ಈ ಬಾರ್ಬಿ ಬೊಂಬೆ ಸೌದಿ ಅರೇಬಿಯಾದ ಪ್ರಪ್ರಥಮ ಮಿಸ್ ಯೂನಿವರ್ಸ್ ಸ್ಪರ್ಧಿ!

First Published | Mar 28, 2024, 5:55 PM IST

ಸೌದಿ ಅರೇಬಿಯಾ ತನ್ನ ಮೊದಲ ಸ್ಪರ್ಧಿಯಾಗಿ ರೂಮಿ ಅಲ್ಕಹ್ತಾನಿಯೊಂದಿಗೆ ಮಿಸ್ ಯೂನಿವರ್ಸ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದೆ. ಈ ಬಾರ್ಬಿ ಬೊಂಬೆಯ ಬಗ್ಗೆ ನೀವು ತಿಳಿಯಬೇಕಾದುದೆಲ್ಲವೂ ಇಲ್ಲಿದೆ..

ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾ ತನ್ನ ಐತಿಹಾಸಿಕ ಚೊಚ್ಚಲ ಪ್ರವೇಶಕ್ಕೆ ಸಜ್ಜಾಗುತ್ತಿದೆ, ಪ್ರತಿಷ್ಠಿತ ಸ್ಪರ್ಧೆಯಲ್ಲಿ ರೂಮಿ ಅಲ್ಕಹ್ತಾನಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ರೂಮಿ ಅಲ್ಕಹ್ತಾನಿ ಅವರು ಸೌದಿ ಅರೇಬಿಯಾದ ರಿಯಾದ್‌ನ ಪ್ರಮುಖ ಮಾಡೆಲ್ ಮತ್ತು ಇನ್ಫ್ಲುಯೆನ್ಸರ್ ಆಗಿದ್ದು ನೋಡಲು ಥೇಟ್ ಗೊಂಬೆಯಂತಿದ್ದಾರೆ.

Tap to resize

ಅವರು ಸೌದಿ ಅರೇಬಿಯಾವನ್ನು ಪ್ರತಿನಿಧಿಸುವ ಮೊದಲ ವಿಶ್ವ ಸುಂದರಿ ಸ್ಪರ್ಧಿಯಾಗಿ ಭಾಗವಹಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ.
 

ವರದಿಗಳ ಪ್ರಕಾರ, ಮಲೇಷ್ಯಾದಲ್ಲಿ ನಡೆದ ಮಿಸ್ ಮತ್ತು ಮಿಸೆಸ್ ಗ್ಲೋಬಲ್ ಏಷ್ಯನ್ ಸ್ಪರ್ಧೆ ಸೇರಿದಂತೆ ಹಲವಾರು ಜಾಗತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ರೂಮಿ ಅಲ್ಕಹ್ತಾನಿ ಸೌಂದರ್ಯ ಸ್ಪರ್ಧೆಯ ಉದ್ಯಮದಲ್ಲಿ ಮನ್ನಣೆ ಗಳಿಸಿದ್ದಾರೆ.

ಎಮಿರೇಟ್ಸ್ ವುಮನ್ ಪ್ರಕಾರ, 27 ವರ್ಷದ ಮಾಡೆಲ್ ಈಗಾಗಲೇ ಮಿಸ್ ಸೌದಿ ಅರೇಬಿಯಾ, ಮಿಸ್ ಮಿಡಲ್ ಈಸ್ಟ್, ಮಿಸ್ ಅರಬ್ ವರ್ಲ್ಡ್ ಪೀಸ್ ಮತ್ತು ಮಿಸ್ ವುಮನ್ (ಸೌದಿ ಅರೇಬಿಯಾ) ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ರೂಮಿ ಅಲ್ಕಹ್ತಾನಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಸೌದಿ ಅರೇಬಿಯಾ ಭಾಗವಹಿಸುವಿಕೆಯನ್ನು ಘೋಷಿಸಿದರು.

ಮುಂಬರುವ ಸೆಪ್ಟೆಂಬರ್ 18ರಂದು ಮೆಕ್ಸಿಕೋದಲ್ಲಿ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಯು ಸೌದಿ ಅರೇಬಿಯಾದ ಐತಿಹಾಸಿಕ ಪ್ರವೇಶದೊಂದಿಗೆ ಇರಾನ್‌ನ ಚೊಚ್ಚಲ ಪ್ರವೇಶಕ್ಕೆ ಕೂಡಾ ಸಾಕ್ಷಿಯಾಗಲಿದೆ.

ವಿಶ್ವ ಸಂಸ್ಕೃತಿಗಳ ಬಗ್ಗೆ ಕಲಿಯುವುದು ಮತ್ತು ನಮ್ಮ ಅಧಿಕೃತ ಸೌದಿ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ವರ್ಗಾಯಿಸುವುದು ನನ್ನ ಕೊಡುಗೆಗಳು ಎಂದು ರೂಮಿ ಅಲ್ಕಹ್ತಾನಿ ಹೇಳಿದ್ದಾರೆ.

ಅಲ್ಕಹ್ತಾನಿಯು ಇನ್ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್‌ಗಳನ್ನೂ, ಎಕ್ಸ್ ಖಾತೆಯಲ್ಲಿ 2000 ಬೆಂಬಲಿಗರನ್ನೂ ಹೊಂದಿದ್ದಾರೆ.

ಸೌದಿಯ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರು ದೇಶದ ದೀರ್ಘಾವಧಿಯ ಅಲ್ಟ್ರಾ-ಕನ್ಸರ್ವೇಟಿವ್ ಇಮೇಜ್ ಅನ್ನು ಬದಲಾಯಿಸಲು ಇತ್ತೀಚೆಗೆ ಕೆಲ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅದರಲ್ಲಿ ಮಿಸ್ ಯೂನಿವರ್ಸ್‌ನಲ್ಲಿ ಭಾಗವಹಿಸುವ ನಿರ್ಧಾರವೂ ಒಂದಾಗಿದೆ.

Latest Videos

click me!