ನಿರ್ಮಾಣ ಹಂತದಲ್ಲೇ ಫ್ಲ್ಯಾಟ್ ಖರೀದಿಸುತ್ತೀರಾ ಎಚ್ಚರ, 34ನೇ ಮಹಡಿಯಲ್ಲಿ ಮನೆ ಖರೀದಿಸಿ ಕಂಗಾಲದ ವ್ಯಕ್ತಿ

Published : Jun 08, 2026, 07:08 PM IST

ರಿಯಲ್ ಎಸ್ಟೇಟ್ ದಂಧೆಯಲ್ಲಿ ಸಿಲುಕಿದ ವ್ಯಕ್ತಿಯೊಬ್ಬರು ಇದೀಗ ಹಣವೂ ಇಲ್ಲ ,ಮನೆಯೂ ಇಲ್ಲದಂತ ಪರಿಸ್ಥಿತಿ ಎದುರಾಗಿದೆ. 34ನೇ ಮಹಡಿಯಲ್ಲಿ ಮನೆ ಖರೀದಿಸಿದ ವ್ಯಕ್ತಿಗೆ ವರ್ಷದ ಬಳಿಕ ಆಘಾತ ಎದುರಾಗಿದೆ. ಏನಿದು ಪ್ರಕರಣ?

PREV
16
ಫ್ಲ್ಯಾಟ್ ಖರೀದಿಸಿ ಮೋಸ ಹೋದ ವ್ಯಕ್ತಿ

ನಗರಗಳಲ್ಲಿ ವಾಸಿಸುವ ಜನ ದುಡಿದು, ಉಳಿಸಿ, ಸಾಲ ಮಾಡಿ ಮನೆ ಖರೀದಿಸುತ್ತಾರೆ. ಅಪಾರ್ಟ್‌ಮೆಂಟ್ ಬಿಟ್ಟರೆ ಬೇರೆ ಆಯ್ಕೆ ಇರಲ್ಲ. ಅದರಲ್ಲೂ ನಿರ್ಮಾಣ ಹಂತದಲ್ಲಿ ಹಲವರು ಹೂಡಿಕೆ ಮಾಡಿ ಸಾಲದ ಹೊರೆ, ಆರ್ಥಿಕ ಹೊರೆ ಕಡಿಮೆ ಮಾಡಲು ಮುಂದಾಗುತ್ತಾರೆ. ಹೀಗೆ ನಿರ್ಮಾಣ ಹಂತದಲ್ಲಿ ವ್ಯಕ್ತಿಯೊಬ್ಬರ 34ನೇ ಮಹಡಿಯಲ್ಲಿ ಫ್ಲ್ಯಾಟ್ ಖರೀದಿಸಿ ಮೋಸ ಹೋದ ಘಟನೆ ನಡೆದಿದೆ.

26
34ನೇ ಮಹಡಿಯಲ್ಲಿ ಮನೆ, ಆದರೆ 32ಕ್ಕೆ ಕ್ಲೋಸ್

ಈ ಘಟನೆ ನಡೆದಿರುವುದು ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ. ಕ್ಸಿಆ್ಯನ್ ಪ್ರದೇಶದ ಶೆನ್ ಅನ್ನೋ ವ್ಯಕ್ತಿ ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಹಣ ಹೂಡಿಕೆ ಮಾಡಿ 34ನೇ ಮಹಡಿಯಲ್ಲಿ ಮನೆ ಖರೀದಿಸಿದ್ದಾರೆ. ಹಣ ಪಾವತಿಯಾಗಿದೆ. ರಿಜಿಸ್ಟ್ರೇಶನ್ ಪ್ರಕ್ರಿಯೆಗಳು ನಡೆದಿದೆ. ಸರಿಯಾಗಿ ಒಂದು ವರ್ಷದ ಬಳಿಕ ಅಪಾರ್ಟ್‌ಮೆಂಟ್ ಉದ್ಘಾಟನೆಗೊಂಡಿದೆ. ಖುಷಿ ಖುಷಿಯಲ್ಲಿ ಹೋದ ಶೆನ್‌ಗೆ ಆಘಾತ ಕಾದಿತ್ತು. ಇಡಿ ಕಟ್ಟಡದಲ್ಲಿರುವುದು 32 ಮಹಡಿ.

