರಂಪ್ ಆಗಲಿ ಅಥವಾ ಮೆಲಾನಿಯಾ ಆಗಲಿ ಈ ಪ್ರಚಾರದಿಂದ ದೂರವೇ ಉಳಿದಿದ್ದಾರೆ. 

89

ಜನವರಿಯಲ್ಲಿ ಮೆಲಾನಿಯಾ ತಾಯಿಯ ಅಮಲಿಜಾ ಕ್ನಾವಸ್ ಅವರ ಅಂತ್ಯಸಂಸ್ಕಾರದ ವೇಳೆ ಟ್ರಂಪ್ ಕುಟುಂಬವೂ ಕೊನೆಯ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದರು.

99

ಮೆಲಾನಿಯಾ ಗರ್ಭಿಣಿಯಾಗಿರುವುದು ತಿಳಿದ ನಂತರ 2005ರಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾ ಮದ್ವೆಯಾಗಿದ್ದರು. ಇದಾಗಿ 2006ರ ಮಾರ್ಚ್‌ 20ರಲ್ಲಿ ಡೊನಾಲ್ಡ್‌ ಟ್ರಂಪ್ 5ನೇ ಮಗನಾಗಿ ಮೆಲಾನಿಯಾ ಮೊದಲ ಮಗನಾಗಿ ಬ್ಯಾರನ್ ಟ್ರಂಪ್ ಜನಿಸಿದ್ದ. ಈತನಲ್ಲದೇ ಟ್ರಂಪ್‌ಗೆ ಇವಾಂಕಾ, ಡೊನಾಲ್ಡ್ ಟ್ರಂಪ್ ಜೂನಿಯರ್, ಇರಿಕ್, ಟಿಪ್ಪಾನಿ ಎಂಬ ಮಕ್ಕಳಿದ್ದಾರೆ. 

Read more Photos on
click me!

Recommended Stories