36
ರಿಯಲ್ ಎಸ್ಟೇಟ್ ದಂಧೆಗೆ ಕಂಗಾಲು

ಪ್ರತಿ ಚದರ ಅಡಿಗೆ 400 ಅಮೆರಿಕನ್ ಡಾಲರ್ ನೀಡಿ ಮನೆ ಖರೀದಿಸಲಾಗಿತ್ತು. ಒಟ್ಟು 17,400 ಅಮೆರಿಕನ್ ಡಾಲರ್ ಮೊತ್ತಕ್ಕೆ ಮನೆ ಖರೀದಿ ಮಾಡಲಾಗಿತ್ತು. ಹಣ ಪಾವತಿ ಮಾಡಿ ರಿಜಿಸ್ಟ್ರೇಶನ್ ಕೂಡ ಮಾಡಲಾಗಿತ್ತು. ಆದರೆ ಕಟ್ಟಡ ಇರೋದೇ 32 ಮಹಡಿ. ಶೆನ್ ಹಣವೂ ಹೋಯಿತು, ಮನೆಯೂ ಇಲ್ಲದಾಗಿದೆ. ದೂರು ದಾಖಲಿಸಿದ ಶೆನ್‌ಗೆ ಮತ್ತೊಂದು ಆಘಾತ ಎದುರಾಗಿದೆ.

46
ಅಪಾರ್ಟ್‌ಮೆಂಟ್‌ಗೆ ಅನುಮತಿಯೇ ಇಲ್ಲ

ಕಂಗಾಲಾದ ಶೆನ್ ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದಾಗ ಪೊಲೀಸರಿಗೂ ಅಚ್ಚರಿಯಾಗಿದೆ. ಕಾರಣ ಇಡೀ ಅಪಾರ್ಟ್‌ಮೆಂಟ್‌ಗೆ ಅನುಮತಿಯೇ ಇಲ್ಲ. ಆದರೂ 32 ಮಹಡಿ ಕಟ್ಟಡ ಕಟ್ಟಲಾಗಿತ್ತು. ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಮಾಲೀಕರು ಹಂತ ಹಂತವಾಗಿ ಹಣ ಹಿಂದಿರುವುಗಿಸುವುದಾಗಿ ಒಪ್ಪಿಕೊಂಡಿದ್ದರು.

56
ಬಡ್ಡಿ ಸಮೇತ ಮರುಪಾವತಿ

ಸಣ್ಣ ಮೊತ್ತ ವರ್ಗಾವಣೆ ಮಾಡಿ ಮತ್ತೆ ಸುಮ್ಮನಾಗಿದ್ದರು. ಹೀಗಾಗಿ ಆಕ್ರೋಶಗೊಂಡ ಶೆನ್ ಮತ್ತೆ ಕೋರ್ಟ್ ಕದ ತಟ್ಟಿದ್ದಾರೆ. ಈ ವೇಳೆ ಅಸಲು ಬಡ್ಡಿ ಸಮೇತೆ ಹಿಂದಿರುಗಿಸಲು ಆದೇಶ ನೀಡಿದ್ದಾರೆ. ಇದರಂತೆ ಮಾಲೀಕರು ಇದೀಗ ಬಾಕಿ ಮೊತ್ತ, ಬಡ್ಡಿ ಸೇರಿಸಿ ಮರುಪಾವತಿಸಿದ್ದಾರೆ.

66
ನನಸಾಗಲಿಲ್ಲ ಶೆನ್ ಮನೆ

ತಾನು ಹೂಡಿಕೆ ಮಾಡಿದ ಹಣ ಮರಳಿ ಬಂದಿದೆ. ಆದರೆ ಇದರ ನಡುವೆ ಇರುವ ಸಮಯ ಕೋರ್ಟ್, ಪೊಲೀಸ್, ಕೇಸ್ ಎಂದೇ ಹೋಗಿದೆ. ಇದೀಗ ಮತ್ತೊಂದು ಮನೆ ಖರೀದಿ ಭಾರಿ ದುಬಾರಿಯಾಗಿದೆ. ಇಷ್ಟೇ ಅಲ್ಲ ಒಮ್ಮೆ ಖರೀದಿಸಿದ ಮನೆ ಅನುಭವದಿಂದ ಶೆನ್ ಸುಸ್ತಾಗಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories